ಬಿಜೆಪಿ ಅಧಿಕಾರದಲ್ಲಿ ಇರದೇ ಇದ್ದರೂ ಬಿಜೆಪಿ ಯನ್ನು ಕೈಬಿಡದ ಮಹಾರಾಷ್ಟ್ರ ಜನ. ಮಹಾವಿಕಾಸ್ ಮೈತ್ರಿಗೆ ಶಾಕ್. ನಡೆದ್ದದೇನು ಗೊತ್ತೇ??
ಬಿಜೆಪಿ ಅಧಿಕಾರದಲ್ಲಿ ಇರದೇ ಇದ್ದರೂ ಬಿಜೆಪಿ ಯನ್ನು ಕೈಬಿಡದ ಮಹಾರಾಷ್ಟ್ರ ಜನ. ಮಹಾವಿಕಾಸ್ ಮೈತ್ರಿಗೆ ಶಾಕ್. ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಹಾರಾಷ್ಟ್ರ ರಾಜ್ಯ ರಾಜಕೀಯ ಮತ್ತೊಂದಿಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ವಿಧಾನಸಭೆ ಫಲಿತಾಂಶ ಬಂದ ನಂತರ ಈ ರಾಜ್ಯದಲ್ಲಿ ಹಲವಾರು ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಯಿತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೇಸ್ , ಶಿವಸೇನೆ ಹಾಗೂ ಎನ್.ಸಿ.ಪಿ ಮಹಾ ವಿಕಾಸ್ ಆಘಾಡಿ ಎಂಬ ಮೈತ್ರಿಕೂಟ ರಚಿಸಿಕೊಂಡು ಅಧಿಕಾರ ನಡೆಸುತ್ತಿದೆ. ಈಗ ಆ ಆಘಾಡಿಗೆ ಬಹು ದೊಡ್ಡ ಆಘಾತವಾಗಿದ್ದು ಮಹಾರಾಷ್ಟ್ರ ಜನತೆ ಅಧೀಕೃತ ವಿರೋಧ ಪಕ್ಷದ ಪರ ಒಲವು ತೋರಿದ್ದಾರೆ.
ಹೌದು ಇತ್ತಿಚೆಗಷ್ಟೇ ನಡೆದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಒಟ್ಟು ಒಟ್ಟಾರೆಯಾಗಿ 106 ನಗರ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಇದರಲ್ಲಿ ಬಿಜೆಪಿಗೆ 384 ಸ್ಥಾನ ದೊರೆತು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತಾರೂಢ ಎನ್ ಸಿ ಪಿ 344, ಕಾಂಗ್ರೇಸ್ 316, ಶಿವಸೇನೆ 284 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೇ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಹಾ ವಿಕಾಸ ಆಘಾಡಿ ತಕ್ಕ ಯೋಜನೆಯೊಂದನ್ನ ಹಮ್ಮಿಕೊಂಡಿದೆ.
ಹೌದು ರಾಜ್ಯ ಸರ್ಕಾರದಲ್ಲಿ ಮೈತ್ರಿ ಮಾಡಿಕೊಂಡಂತೆ, ಸ್ಥಳೀಯ ಸಂಸ್ಥೆಯಲ್ಲಿಯೂ ಸಹ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಚಿಂತನೆ ನಡೆಸಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಲ್ಲಿಯೂ ಸಹ ಬಿಜೆಪಿ ಅಧಿಕಾರದಿಂದ ವಂಚಿತವಾಗುವ ಆತಂಕದಲ್ಲಿದೆ. ಆದರೂ ಕೂಡ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಆಡಳಿತ ಪಕ್ಷದ ಹಣ ಹಾಗೂ ತೋಳ್ಬಲದ ನಡುವೆಯೂ ಬಿಜೆಪಿಗೆ ಜನ ಮತ ಹಾಕಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.