ಬಾರಿ ದಿನಗಳಿಂದ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಟೆಲಿಕಾಂ ಸಂಸ್ಥೆಗಳಿಗೆ ಬ್ರೇಕ್ ಹಾಕಿದ TRAI.ಗ್ರಾಹಕರಿಗೆ ಸಿಹಿ ಸುದ್ದಿ. ಏನು ಗೊತ್ತೇ??

ಬಾರಿ ದಿನಗಳಿಂದ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಟೆಲಿಕಾಂ ಸಂಸ್ಥೆಗಳಿಗೆ ಬ್ರೇಕ್ ಹಾಕಿದ TRAI.ಗ್ರಾಹಕರಿಗೆ ಸಿಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಟೆಲಿಕಾಂ ಸಂಸ್ಥೆಗಳಾಗಿರುವ ಏರ್ಟೆಲ್ ಜಿಯೋ ವೊಡಾಫೋನ್ ಐಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳು ಬೆಲೆ ಏರಿಕೆಯ ಬಿಸಿ ಎಂದು ತಮ್ಮ ಗ್ರಾಹಕರಿಗೆ ನೀಡಿದೆ. ಮೊದ ಮೊದಲಿಗೆ ಜಿಯೋ ಸೇರಿದಂತೆ ಕೆಲವೊಂದು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಅತ್ಯಂತ ಉನ್ನತ ಮಟ್ಟದ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.

ಆದರೆ ಯಾವಾಗ ಗ್ರಾಹಕರು ಹೆಚ್ಚಿನ ಮಟ್ಟದಲ್ಲಿ ಅವರ ಸಂಸ್ಥೆಯ ಸೇವೆಗಳನ್ನು ಬಳಸಲು ಪ್ರಾರಂಭಿಸಿದರೋ ಆವಾಗಿನಿಂದ ಸಂಸ್ಥೆಗಳು ಸೇವೆಗಳ ದರವನ್ನು ಹೆಚ್ಚಿಸಿದ್ದಾರೆ. ಇದು ಕೇವಲ ಒಂದು ಸಂಸ್ಥೆಯ ವಿಚಾರ ಮಾತ್ರವಲ್ಲದೆ ಬಹುತೇಕ ಎಲ್ಲಾ ಸಂಸ್ಥೆಗಳು ಕೂಡ ಸೇವೆಯನ್ನು ಹೆಚ್ಚಿಸಿದ್ದರಿಂದ ಗ್ರಾಹಕರು ಪೀಕಲಾಟಕ್ಕೆ ಸಿಕ್ಕಿದ್ದಾರೆ. ಇಷ್ಟು ಮಾತ್ರವಲ್ಲದೆ ಇತ್ತೀಚಿಗೆ ಟೆಲಿಕಾಂ ಸಂಸ್ಥೆಗಳು ತಂದಿರುವ ಹಲವಾರು ಬದಲಾವಣೆಗಳು ಕೂಡ ಗ್ರಾಹಕರಿಗೆ ಅದರಲ್ಲೂ ಮಧ್ಯಮ ವರ್ಗದ ಕುಟುಂಬದಿಂದ ಟೆಲಿಕಾಂ ಸೇವೆಯನ್ನು ಬಳಸುತ್ತಿರುವ ಗ್ರಾಹಕರಿಗೆ ಸಾಕಷ್ಟು ಕಷ್ಟವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಈಗ ಇಂತಹ ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಂತಸದ ಸುದ್ದಿಯನ್ನು ನೀಡಿದೆ. ಹಾಗಿದ್ದರೆ ಆ ಸಂತಸದ ಸುದ್ದಿ ಯಾವುದು ಅದರಿಂದ ಗ್ರಾಹಕರಿಗೆ ಏನು ಪ್ರಯೋಜನ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ನಿಮಗೆಲ್ಲ ಗೊತ್ತಿರಬಹುದು ಪ್ರತಿಯೊಂದು ಟೆಲಿಕಾಂ ಸಂಸ್ಥೆಗಳು ಒಂದು ತಿಂಗಳ ವ್ಯಾಲಿಡಿಟಿ ಹೆಸರನ್ನು ಹೇಳಿ ಕೇವಲ 28 ದಿನಗಳಿಗೆ ಮಾತ್ರ ವ್ಯಾಲಿಡಿಟಿ ಇರುವಂತೆ ಮಾಡುತ್ತಿದ್ದರು. ಇದರಿಂದ ವರ್ಷಕ್ಕೆ ತಿಂಗಳಿಗೆ ಒಮ್ಮೆ ರಿಚಾರ್ಜ್ ಮಾಡುವವರಿಗೆ ವರ್ಷಕ್ಕೆ 13 ಬಾರಿ ರಿಚಾರ್ಜ್ ಮಾಡಬೇಕಾಗಿತ್ತು. ಈಗ ಪ್ರಾಧಿಕಾರದ ಆದೇಶದಂತೆ ಇನ್ನು ಮುಂದೆ ಕೇವಲ 30 ದಿನಗಳ ವ್ಯಾಲಿಡಿಟಿ ಗೆ ಮಾತ್ರ ಟೆಲಿಕಾಂ ಸಂಸ್ಥೆಗೆ ನೀಡಲು ಅವಕಾಶ ಎಂಬುದಾಗಿ ಹೇಳಿದೆ. ಒಂದು ತಿಂಗಳು ರಿಚಾರ್ಜ್ ಪ್ಲಾನ್ ಪ್ರಕಾರ ವರ್ಷಕ್ಕೆ 12 ರಿಚಾರ್ಜ್ ಮಾಡಿದರೆ ಮಾತ್ರ ಸಾಕಾಗುತ್ತದೆ. ಆದರೆ ಟೆಲಿಕಾಂ ಸಂಸ್ಥೆಗಳು ಒಂದು ತಿಂಗಳ ಹೆಸರನ್ನು ಹೇಳಿ 28 ದಿನಗಳ ಹಾಗೂ 24 ದಿನಗಳ ರಿಚಾರ್ಜ್ ಪ್ಲಾನ್ ಅನ್ನು ವ್ಯಾಲಿಡಿಟಿ ಪ್ಯಾಕ್ ಅನ್ನಾಗಿ ನೀಡುತ್ತಿದ್ದರು. ಈಗ ಪ್ರಾಧಿಕಾರದ ಆದೇಶದ ಮೇರೆಗೆ ಇದು ಸರಿಯಾದರೆ ಖಂಡಿತವಾಗಿ ಪ್ರೇಕ್ಷಕರಿಗೆ ನೆಮ್ಮದಿಯ ನಿಟ್ಟಿಸಿರು ಬಿಡಬಹುದಾಗಿದೆ.