ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶತಕಗಳಿಸದಿದ್ದರೆ ಏನಂತೆ ನಾಯಕನಾಗಿ ಇಳಿದ ತಕ್ಷಣ ತನ್ನ ಅಗ್ರೆಸ್ಸಿವ್ ಆಟ ತೋರಿದ ಕೊಹ್ಲಿ, ಒಮ್ಮೆ ಸೌತ್ ಆಫ್ರಿಕಾ ನಾಯಕನಿಗೆ ಬೆವರಿಳಿಸಿದ್ದು ಹೇಗೆ ಗೊತ್ತೇ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಭಾರತೀಯ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಾಯಕನ ತಂಡಕ್ಕೆ ವಿರಾಟ್ ಕೊಹ್ಲಿ ಅವರು ರಾಜೀನಾಮೆ ನೀಡಿದ್ದಾರೆ. ವಿರಾಟ್ ಕೊಹ್ಲಿ ರವರ ರಾಜೀನಾಮೆಯ ನಂತರ ವಿದೇಶದಲ್ಲಿ ಮೊದಲ ಬಾರಿಗೆ ಆರಂಭವಾಗಿರುವ ಏಕದಿನ ಸರಣಿಯನ್ನು ಕೆ ಎಲ್ ರಾಹುಲ್ ರವರು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆ ಎಲ್ ರಾಹುಲ್ ರವರು ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಏಕದಿನ ಸರಣಿಯಲ್ಲಿ ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಸೌತ್ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.

ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ವನ್ನು ಬೇಸರವನ್ನು ಮೂಡಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದು ಈ ಬದಲಾವಣೆಗಳು ಯಶಸ್ವಿಯಾಗುವ ಮುನ್ನವೇ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿರುವುದು ಮತ್ತಷ್ಟು ಚಿಂತೆಗೀಡುಮಾಡಿದೆ. ಸೌತ್ ಆಫ್ರಿಕಾದ ಪರವಾಗಿ ತೆಂಬ ಬವುಮ ಹಾಗೂ ವಾನ್ ಡರ್ ಡುಸೇನ್ ರವರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ಶತಕವನ್ನು ಸಿಡಿಸಿದ್ದಾರೆ. ಮೊದಮೊದಲಿಗೆ ಭಾರತೀಯ ಬೌಲರ್ಗಳು ಜವಾಬ್ದಾರಿಯುತ ಆಟವನಾಡಿ ವಿಕೆಟ್ಗಳನ್ನು ಉರುಳಿಸಿದ್ದರು. ನಂತರ ಕೊನೆಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿರುತ್ತಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕೂಡ ಗಮನಾರ್ಹ ಪ್ರದರ್ಶನ ಬಂದಿಲ್ಲ.

ಇನ್ನು ನಿನ್ನೆ ಪಂದ್ಯದಲ್ಲಿ ನಡೆದಂತಹ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸುದ್ದಿಯನ್ನು ಮಾಡುತ್ತಿದೆ. 36ನೇ ಓವರ್ನಲ್ಲಿ ತೆಂಬ ಬವುಮ ರವರು ಸಿಂಗಲ್ ಗಾಗಿ ಓಡುತ್ತಿರಬೇಕಾದರೆ ವಿರಾಟ್ ಕೊಹ್ಲಿ ರವರು ಮಾಡಿರುವ ತ್ರೋ ಅವರ ತಲೆಗೆ ತಗಲುವುದರಲ್ಲಿತ್ತು. ಆಗ ತೆಂಬ ಬವುಮ ಅಂಪೇರ್ ಕಡೆಗೆ ತಿರುಗಿ ಇದೇನಿದು ಎಂಬುದಾಗಿ ಪ್ರಶ್ನಿಸುತ್ತಾರೆ. ಆಗ ಕೋಪಗೊಂಡ ವಿರಾಟ್ ಕೊಹ್ಲಿ ರವರು ನೀನು ರನ್ ಗಳಿಸೋಕೆ ಅಂತ ಕ್ರಿಸ್ ಬಿಟ್ಟು ಮುಂದೆ ಹೋಗಿದ್ದೆ ಅದಕ್ಕಾಗಿ ನಾನು ಚೆಂಡನ್ನು ಎಸೆದಿದ್ದು ಈಗ ನಾನು ನಾಯಕತ್ವದಲ್ಲಿಲ್ಲ ಯಾರಿಗೂ ಉತ್ತರ ನೀಡಬೇಕಾದ ಅವಶ್ಯಕತೆ ಇಲ್ಲ. ನೀನು ನಿನ್ನ ಮಿತಿಯಲ್ಲಿ ಇರುವುದು ಒಳ್ಳೆಯದು ಎಂಬುದಾಗಿ ಸೌತ್ ಆಫ್ರಿಕಾದ ನಾಯಕನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಕೂಡ ಆಗಿದ್ದು ಇದರ ಕುರಿತಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗುತ್ತಿದೆ.

Get real time updates directly on you device, subscribe now.