ಕೊನೆಗೂ ಅಧಿಕೃತವಾಗಿ ತನ್ನ ಹೆಸರನ್ನು ಬಹಿರಂಗ ಪಡಿಸಿದ ಲಕ್ನೋ ಐಪಿಎಲ್ ತಂಡ ಹೆಸರೇನಂತೆ ಗೊತ್ತೇ??

ಕೊನೆಗೂ ಅಧಿಕೃತವಾಗಿ ತನ್ನ ಹೆಸರನ್ನು ಬಹಿರಂಗ ಪಡಿಸಿದ ಲಕ್ನೋ ಐಪಿಎಲ್ ತಂಡ ಹೆಸರೇನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಭಾರಿಯ ಐಪಿಎಲ್ ಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿರುವುದು ನಿಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಲಕ್ನೋ ಹಾಗೂ ಅಹಮದಾಬಾದ್ ಐಪಿಎಲ್ ತಂಡಗಳು ಹೊಸದಾದ ಫ್ರಾಂಚೈಸಿಗಳಾಗಿವೆ. ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ತಾವು ಹರಾಜಿಗಿಂತ ಮುಂಚೆ ಖರೀದಿಸಿದ ಮೂವರು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್ ನಾಯಕರಾದರೇ, ಅಹಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಅಹಮದಾಬಾದ್ ತಂಡ ರಶೀದ್ ಖಾನ್ ರವರನ್ನು ೧೫ ಕೋಟಿಗೆ ಹಾಗೂ ಶುಭಮ್ ಗಿಲ್ ರವರನ್ನು ಖರೀದಿ ಮಾಡಿದೆ, ಇನ್ನು ಲಕ್ನೋ ತಂಡ ರವಿ ಬಿಶ್ನೋಯ್ ಹಾಗೂ ಮಾರ್ಕ್ ಸ್ಟೋನಿಸ್ ರವರನ್ನು ಖರೀದಿ ಮಾಡಿದೆ.

ಈಗ ಮುಂದುವರೆದು ಲಕ್ನೋ ತಂಡ ತನ್ನ ಲೋಗೋ ಹಾಗೂ ಫ್ರಾಂಚೈಸಿ ಹೆಸರನ್ನು ಬಿಡುಗಡೆ ಮಾಡಿದೆ. ಲಕ್ನೋ ತಂಡದ ಹೊಸ ಹೆಸರು ಲಕ್ನೋ ಸೂಪರ್ ಜೈಂಟ್ಸ್ ಎಂದಾಗಿದೆ. ಇನ್ನು ಜೆರ್ಸಿ ಹಾಗೂ ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಲಕ್ನೋ ತಂಡ ಉತ್ತರ ಪ್ರದೇಶದ ತಂಡವಾಗಿದ್ದು, ಉತ್ತರ ಪ್ರದೇಶ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಅಲ್ಲಿ ಯಾವ ಐಪಿಎಲ್ ಫ್ರಾಂಚೈಸಿ ಇಲ್ಲದ ಕಾರಣ, ಲಕ್ನೋ ಸೂಪರ್ ಜೈಂಟ್ಸ್ ಗೆ ಹೆಚ್ಚು ಅನುಕೂಲ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಹಳಷ್ಟು ದಿನಗಳು ಕಾಯುತ್ತಿದ್ದ ಅಭಿಮಾನಿಗಳಿಗೆ ಲಕ್ನೋ ತಂಡ ಹೆಸರು ಬಿಡುಗಡೆ ಮಾಡಿ ಕೂತುಹಲ ತಣಿಸಿದೆ.ಇನ್ನು ಅಹಮದಾಬಾದ್ ತಂಡ ತನ್ನ ಹೆಸರು ಬಿಡುಗಡೆ ಮಾಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.