ಕರುನಾಡ ವಾಣಿ
ಇದು ನಿಮ್ಮ ಧ್ವನಿ

10ನೇ ತರಗತಿ ಯನ್ನು ಶೇಕಡಾ 50 % ಅಂಕ ಪಡೆದು ಪಾಸ್ ಮಾಡಿದ್ದರೇ ಸಾಕು, ಪರೀಕ್ಷೆ ಇಲ್ಲದೆ ಸರ್ಕಾರಿ ಉದ್ಯೋಗ. ಏನು ಮಾಡ್ಬೇಕು ಗೊತ್ತೇ??

40

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ 10ನೇ-12ನೇ ತರಗತಿ ಪಾಸಾಗಿದ್ದವರು, ಸರ್ಕಾರಿ ನೌಕರಿಗಾಗಿ ಹಂಬಲಿಸುತ್ತಿರುತ್ತಾರೆ. ಆದರೆ ಡಿಗ್ರಿ ಓದಿದವರಿಗೆ ಸಿಲುಕುವಷ್ಟು ಸುಲಭವಾಗಿ 10-12 ತರಗತಿ ಪಾಸಾದವರಿಗೆ ಸರ್ಕಾರಿ ಕೆಲಸ ಸಿಗುವುದು ಕಷ್ಟ. ಆದರೆ ಸರ್ಕಾರಿ ಹುದ್ದೆಗಳು ಈಗ 10-12 ತರಗತಿ ಪಾಸಾದವರಿಗೂ ಲಭ್ಯ. ಈ ಬಗ್ಗೆ ಇಲ್ಲಿದೆ ಸರಿಯಾದ ಮಾಹಿತಿ. ಹೌದು, ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಕೆಲವು ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದ್ದು, 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇಲ್ಲಿ ಒಟ್ಟು 307 ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಜನವರಿ 16 ರಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ಜನವರಿ 31, 2022 ರವರೆಗೆ ಮುಂದುವರೆಯಲಿದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ ತೇರ್ಗಡೆ ಹೊಂದಿದ ಸರ್ಟಿಪಿಕೇಟ್ ಹೊಂದಿರಬೇಕು. ಇದರೊಂದಿಗೆ ಭಾರಿ ಮೋಟಾರು ವಾಹನಗಳ ಪರವಾನಿಗೆ ಪತ್ರವೂ ಇರಬೇಕು. ಇನ್ನು 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸುವಂತಿಲ್ಲ.

ದೈಹಿಕ ಹಾಜರಾತಿ ಮೊದಲಾದ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಇದಲ್ಲದೇ ಹತ್ತನೇ ತರಗತಿ ಪಾಸಾದವರಿಗೆ ರೈಲ್ವೇಯಲ್ಲಿ ಉದ್ಯೋಗಾವಕಾಶಗಳಿವೆ ಸೆಂಟ್ರಲ್ ರೈಲ್ವೆ 2422 ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿದೆ. 10 ನೇ ತರಗತಿಯಲ್ಲಿ 50% ಅಂಕ ಹೊಂದಿರುವ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಆದೇಶ ನೀಡಿದೆ. ಅಭ್ಯರ್ಥಿಯು ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ 50% ಅಂಕಗಳೊಂದಿಗೆ 10ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೋಯಲ್(coal) ಇಂಡಿಯಾ ವೆಬ್ ಸೈಟ್ ಗೆ ಭೇಟಿ ನೀಡಿ.

Get real time updates directly on you device, subscribe now.