ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೆಲವು ದಿನಗಳ ಹಿಂದಷ್ಟೇ ಟಾಪ್ ನಟಿಯಾಗಿ ಮಿಂಚುತ್ತಿದ್ದ ಪೂಜಾ ಹೆಗ್ಡೆ ರವರಿಗೆ ಆಫರ್ ಗಳೇ ಬರುತ್ತಿಲ್ಲ, ಕಾರಣವೇನು ಗೊತ್ತೇ?? ಅದೊಂದು ನಿರ್ಧಾರದಿಂದ ಆಫರ್ಸ್ ಕಳೆದುಕೊಂಡ ಪೂಜಾ.

ಕೆಲವು ದಿನಗಳ ಹಿಂದಷ್ಟೇ ಟಾಪ್ ನಟಿಯಾಗಿ ಮಿಂಚುತ್ತಿದ್ದ ಪೂಜಾ ಹೆಗ್ಡೆ ರವರಿಗೆ ಆಫರ್ ಗಳೇ ಬರುತ್ತಿಲ್ಲ, ಕಾರಣವೇನು ಗೊತ್ತೇ?? ಅದೊಂದು ನಿರ್ಧಾರದಿಂದ ಆಫರ್ಸ್ ಕಳೆದುಕೊಂಡ ಪೂಜಾ.

65

ನಮಸ್ಕಾರ ಸ್ನೇಹಿತರೇ ನಮ್ಮ ಮಂಗಳೂರು ಮೂಲದ ಹುಡುಗಿ ಆಗಿರುವ ಪೂಜಾ ಹೆಗ್ಡೆ ಅವರು ನಿಮಗೆಲ್ಲ ಗೊತ್ತಿರುವ ಹಾಗೆ ಬಾಲಿವುಡ್ ನ ಹೃತಿಕ್ ರೋಷನ್ ರವರ ಮೊಹೆಂಜೋದಾರೋ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಾರೆ. ಇದಾದ ನಂತರ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗಗಳಲ್ಲಿ ಕೂಡ ಬಹುಬೇಡಿಕೆಯ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಪೂಜಾ ಹೆಗ್ಡೆ ಅವರು ಕಾಣಿಸಿಕೊಂಡಿದ್ದಾರೆ.

ಪೂಜಾ ಹೆಗಡೆ ಹಾಗೂ ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ರಾಧೇಶ್ಯಾಮ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮಚರಣ್ ನಟನೆಯ ಆಚಾರ್ಯ ಚಿತ್ರದಲ್ಲಿ ಕೂಡ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇನ್ನು ತಮಿಳು ಚಿತ್ರರಂಗಕ್ಕೆ ಬರುವುದಾದರೆ ತಮಿಳು ಚಿತ್ರರಂಗದ ತಲಪತಿ ವಿಜಯ್ ರವರ ಮುಂದಿನ ಬಹುನಿರೀಕ್ಷಿತ ಚಿತ್ರವಾಗಿರುವ ಬೀಸ್ಟ್ ನಲ್ಲಿ ಕೂಡ ಪೂಜಾ ಹೆಗ್ಡೆ ಯವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವೆಲ್ಲಾ ಪೂಜಾರ್ ಅವರ ಕೈಯಲ್ಲಿರುವ ಸದ್ಯದ ಸಿನಿಮಾಗಳು. ಇವುಗಳನ್ನು ಬಿಟ್ಟರೆ ಈಗ ಬೇರೆ ಯಾವ ಸಿನಿಮಾಗಳು ಕೂಡ ಪೂಜಾ ರವರ ಕೈಯಲ್ಲಿ ಇಲ್ಲ.

ಹಾಗಿದ್ರೆ ಅವರ ಬೇಡಿಕೆ ಅಥವಾ ಅವಶ್ಯಕತೆ ಚಿತ್ರರಂಗಕ್ಕೆ ಕಮ್ಮಿ ಆಯ್ತಾ ಎಂದು ನೀವು ಕೇಳಬಹುದು. ಕಾರಣ ಬೇರೇನೆ ಇದೆ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಪೂಜಾ ಹೆಗ್ಡೆಯವರು ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅವರು ಪ್ರತಿ ಸಿನಿಮಾಗೆ ಬರೋಬ್ಬರಿ ಮೂರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಹೀಗಾಗಿ ನಿರ್ಮಾಪಕರಿಗೆ ಅವರ ಸಂಭಾವನೆಯನ್ನು ನೀಡಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಪೂಜಾ ಹೆಗ್ಡೆ ಅವರಿಗೆ ಯಾವುದೇ ಹೊಸ ಸಿನಿಮಾಗಳು ಈಗ ಹುಡುಕಿಕೊಂಡು ಬರುತ್ತಿಲ್ಲ. ಇಂದಿಗೂ ಕೂಡ ಪೂಜಾ ಹೆಗ್ಡೆ ರವರಿಗೆ ಪ್ರತಿಯೊಂದು ಭಾಷೆಗಳಲ್ಲಿ ಅಭಿಮಾನಿಗಳಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.