ಜೀವನದಲ್ಲಿ ಏನಾದ್ರು ಸಾಧಿಸಬೇಕು ಎಂದುಕೊಂಡ ಬುದ್ಧಿವಂತರು ಮತ್ತು ಜಾಣರು ಯಾವತ್ತಿಗೂ ಈ 5 ಕೆಲಸ ಮಾಡಲ್ಲ. ಯಾವ್ಯಾವ್ಯು ಗೊತ್ತೇ??

ಜೀವನದಲ್ಲಿ ಏನಾದ್ರು ಸಾಧಿಸಬೇಕು ಎಂದುಕೊಂಡ ಬುದ್ಧಿವಂತರು ಮತ್ತು ಜಾಣರು ಯಾವತ್ತಿಗೂ ಈ 5 ಕೆಲಸ ಮಾಡಲ್ಲ. ಯಾವ್ಯಾವ್ಯು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಾವು ಬುದ್ಧಿಮಂತಿಕೆಯಿಂದ, ಜಾಣ್ಮೆಯಿಂದ ಯೋಚನೆ ಮಾಡಿದ್ರೆ ಮಾತ್ರ ಜೀವನದಲ್ಲಿ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಇಲ್ಲಿ ಬುದ್ಧಿವಂತಿಕೆ ಎಂದ್ರೆ ಓದುವುದರಲ್ಲಿಯೋ, ತರಗತಿಗೆ ಫಸ್ಟ್ ಬರುವುದರಲ್ಲಿಯೋ ಅಲ್ಲ, ಬದುಕುವುದಕ್ಕೆ ಬೇಕಾಗುವ ಬುದ್ಧಿವಂತಿಕೆ, ಸಾಧಿಸುವ ಬುದ್ಧಿವಂತಿಕೆ. ಹೌದು ನೀವು ಬುದ್ಧಿವಂತರಾಗಿದ್ರೆ, ಜಾಣರಾಗಿದ್ರೆ ನಿಮ್ಮ ಜೀವನದಲ್ಲಿ ತಪ್ಪಿಯೂ ಈ ಕೆಲಸಗಳನ್ನು ಮಾಡಲ್ಲ, ಯಾವವು? ನೋಡೋಣ ಬನ್ನಿ,

ಮೊದಲನೆಯದಾಗಿ ಬುದ್ಧಿವಂತರು ತಮ್ಮ ನಿಯಂತ್ರಣದ ಆಚೆ ಇರುವ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಹೌದು ಈ ಜಗತ್ತಿನಲ್ಲಿ ನಮ್ಮ ನಿಯಂತ್ರಣದಲ್ಲಿರುವುದು ಎರಡೇ ವಿಷಯ. ಒಂದು ನಮ್ಮ ಆಲೋಚನೆ, ಇನ್ನೊಂದು ನಮ್ಮ ಕೆಲಸ. ಇದನ್ನು ಹೊರತುಪಡಿಸಿ ಜಗತ್ತಿನಲ್ಲಿ ಇರುವುದನ್ನೇಲ್ಲಾ ನಾನು ನಿಯಂತ್ರಿಸುತ್ತೇನೆ ಅಥವಾ ಎಲ್ಲವೂ ನಾನು ಹೇಳಿದ ಹಾಗೆಯೇ ಆಗಬೇಕು ಎನ್ನುವುದು ಬುದ್ಧಿವಂತರ ಲಕ್ಷಣವಲ್ಲ, ಅದು ಮೂರ್ಖರು ಮಾಡುವ ಕೆಲಸ.

ನಿಮ್ಮ ಪವರ್ ಅನ್ನು ಯಾರಿಗೂ ಕೊಡಬೇಡಿ. ಅಂದ್ರೆ ಒಬ್ಬ ವ್ಯಕ್ತಿಯ ಮೇಲೆ ನೀವು ಅವಲಂಬಿತರಾಗಿದ್ರೆ, ಅವರು ನಿಮಗೆ ಇಷ್ಟ ಆಗುವ ಹಾಗೇ ನಡೆದುಕೊಳ್ಳಬೇಕು. ನೀವು ಹೇಳಿದ್ದನ್ನ ಮಾಡಬೇಕು, ಅಥವಾ ಅವರು ಹೇಳಿದ್ದನ್ನ ನೀವು ಕೇಳಬೇಕು. ಆದರೆ ಬುದ್ಧಿವಂತರು ಇಂಥ ಕೆಲಸವನ್ನು ಎಂದಿಗೂ ಮಾಡುವುದಿಲ್ಲ, ತಮ್ಮ ಕೆಲಸದಲ್ಲಿ ತಮಗೋಸ್ಕರ ತಮ್ಮ ಸಾಮರ್ಥ್ಯವನ್ನು ಮೀಸಲಿಡುತ್ತಾರೆಯೇ ಹೊರತು, ಬೇರೆಯವರ ಮೇಲಲ್ಲ.

ಮುಂದಿನದು ಬುದ್ಧಿವಂತರು ಎಲ್ಲರನ್ನೂ ಖುಷಿ ಪಡಿಸುವುದಕ್ಕೆ ಪ್ರಯತ್ನಪಡಲ್ಲ. ಹೌದು ಕೆಲವರು ಸಾಮಾನ್ಯವಾಗಿ ನನಗೆ ಹೇಗಾದ್ರೂ ಪರವಾಗಿಲ್ಲ, ಬೇರೆಯವರು ಖುಷಿಯಾಗಿರಬೇಕು ಅಂತ ಯೋಚನೆ ಮಾಡುತ್ತಾರೆ. ತಮ್ಮ ಕೆಲಸವನ್ನೂ ಬಿಟ್ಟು ಬೇರೆಯವರ ಹಿತಕ್ಕಾಗಿ ಅವರ ಸಹಾಯಕ್ಕೆ ಹೋಗ್ತಾರೆ. ಆದರೆ ಸಾಕಷ್ಟು ಬಾರಿ ಇದೇ ಅವರಿಗೆ ಮುಳುವಾಗತ್ತೆ. ಉದಾಹರಣೆಗೆ ನೋಡಿ, ನಿಮ್ಮ ಸ್ನೇಹಿತನೊಬ್ಬ ಪರೀಕ್ಷೆಯ ಹಿಂದಿನ ದಿನ ಎಲ್ಲಿಗಾದರೂ ಕರೆದರೆ, ನೀವು ಮುಲಾಜಿಗೆ ಹೋಗುತ್ತೀರಿ, ಆಗ ನಷ್ಟ ಯಾರಿಗೆ ನಿಮಗೆ ಯಾಕೆಂದರೆ ಮರುದಿನ ಪರೀಕ್ಷೆಯಲ್ಲಿ ಹಿನ್ನಡೆಯಾಗುತ್ತದೆಯಲ್ಲವೇ!

ಬುದ್ದಿವಂತರು ಬೇರೆಯವರ ಬೆಳವಣಿಗೆ ನೋಡಿ ಉರ್ಕೊಳಲ್ಲ. ಬುದ್ಧಿವಂತರು ಅಥವಾ ಜಾಣರು ತಾವು ಬೆಳೆಯುವುದರ ಜೊತೆಗೆ ಬೇರೆಯವರ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಅಯ್ಯೋ ಅವರು ಉದ್ಧಾರ ಆದ್ರಲ್ಲ ಅಂತ ನೊಂದುಕೊಳ್ಳಲ್ಲ, ಬದಲಿಗೆ ಅವರ ಯಶಸ್ಸನ್ನೇ ಮಾದರಿಯಾಗಿ ಇಟ್ಟುಕೊಳ್ಳುತ್ತಾರೆ. ಅವರಂತೆ ಮುಂದುವರೆಯಲು ಪ್ರಯತ್ನಪಡುತ್ತಾರೆ.

ಬುದ್ಧಿವಂತರು ಕಳೆದುಹೋದ ಸಮಯದ ಬಗ್ಗೆ ಯೋಚನೆ ಮಾಡಲ್ಲ. ಹೌದು ಕೆಲವೊಮ್ಮೆ ಸಮಯ ನಮ್ಮ ಕೈಮೀರಿ ಹೊಗಿರತ್ತೆ, ಏನು ಆಗಬೇಕು ಎಂದುಕೊಳ್ಳುತ್ತೇವೆಯೋ ಅದು ಆಗುವುದೇ ಇಲ್ಲ. ಹಾಗಂತ ಆ ಸಮಯ ಕಳೆದು ಹೋದ ಮೇಲೆ ಅದರ ಬಗ್ಗೆಯೇ ಯೋಚನೆ ಮಾಡುತ್ತಿದ್ದರೆ ಫಲ ಏನು ಬಂತು? ಅದರ ಬದಲು ನಾವು ಈಗ ಏನು ಮಾಡಬೇಕೋ ಅದರ ಬಗ್ಗೆ ಯೋಚನೆ ಮಾಡಬೇಕು. ಬುದ್ಧಿವಂತರು ಮಾಡುವುದು ಇದನ್ನೇ!. ಸ್ನೇಹಿತರೆ, ಮೇಲಿನ ಈ ಎಲ್ಲಾ ಅಂಶಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದರೆ ಖಂಡಿತವಾಗಿಯೂ ಯಶಸ್ಸು ಶತಃಸಿದ್ಧ!