ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲ್ಲಾ ಊಹಾಪೋಹಗಳಿಗೂ ತೆರೆ ಏಳೆದ ಬಿಸಿಸಿಐ ಅಧಿಕಾರಿ, ಭಾರತದ ಟೆಸ್ಟ್ ಕ್ರಿಕೇಟ್ ತಂಡದ ನೂತನ ನಾಯಕ ಯಾರು ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಧಿಡೀರ್ ಎಂದು ಟೆಸ್ಟ್ ಕ್ರಿಕೇಟ್ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದಾಗ ಉದ್ಭವವಾದ ಪ್ರಶ್ನೆ ಎಂದರೇ ಅದು ಟೆಸ್ಟ್ ಕ್ರಿಕೇಟ್ ತಂಡದ ಮುಂದಿನ ನಾಯಕ ಯಾರು ಎಂದು. ಕೆಲವು ಆಟಗಾರರು ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೇಟ್ ತಂಡದ ನಾಯಕನ ಸ್ಥಾನಕ್ಕೆ ಸೂಕ್ತ ಆಯ್ಕೆ ಎಂದು ಘೋಷಿಸಿದರು. ಇನ್ನು ಕೆಲವರು ಪಾಕೇಟ್ ಡೈನಮೋ ರಿಷಭ್ ಪಂತ್ ರವರಿಗೆ ಇನ್ನು 23 ವರ್ಷ. ಅವರು ಟೆಸ್ಟ್ ಕ್ರಿಕೇಟ್ ತಂಡದ ನಾಯಕನ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ ಎಂದು ರಿಷಭ್ ಪಂತ್ ರವರ ಗುಣಗಾನ ಮಾಡಿದ್ದರು.

ಈ ನಡುವೆ ಇನ್ನು ಕೆಲವು ಮಾಜಿ ಆಟಗಾರರು ವೇಗಿ ಬೂಮ್ ಬೂಮ್ ಬುಮ್ರಾ ಪರ ಧ್ವನಿ ಎತ್ತಿದ್ದರು. ಆದರೇ ಇದೆಲ್ಲದೆರ ನಡುವೆ ಬಿಸಿಸಿಐ ಮಾತ್ರ ತನಗೂ ಹಾಗೂ ಇದಕ್ಕೂ ಸಂಭಂದವೇ ಇಲ್ಲವೆಂದು ಸುಮ್ಮನೇ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಾ ಸಮಯ ಕಳೆಯುತ್ತಿತ್ತು. ಆದರೇ ಈಗ ಸಿದ್ದ ಉತ್ತರದೊಂದಿಗೆ ಬಂದು ತನ್ನ ಖಡಕ್ ಅಭಿಪ್ರಾಯವನ್ನು ತಿಳಿಸಿದೆ. ಬನ್ನಿ ಟೆಸ್ಟ್ ಕ್ರಿಕೇಟ್ ತಂಡದ ನಾಯಕನ ಆಯ್ಕೆ ಬಗ್ಗೆ ಬಿಸಿಸಿಐ ಹೇಳಿರುವುದು ಏನು ಎಂಬುದನ್ನ ತಿಳಿದುಕೊಳ್ಳೋಣ.

ನಾಯಕನ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಟೆಸ್ಟ್ ಕ್ರಿಕೇಟ್ ನಲ್ಲಿ ತಂಡದ ಉಪನಾಯಕರಾಗಿದ್ದ ರೋಹಿತ್ ಶರ್ಮಾರವರೇ, ಮುಂದಿನ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ. ಅಲ್ಲಿಯ ತನಕ ಎಲ್ಲರೂ ಸಮಾಧಾನವಾಗಿರಿ ಎಂದು ಎಂದಿದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಏಳೆದಿದ್ದಾರೆ. ಅಲ್ಲಿಗೆ ಬಹಳಷ್ಟು ಕುತೂಹಲ ಮೂಡಿಸಿದ್ದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ.

ಅಂದರೇ ಹಿಟ್ ಮ್ಯಾನ್ ರೋಹಿತ್ ಶರ್ಮಾರವರೇ ಭಾರತದ ಎಲ್ಲಾ ಮಾದರಿಯ ಕ್ರಿಕೇಟ್ ನ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಹಿತಾ, ಫೆಬ್ರವರಿ 6 ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ತಂಡವನ್ನು ಕೂಡಿಕೊಳ್ಳುವ ನೀರಿಕ್ಷೆ ಇದೆ. ಅಲ್ಲಿಗೆ ಟೀಮ್ ಇಂಡಿಯಾದಲ್ಲಿ ಇನ್ನು ಮುಂದೆ ರೋಹಿತ್ ಯುಗ ಆರಂಭವಾಗಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.