ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗ್ರಹಗಳ ರಾಜ ಸೂರ್ಯ ದೇವನು ಶನಿಯ ರಾಶಿಗೆ ಪ್ರವೇಶ ಮಾಡಲಿದ್ದಾನೆ 4 ರಾಶಿಗಳು ಪಡೆಯಲಿವೆ ಅಭೂತಪೂರ್ವ ಲಾಭ. ಯಾವ್ಯಾವು ಗೊತ್ತೇ??

66

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ಗ್ರಹ ಎನ್ನುವುದು ಒಂದು ರಾಶಿ ಬಿಟ್ಟು ಇನ್ನೊಂದು ರಾಶಿಗೆ ಪರಿವರ್ತನೆಯಾದಾಗ ಕೆಲವೊಂದು ರಾಶಿಗಳಿಗೆ ಶುಭವಾಗುತ್ತದೆ ಇನ್ನು ಕೆಲವು ರಾಶಿಗಳಿಗೆ ಅದು ಅಶುಭ ವಾಗುತ್ತದೆ. ಗ್ರಹಗಳ ರಾಜನಾಗಿರುವ ಸೂರ್ಯ ಶನಿಯ ರಾಶಿಯಾಗಿರುವ ಮಕರ ರಾಶಿಗೆ ಇದೇ ಜನವರಿ 14ರ ಮಕರ ಸಂಕ್ರಾಂತಿಯ ದಿನದಂದು ಕಾಲಿಟ್ಟಿದ್ದಾನೆ. ಫೆಬ್ರವರಿ 13 ರವರಗೆ ಸೂರ್ಯದೇವ ಇದೇ ರಾಶಿಯಲ್ಲಿ ಇರುತ್ತಾನೆ.

ಶಾಸ್ತ್ರದ ಪ್ರಕಾರ ಸೂರ್ಯದೇವನನ್ನು ಲಕ್ಷ್ಮಿ ಪ್ರಾಪ್ತಿ ಕಾರಕ ಸಾಹಸ ಪ್ರತಿಭೆ ನೇತೃತ್ವದ ಗುಣ ಸನ್ಮಾನ ಆತ್ಮವಿಶ್ವಾಸ ಖುಷಿ ದಯಾಳು ಸತ್ಯ ಜೀವನ ಶಕ್ತಿ ಪ್ರಾಮಾಣಿಕತೆ ಹಾಗೂ ಇನ್ನಿತರ ಒಳ್ಳೆಯ ಅಂಶಗಳ ಕಾರಕನಾಗಿ ಕರೆಯಲಾಗುತ್ತದೆ. ಒಂದು ವೇಳೆ ಸೂರ್ಯ ಸಕಾರಾತ್ಮಕ ಸ್ಥಿತಿಯಲ್ಲಿ ನಿಮ್ಮ ಕುಂಡಲಿಯಲ್ಲಿ ಕೂತಿದ್ದರೆ ಖಂಡಿತವಾಗಿ ಇದರಿಂದ ಎಲ್ಲರಿಗೂ ಲಾಭವಿರುತ್ತದೆ. ಅದರಲ್ಲೂ ಇಂದಿನ ವಿಚಾರದಲ್ಲಿ ನಾವು ಇದರ ಪರಿಣಾಮದಿಂದಾಗಿ 4 ರಾಶಿಯವರಿಗೆ ಅವರು ಜೀವನದಲ್ಲಿ ಎಂದು ಕೂಡ ಕಾಣದಂತಹ ಯಶಸ್ಸನ್ನು ಪಡೆಯಲಿದ್ದಾರೆ ಎಂಬುದನ್ನು ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಆ 4 ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಸೂರ್ಯದೇವರ ಗೋಚರ ದಿಂದಾಗಿ ಸಾಕಷ್ಟು ಲಾಭವನ್ನು ಅನುಭವಿಸಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಲಿದ್ದೀರಿ. ರಾಜಕೀಯ ಕ್ಷೇತ್ರದಲ್ಲಿ ಕೂಡ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಅಥವಾ ಉತ್ತಮ ಪದವಿಯನ್ನು ಪಡೆಯಲಿದ್ದೀರಿ. ಮೇಷ ರಾಶಿಯವರ ಅಧಿಕಾರ ಗ್ರಹ ಮಂಗಳ. ಮಂಗಳ ಹಾಗೂ ಸೂರ್ಯನ ಸ್ನೇಹದಿಂದಾಗಿ ಈ ರಾಶಿಯವರಿಗೆ ತಂದೆಯವರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಸರಕಾರಿ ಕೆಲಸ ಕೂಡ ದೊರೆಯಬಹುದು ಮತ್ತು ನಿಮ್ಮ ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗುವಂತಹ ಸಾಧ್ಯತೆ ದಟ್ಟವಾಗಿದ್ದು ಬರುತ್ತದೆ.

ಸಿಂಹ ರಾಶಿ; ವಿಶೇಷವಾಗಿ ಈ ಸಂದರ್ಭದಲ್ಲಿ ಸಿಂಹರಾಶಿಯವರಿಗೆ ಸಾಕಷ್ಟು ಲಾಭಗಳಿವೆ. ಯಾಕೆಂದರೆ ಸಿಂಹರಾಶಿಯ ಅಧಿದೇವತೆ ಸೂರ್ಯದೇವ. ಹೀಗಾಗಿ ಸೂರ್ಯದೇವನ ಗೋಚರದಿಂದಾಗಿ ಸಿಂಹರಾಶಿಯವರಿಗೆ ಸಾಕಷ್ಟು ಲಾಭಗಳು ಒದಗಿಬರಲಿವೆ. ಸಿಂಹ ರಾಶಿಯವರಿಗೆ ಧನ ಯಾವಾಗ ಸಮಯಗಳು ಹತ್ತಿರ ಬರುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಯತ್ನಪಡುತ್ತಿರುವವರು ಕೊಂಚಮಟ್ಟಿಗೆ ಪರಿಶ್ರಮವನ್ನು ಪಟ್ಟರೆ ಅವರಂದುಕೊಂಡಂತೆ ಫಲಿತಾಂಶ ಅವರಿಗೆ ಸಿಗಲಿದೆ. ವ್ಯಾಪಾರದಲ್ಲಿ ದೊಡ್ಡಮಟ್ಟದ ಲಾಭ ಸಿಗಲಿದ್ದು ಯಾವುದಾದರೂ ಡೀಲ್ ಮಾಡಲು ಕೈ ಹಾಕಿದ್ದರೆ ಇದು ಒಳ್ಳೆಯ ಪ್ರಶಸ್ತ ಸಮಯ ಲಾಭ ಪಡೆಯಲು.

ವೃಶ್ಚಿಕ ರಾಶಿ; ಈ ಸಮಯದಲ್ಲಿ ವೃಶ್ಚಿಕರಾಶಿಯವರಿಗೆ ಸಾಹಸ ಹಾಗೂ ಪರಾಕ್ರಮದಲ್ಲಿ ವೃದ್ಧಿಯಾಗಲಿದೆ. ಇಲ್ಲಿ ಕೂಡ ಮಂಗಳ ನ ಅಧಿಪತ್ಯ ಇರುವುದರಿಂದ ಸೂರ್ಯದೇವನ ಆಗಮನದಿಂದ ಇವರ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಗಳು ಕಾಣಿಸಲಿವೆ. ನಿಮ್ಮ ಸಹೋದರ ಹಾಗೂ ಸಹೋದರಿಯರನ್ನು ಒಳಗೊಂಡಂತಹ ಹೊಸ ಬ್ಯುಸಿನೆಸ್ ಕುರಿತಂತೆ ಈ ಸಂದರ್ಭದಲ್ಲಿ ನೀವು ಯೋಚಿಸಬಹುದಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಕೂಡ ನೀವು ಪರಿಶ್ರಮಪಟ್ಟರೆ ನೀವಂದು ಕೊಂಡಂತಹ ಫಲಿತಾಂಶವು ನಿಮ್ಮನ್ನು ಹುಡುಕಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಧನು ರಾಶಿ; ರಾಶಿಯಲ್ಲಿ ಸೂರ್ಯದೇವನ ಆಗಮನದಿಂದಾಗಿ ಸಾಕಷ್ಟು ಲಾಭಗಳಿಗೆ ನೀವು ಅಧಿಪತಿ ಆಗಲಿದ್ದೀರಿ. ನಿಮ್ಮ ಜೀವನದಲ್ಲಿ ಆರ್ಥಿಕತೆ ಕೂಡ ಸುಧಾರಿಸಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶೀಘ್ರದಲ್ಲಿ ಶುಭಸಮಾಚಾರ ಕೇಳಿಬರಲಿದೆ. ಹಲವಾರು ಸಮಯಗಳಿಂದ ನೀವು ಮನಸ್ಸಿನಲ್ಲಿ ಇಚ್ಚೆ ಮಾಡಿಕೊಂಡು ಬಂದಂತಹ ಕೆಲಸವು ಈ ಸಂದರ್ಭದಲ್ಲಿ ಪೂರ್ಣಗೊಳ್ಳಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದಾರೆ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.