ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡ ಕಿರುತೆರೆಯಲ್ಲಿ ಆರಂಭವಾಗಿರುವ ಮೂರು ಶೋ ಗಳಲ್ಲಿ ನಂಬರ್ ಒನ್ ಸ್ಥಾನ ಪಡೆದದ್ದು ಯಾರು ಗೊತ್ತೇ?? ಯಾವ ಟಾಪ್ ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಗಳಲ್ಲಿ ಸಾಕಷ್ಟು ಹೊಸ ಹೊಸ ಕಾರ್ಯಕ್ರಮಗಳು ಪ್ರಸಾರವಾಗಲು ಪ್ರಾರಂಭವಾಗಿದ್ದು ಕಿರುತೆರೆಯ ಪ್ರೇಕ್ಷಕರಿಗೆ ಮನೋರಂಜನೆಯ ಮಹಾಪೂರವನ್ನೇ ತಂದುಕೊಟ್ಟಿವೆ. ಹೌದು ಗೆಳೆಯರೇ ಕೇವಲ ಧಾರವಾಹಿಗಳ ನಷ್ಟೇ ಮಾತ್ರವಲ್ಲದೆ ಕನ್ನಡ ಕಿರುತೆರೆಯ ಪ್ರೇಕ್ಷಕರು ಸ್ಪೆಷಲ ರಿಯಾಲಿಟಿ ಶೋ ಹಾಗೂ ಸ್ಪರ್ಧಾ ಕಾರ್ಯಕ್ರಮಗಳನ್ನು ಕೂಡ ಎಂಜಾಯ್ ಮಾಡುತ್ತಾರೆ. ಅದರಲ್ಲೂ ಇತ್ತೀಚಿಗಷ್ಟೇ ಕನ್ನಡ ಕಿರುತೆರೆಯ ವಾಹಿನಿಗಳಲ್ಲಿ 3 ಹೊಚ್ಚಹೊಸ ಕಾರ್ಯಕ್ರಮಗಳು ಪ್ರಸಾರವಾಗಲು ಆರಂಭವಾಗಿದ್ದವು.

ಅವುಗಳೆಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ, ಲೂಸ್ ಮಾದ ಯೋಗಿ ರವರ ಗಾನ ಬಜಾನ ಕಾರ್ಯಕ್ರಮ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮ. ಈ ಮೂರು ಕಾರ್ಯಕ್ರಮದಲ್ಲಿ ಗೆದ್ದವರು ಯಾರು ಎನ್ನುವುದರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಯಾಕೆಂದರೆ ಮೂರು ಕಾರ್ಯಕ್ರಮಗಳು ಬಹುತೇಕ ಒಂದೇ ಸಮಯದಲ್ಲಿ ಪ್ರಾರಂಭವಾಗಿದ್ದು. ಟಿವಿ ರೇಟಿಂಗ್ ಮೂಲಕ ಅತ್ಯಂತ ಹೆಚ್ಚು ರೇಟಿಂಗ್ ಪಡೆದವರನ್ನು ವಿಜೇತರನ್ನಾಗಿ ಗುರುತಿಸಲಾಗುತ್ತದೆ. ಹಾಗಿದ್ದರೆ ಈ ಮೂರು ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚಿನ ಟಿವಿಆರ್ ಪಡೆದವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಗೋಲ್ಡನ್ ಸ್ಟಾರ್ ಗಣೇಶ್ ರವರ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಮೊದಲ ಲಾಂಚಿಂಗ್ ವಾರದಲ್ಲಿ 4.6 ಟಿವಿಆರ್ ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಶರಣ್ ತರುಣ್ ಸುಧೀರ್ ಹಾಗೂ ಪ್ರೇಮ್ ರವರು ಆಗಮಿಸಿದ್ದರು. ಇನ್ನು ವಿಜಯರಾಘವೇಂದ್ರ ಮೇಘನಾರಾಜ್ ಮೊದಲಾದವರು ನಡೆಸಿಕೊಡುವ ಕಾರ್ಯಕ್ರಮ ವಾಗಿರುವ ಡ್ಯಾನ್ಸ್ ಚಾಂಪಿಯನ್ 3.9 ಟಿವಿಆರ್ ಅನ್ನು ಮೊದಲವಾರದಲ್ಲಿ ಪಡೆದುಕೊಂಡಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಗಾನ ಬಜಾನ ಕಾರ್ಯಕ್ರಮ ಪಡೆದಿರುವ ಟಿವಿಆರ್ ರೇಟಿಂಗ್ ಕೇವಲ 1.5. ಅಂದರೆ ಮೊದಲ ವಾರದ ಲೆಕ್ಕಾಚಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರವರ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮಗಳು ಹೇಗೆ ಜನರಿಗೆ ಇನ್ನಷ್ಟು ಇಷ್ಟವಾಗುತ್ತದೆ ಎಂಬುದನ್ನು ನೋಡಬೇಕಾಗಿದೆ‌.

Get real time updates directly on you device, subscribe now.