ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ, ಶಾರೂಕ್ ಖಾನ್, ಆವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು. ಯಾಕೆ ಗೊತ್ತೇ??

ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ, ಶಾರೂಕ್ ಖಾನ್, ಆವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ 2022 ರಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿವೆ. ಎಲ್ಲವೂ ಅಂದುಕೊಂಡಂತೆ ನಡೆದರೇ, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಧ್ಯೆ ಹರಾಜಿಗೆ ಸೇರ್ಪಡೆಯಾಗಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಆಟಗಾರರ ಮೂಲಬೆಲೆಯನ್ನು ಸಹ ಘೋಷಿಸಿದೆ.

2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ, 20 ಲಕ್ಷ ಹೀಗೆ ಐದು ಪ್ರಕಾರಗಳಲ್ಲಿ ಆಟಗಾರರ ಮೂಲಬೆಲೆಯನ್ನು ನಿಗದಿಪಡಿಸಿದೆ. ಆದರೇ ಬಿಸಿಸಿಐ ನಿಗದಿಪಡಿಸಿರುವ ಈ ಮೂಲಬೆಲೆ ನ್ಯಾಯಯುತವಾಗಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟುಗಳ ಸುರಿಮಳೆಗೈಯುತ್ತಿದ್ದಾರೆ. ಕಳೆದ ಭಾರಿಯ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಏರಡನೇ ಸ್ಥಾನ ಪಡೆದ ಆವೇಶ್ ಖಾನ್ ಹಾಗೂ ತಮಿಳುನಾಡಿನ ಪಿಂಚ್ ಹಿಟ್ಟರ್ ಬ್ಯಾಟ್ಸಮನ್ ಶಾರೂಖ್ ಖಾನ್ ರನ್ನು ಕೇವಲ 20 ಲಕ್ಷ ರೂ ಮೂಲ ಬೆಲೆಗೆ ನಿಗದಿಪಡಿಸಿದೆ.

ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇವರು ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದ ಆಟಗಾರರು. ಇವರಿಗೆ ಇಷ್ಟೊಂದು ಕಡಿಮೆ ಮೂಲಬೆಲೆ ನಿಗದಿ ಮಾಡಿರುವುದು, ಆಟಗಾರರಿಗೆ ಮಾಡಿರುವ ಅವಮಾನವಾಗಿದೆ ಎಂದು ಹೇಳಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ರವರಿಗೆ 2 ಕೋಟಿ ಮೂಲಬೆಲೆ ಗುರುತಿಸಲಾಗಿದೆ. ಮೂಲಬೆಲೆ ಜಾಸ್ತಿಯಾದರೇ ಕೆಲವೊಮ್ಮೆ ಆಟಗಾರರು ಅನಸೋಲ್ಡ್ ಆಗುವ ಸಂಭವ ಸಹ ಇದೆ. ಇದರ ನಡುವೆ ಮನೀಶ್ ಪಾಂಡೆಯಂತಹ ಸ್ಟಾರ್ ಆಟಗಾರರಿಗೆ 1 ಕೋಟಿ ಮೂಲ ಬೆಲೆ ನಿಗದಿಪಡಿಸಿರುವುದು ಸಹ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ‌‌.