ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತಕ್ಕ ಪ್ರವಾಸಕ್ಕೆ ಬಂದು ರಸ್ತೆ ಬದಿ ಹಣ್ಣು ತಿಂದು, ಅದೇ ಹಣ್ಣಿನಿಂದ ಕೋಟ್ಯಂತರ ವಹಿವಾಟು ನಡೆಸಿದ ವಿದೇಶಿ ಮಹಿಳೆ. ಹೇಗೆ ಗೊತ್ತೇ??

64

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ಎನ್ನುವುದು ಪ್ರಾಚೀನ ಕಾಲದಿಂದಲೂ ಕೂಡ ಹಲವಾರು ವಿಸ್ಮಯಗಳಿಗೆ ಮೂಲ ತಾಣವಾಗಿರುವ ದೇಶ. ಇದಕ್ಕಾಗಿಯೇ ಇತಿಹಾಸ ಕಾಲದಿಂದಲೂ ಕೂಡ ಬೇರೆ ದೇಶಗಳು ನಮ್ಮ ಭಾರತ ದೇಶಕ್ಕೆ ನಮ್ಮ ಸಂಪತ್ತನ್ನು ಲೂಟಿ ಮಾಡಲು ಬರುತ್ತಿದ್ದರು. ಇಂದಿಗೂ ಕೂಡ ನಮ್ಮ ಭಾರತೀಯರಿಗೆ ನಮ್ಮ ದೇಶದಲ್ಲಿರುವ ಪ್ರಾಕೃತಿಕ ಸಂಪತ್ತುಗಳ ಕುರಿತಂತೆ ಪೂರ್ಣವಾದ ಜ್ಞಾನವಿಲ್ಲ. ಗೆಳೆಯರೇ ಇದೇ ರೀತಿಯ ಭಾರತದಲ್ಲಿ ಬಿದ್ದು ಹೋಗುವಂತಹ ಹಣ್ಣುಗಳಿಂದ ವಿದೇಶದಲ್ಲಿ ದೊಡ್ಡಮಟ್ಟದ ಕಂಪನಿಯನ್ನು ಸ್ಥಾಪಿಸಿರುವ ಘಟನೆ ಈಗ ನಡೆದಿದೆ. ಹಾಗಿದ್ದರೆ ಅದು ಯಾವ ಹಣ್ಣು ಯಾವ ಕಂಪನಿ ಏನು ಇದರ ವಿಚಾರ ಎಂಬುದರ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ.

ಅನೀ ರಯೂ ಎನ್ನುವ ಮಹಿಳೆ 2011 ರಲ್ಲಿ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರವಾಸದ ನಿಮಿತ್ತವಾಗಿ ದಕ್ಷಿಣಭಾರತದ ಪ್ರವಾಸಕ್ಕೆ ತಮ್ಮ ಸ್ನೇಹಿತರೊಂದಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಭಾರತ ದೇಶದ ಪ್ರಸಿದ್ಧ ಹಣ್ಣುಗಳಲ್ಲಿ ಒಂದಾಗಿರುವಂತಹ ಹಲಸಿನ ಹಣ್ಣನ್ನು ತಿನ್ನುತ್ತಾರೆ. ಇದರ ರುಚಿಯನ್ನು ವುದು ಆಕೆಗೆ ಬಹಳಷ್ಟು ಹಿಡಿಸುತ್ತದೆ. ನಮ್ಮ ದೇಶದಲ್ಲಿ ಇದು ಮಂಗಗಳು ತಿಂದು ರೋಡಿನಲ್ಲಿ ಬೀಳುವಂತಹ ಹಣ್ಣಾಗಿದೆ. ಅಷ್ಟೊಂದು ಪ್ರಾಧಾನ್ಯತೆಯನ್ನು ಈ ಹಣ್ಣಿಗೆ ನೀಡುವುದಿಲ್ಲ. ಈಕೆ ತನ್ನ ದೇಶಕ್ಕೆ ಹಿಂದಿರುಗಿದ ಮೇಲೆ ಹಲಸಿನ ಹಣ್ಣಿನ ಕುರಿತಂತೆ ಸಾಕಷ್ಟು ಅಧ್ಯಯನಗಳನ್ನು ಹಾಗೂ ರಿಸರ್ಚ್ ಗಳನ್ನು ಮಾಡುತ್ತಾಳೆ. ತನ್ನ ದೇಶದಲ್ಲಿ ಈ ಹಣ್ಣಿಗೆ ದೊಡ್ಡ ಮಾರುಕಟ್ಟೆ ಸಿಗುತ್ತದೆ ಎಂಬುದನ್ನು ಅಂದಾಜು ಮಾಡುತ್ತಾಳೆ.

ಆಗ ಆಕೆ ಜಾಕ್ ಅಂಡ್ ಎನಿಸ್ ಎನ್ನುವ ಕಂಪನಿಯನ್ನು ಪ್ರಾರಂಭಿಸುತ್ತಾಳೆ. ಹಲಸಿನ ಹಣ್ಣುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ಮಾರಾಟ ಮಾಡುವ ಕಂಪನಿ ಆಗಿರುತ್ತದೆ. ಜನರಿಗೆ ಹಲಸಿನಹಣ್ಣಿನ ಕುರಿತಂತೆ ಕಮ್ಮಿ ಕ್ಯಾಲರಿ ಹಾಗೂ ವಿಟಮಿನ್ ಸಿ ಸಹಿತ ಹಲವಾರು ಪೋಷಕಾಂಶಗಳು ಸಿಗುತ್ತದೆ ಎಂಬುದಾಗಿ ಹೇಳುತ್ತಾಳೆ. ಹಲಸಿನ ಹಣ್ಣಿನ ರುಚಿ ಕೂಡ ಚೆನ್ನಾಗಿದ್ದರಿಂದ ವಿದೇಶದಲ್ಲಿ ಈ ಕಂಪನಿಯ ಉತ್ಪನ್ನಗಳು ದೊಡ್ಡಮಟ್ಟದಲ್ಲಿ ಮಾರುಕಟ್ಟೆಯನ್ನು ಪಡೆದುಕೊಳ್ಳುತ್ತದೆ. ಈಗ ಹಲವಾರು ದೇಶಗಳಲ್ಲಿ ಇವರ ಕಂಪನಿ ಹೊಸ ಹೊಸ ಬ್ರಾಂಚ್ ಗಳನ್ನು ಪ್ರಾರಂಭಿಸಿದೆ. ನೋಡಿದ್ರಲ್ಲ ಗೆಳೆಯರೇ ವಿದೇಶಿಗರು ಬಂದು ನಮ್ಮ ಪ್ರಾಕೃತಿಕ ವಸ್ತುಗಳಿಂದ ಹಲವಾರು ಲಾಭಗಳನ್ನು ಇಂದಿಗೂ ಕೂಡ ಪಡೆಯುತ್ತಿದ್ದಾರೆ. ನಮ್ಮ ಭಾರತೀಯರು ಕೇವಲ ಅವರಿಗೆ ವಸ್ತುಗಳ ರಫ್ತನ್ನು ಮಾಡುವಲ್ಲಿ ನಿರತರಾಗಿದ್ದಾರೆ. ನಾವು ಕೂಡ ಇವುಗಳ ಮಹತ್ವವನ್ನು ಕಲಿತು ಇದರಿಂದ ಲಾಭವನ್ನು ಪಡೆದುಕೊಳ್ಳಬೇಕು.

Get real time updates directly on you device, subscribe now.