ಆರಂಭವಾಗುತ್ತಿದೆ ಶುಕ್ರನ ವಕ್ರ ನಡೆ, ಈ ಸ್ಥಾನ ಪಲ್ಲಟದಿಂದ ಯಾರ್ಯಾರ ಮೇಲೆ ಏನೆಲ್ಲಾ ಪ್ರಭಾವ ಗೊತ್ತೇ?? ಯಾರ್ಯಾರಿಗೆ ಹೆಚ್ಚು ಲಾಭ ಗೊತ್ತೇ??

ಆರಂಭವಾಗುತ್ತಿದೆ ಶುಕ್ರನ ವಕ್ರ ನಡೆ, ಈ ಸ್ಥಾನ ಪಲ್ಲಟದಿಂದ ಯಾರ್ಯಾರ ಮೇಲೆ ಏನೆಲ್ಲಾ ಪ್ರಭಾವ ಗೊತ್ತೇ?? ಯಾರ್ಯಾರಿಗೆ ಹೆಚ್ಚು ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಯಾವುದೇ ಗ್ರಹ ರಾಶಿಯನ್ನು ಪರಿವರ್ತನೆ ಮಾಡಿದಾಗಲೆಲ್ಲ ಒಂದೋ ಒಳ್ಳೆಯದಾಗುತ್ತದೆ ಇಲ್ಲವೇ ಕೆಟ್ಟದಾಗುತ್ತದೆ. ಆದರೆ ಈ ಬಾರಿ ನಾವು ಹೇಳಲು ಹೊರಟಿರುವುದು ಮಂಗಳಗ್ರಹದ ಕುರಿತಂತೆ. ಡಿಸೆಂಬರ್ 30ರಂದು ಶುಕ್ರ ಗ್ರಹ ಧನು ರಾಶಿಯಲ್ಲಿ ಸ್ಥಾನಪಲ್ಲಟವನ್ನು ಮಾಡಿ ಜನವರಿ 26ರ ವರೆಗೆ ಕೂಡ ಅಲ್ಲೇ ಇರುತ್ತದೆ.

ಜನವರಿ 22ರಂದು ಮಕರ ರಾಶಿಗೆ ಕಾಲಿಡಲಿದ್ದಾರೆ. ಇದೇ ಸಂದರ್ಭದಲ್ಲಿ 29ರಂದು ಇದೇ ರಾಶಿಯಲ್ಲಿ ಶುಕ್ರ ಗ್ರಹ ತನ್ನ ನಡೆಯನ್ನು ವಕ್ರ ನಡೆಯನ್ನಾಗಿ ಬದಲಾಯಿಸಲಿದ್ದಾನೆ. ಈ ತರಹ ನಡೆಯನ್ನು ಬದಲಾಯಿಸುವುದರಿಂದಾಗಿ ಕೆಲವೊಂದು ರಾಶಿಯವರಿಗೆ ಒಳ್ಳೆಯದಾಗುತ್ತದೆ ಇನ್ನೂ ಕೆಲವು ರಾಶಿಯವರಿಗೆ ಕೆಟ್ಟದಾಗುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಹಾಗೂ ಯಾವ ರಾಶಿಯವರಿಗೆ ಕೆಟ್ಟದ್ದಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ; ಶುಕ್ರನ ವಕ್ರ ನಡೆಯು ಕೂಡ ಮೇಷ ರಾಶಿಯವರಿಗೆ ಶುಭವನ್ನು ತರಲಿದೆ. ಹಲವಾರು ದಿನಗಳಿಂದ ತನ್ನ ನೌಕರಿಯಲ್ಲಿ ಕಷ್ಟವನ್ನು ಹೊಂದಿದ್ದವರಿಗೆ ಕಷ್ಟ ಪರಿಹಾರವಾಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅದು ಸಂಪೂರ್ಣ ಯಶಸ್ವಿ ಆಗುತ್ತದೆ.

ವೃಷಭ; ವೃಷಭ ರಾಶಿಯವರಿಗೆ ಶುಕ್ರನ ವಕ್ರ ನಡೆ ಕಷ್ಟದಾಯಕವಾಗಿ ಪರಿಣಮಿಸಬಹುದು. ಇದರಿಂದಾಗಿ ವೃತ್ತಿ ಹಾಗೂ ವ್ಯಾಪಾರದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬಹುದು. ಆರೋಗ್ಯದ ಕುರಿತು ಜಾಗ್ರತೆ ವಹಿಸುವುದು ಉತ್ತಮ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಶತ್ರುಗಳಿಂದ ದೂರವಿರಿ ಅವರು ನಿಮಗಾಗಿ ನಷ್ಟವನ್ನು ಉಂಟು ಮಾಡಲು ಕಾಯುತ್ತಿರುತ್ತಾರೆ.

ಮಿಥುನ; ಮಿಥುನ ರಾಶಿಯವರಿಗೆ ವ್ಯವಸಾಯಕ್ಕೆ ಅತ್ಯಂತ ಉತ್ತಮವಾದ ಸಮಯ. ಈಗಾಗಲೇ ಮಿಥುನ ರಾಶಿಯವರ ಗ್ರಹ ವಾಗಿರುವ ಮಂಗಳನ ಉಪಸ್ಥಿತಿಯಲ್ಲಿ ಶುಕ್ರ ಸೇರಿದರೆ ಅವರ ಜೀವನ ಹಾಲು ಸಕ್ಕರೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮಲ್ಲಿರುವ ಪ್ರಾಮಾಣಿಕತೆ ಗುಣದಿಂದಾಗಿ ನಿಮ್ಮ ಕೆಲಸದಲ್ಲಿ ಕೂಡ ಪ್ರಗತಿಯನ್ನು ಕಾಣಲಿದ್ದೀರಿ.

ಕರ್ಕ; ಭಾಗ್ಯದ ಪೂರ್ಣ ಲಾಭ ಕರ್ಕರಾಶಿಯವರಿಗೆ ಸಿಗಲಿದ್ದು ವ್ಯಾಪಾರದಲ್ಲಿ ಉತ್ತಮ ಮಟ್ಟದ ಲಾಭವನ್ನು ಸಾಧಿಸಲಿದ್ದೀರಿ. ಆದರೆ ಹೂಡಿಕೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಉತ್ತಮ.

ಸಿಂಹ; ಶುಕ್ರನ ವಕ್ರ ನಡೆ ಎನ್ನುವುದು ಸಿಂಹರಾಶಿಯವರಿಗೆ ಪ್ರೇಮ ಹಾಗೂ ಶಿಕ್ಷಣದ ಕ್ಷೇತ್ರದಲ್ಲಿ ಸಿಹಿಸುದ್ದಿಯನ್ನು ಕೇಳುವಂತೆ ಮಾಡಲಿದೆ. ದಾಂಪತ್ಯ ಜೀವನದಲ್ಲಿ ಕೂಡ ಸುಖವನ್ನು ಅನುಭವಿಸಲು ಸಂತಾನ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಇವೆ. ಆದರೆ ಆರೋಗ್ಯದ ಕುರಿತಂತೆ ವಿಶೇಷವಾದ ಕಾಳಜಿಯನ್ನು ವಹಿಸಬೇಕು.

ಕನ್ಯಾ; ಇವರಿಗೂ ಕೂಡ ಈ ವಕ್ರ ನಡೆ ಎನ್ನುವುದು ಶುಭವನ್ನು ತರಲಿದೆ. ಹೊಸ ಮನೆ ಅಥವಾ ವಾಹನ ವನ್ನು ಖರೀದಿಸುವಂಥ ಯೋಗ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಖರ್ಚುಗಳು ಜಾಸ್ತಿಯಾಗಬಹುದು ಹೀಗಾಗಿ ಯಾವುದಕ್ಕೆ ಖರ್ಚು ಮಾಡಬೇಕೆಂಬುದನ್ನು ಯೋಚಿಸಿ ಖರ್ಚು ಮಾಡಿ.

ತುಲಾ; ತುಲಾ ರಾಶಿಯವರು ಆರೋಗ್ಯದ ಕುರಿತಂತೆ ಕೆಲಸದ ಕ್ಷೇತ್ರದ ಕುರಿತಂತೆ ಹಾಗೂ ತಮ್ಮ ಶತ್ರುಗಳ ಕುರಿತಂತೆ ಎಚ್ಚರಿಕೆಯನ್ನು ವಹಿಸಬೇಕಾಗಿರುವುದು ತುಂಬಾ ಅನಿವಾರ್ಯವಾಗಿದೆ.

ವೃಶ್ಚಿಕ; ಹಲವಾರು ವರ್ಷಗಳಿಂದ ಬರಬೇಕಿದ್ದ ಹಣವು ನಿಮ್ಮ ಕೈಸೇರಲಿದೆ. ಇಷ್ಟು ಮಾತ್ರವಲ್ಲದೆ ನಿಮಗೆ ಹಣದ ಹರಿವು ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿಮಗೆ ಸಿಗಲಿದೆ. ಇದರಿಂದಾಗಿ ನಿಮ್ಮ ಸಾಲಗಳನ್ನು ನೀವು ತೀರಿಸಿಕೊಳ್ಳಬಹುದಾಗಿದೆ.

ಧನು; ಧನುರಾಶಿಯವರಿಗೆ ಹಣವನ್ನು ಗಳಿಸುವಂತಹ ವಿವಿಧ ದಾರಿಗಳು ಸಿಗಲಿವೆ. ಹಠಾತ್ತನೆ ಹಣದ ಹರಿವು ಕೂಡ ಬರಬಹುದು. ಹಣದ ಕುರಿತಂತೆ ಯೋಚಿಸಬೇಕಾದ ಯಾವುದೇ ಅಗತ್ಯತೆ ಇಲ್ಲ ಆದರೆ ಎಚ್ಚರಿಕೆಯಿಂದ ವಾಹನವನ್ನು ಓಡಿಸಿ.

ಮಕರ; ತಮ್ಮ ಕಾರ್ಯಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಲು ಹಲವಾರು ಅವಕಾಶಗಳು ಸಿಗಲಿವೆ. ವ್ಯಾಪಾರ ಹಾಗೂ ವ್ಯವಸಾಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಉತ್ತಮ ದಿನಗಳು ಆರಂಭವಾಗಲಿದೆ. ಉತ್ತಮ ಕಾರ್ಯಕ್ಕಾಗಿ ಹಣ ಖರ್ಚಾಗಲಿದೆ. ಕೆಟ್ಟವರ ಸಂಗದಿಂದ ದೂರ ಇರುವುದು ಉತ್ತಮ.

ಕುಂಭ; ಈ ಸಮಯ ಎನ್ನುವುದು ಕುಂಭರಾಶಿಯವರಿಗೆ ಅನುಕೂಲವಾಗಿಲ್ಲ. ಹಣ ಸಂಪಾದನೆ ಕೂಡ ತಡವಾಗಬಹುದು. ಹೊಸ ನಿರ್ಧಾರದಿಂದ ಲಾಭ ಕಂಡುಕೊಳ್ಳಬಹುದು. ಶುಕ್ರನ ಆಶೀರ್ವಾದದಿಂದಾಗಿ ಹಲವಾರು ಭೌತಿಕ ಸುಖಗಳನ್ನು ನೀವು ಅನುಭವಿಸಬಹುದಾಗಿದೆ.

ಮೀನ; ಕೆಲಸದಲ್ಲಿ ಉತ್ತಮ ಮಟ್ಟದ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ಕೆಲಸದಲ್ಲಿ ಮಾಡಿರುವಂತಹ ಎಲ್ಲಾ ಪ್ರಯತ್ನಗಳು ಸಫಲವಾಗಲಿವೆ. ವ್ಯಾಪಾರದ ಸಂದರ್ಭದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಸರಿಯಾಗಿರಲಿ ಇಲ್ಲವಾದರೆ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ನೋಡಿದ್ರಲ್ಲ ಯಾವೆಲ್ಲ ರಾಶಿಯವರಿಗೆ ಒಳ್ಳೆಯದಾಗುವುದಿಲ್ಲ ಹಾಗೂ ಯಾವೆಲ್ಲ ರಾಶಿಯವರಿಗೆ ಒಳ್ಳೆಯದಾಗಲಿದೆ ಎಂಬುದರ ಕುರಿತಂತೆ. ಇದರಲ್ಲಿ ನಿಮ್ಮ ರಾಶಿ ಯಾವುದು ಕಾಮೆಂಟ್ ಮಾಡಿ.