ಬಿಗ್ ನ್ಯೂಸ್: ಟಿ 20 ಕ್ರಿಕೇಟ್ ಮತ್ತೊಂದು ಹೊಸ ನಿಯಮ ಸೇರಿಸಿದ ಐಸಿಸಿ. ಕೊಂಚ ಯಾಮಾರಿದರೂ ಬ್ಯಾಟ್ಸ್ ಮ್ಯಾನ್ ಗಳಿಗೆ ಹಬ್ಬವೇ ಸರಿ. ಏನು ಗೊತ್ತೇ??

ಬಿಗ್ ನ್ಯೂಸ್: ಟಿ 20 ಕ್ರಿಕೇಟ್ ಮತ್ತೊಂದು ಹೊಸ ನಿಯಮ ಸೇರಿಸಿದ ಐಸಿಸಿ. ಕೊಂಚ ಯಾಮಾರಿದರೂ ಬ್ಯಾಟ್ಸ್ ಮ್ಯಾನ್ ಗಳಿಗೆ ಹಬ್ಬವೇ ಸರಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ಕ್ರಿಕೇಟ್ ಎಂದರೇ ಅದು ಹೊಡಿ-ಬಡಿ ಕ್ರಿಕೇಟ್. ಮೂರರಿಂದ ಮೂರುವರೆ ತಾಸಿನೊಳಗೆ ಮುಗಿಯುವ ಆಟ ದಲ್ಲಿ ಬೇರೆ ಕ್ರಿಕೇಟ್ ಗೆ ಹೋಲಿಸಿದರೇ ಹಲವಾರು ನಿಯಮಗಳು ಇವೆ. ಪಂದ್ಯ ಟೈ ಆದರೇ ಸೂಪರ್ ಓವರ್, ಆ ಓವರ್ ಟೈ ಆದರೂ ಮತ್ತೊಮ್ಮೆ ಸೂಪರ್ ಓವರ್ ಆಡಿಸುವ ಮೂಲಕ ಫಲಿತಾಂಶ ಬರುವ ತನಕ ಆಡಿಸಲಾಗುತ್ತಿತ್ತು. ಈಗ ಟಿ 20 ಕ್ರಿಕೇಟ್ ನ್ನ ಮತ್ತಷ್ಟು ರೋಚಕವಾಗಿಸುವ ಕಾರಣಕ್ಕೆ ಐಸಿಸಿ ಟಿ 20 ಕ್ರಿಕೇಟ್ ಗೆ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹೌದು ಇಷ್ಟು ದಿನ ಟಿ 20 ಕ್ರಿಕೇಟ್ ನಲ್ಲಿ ಪವರ್ ಪ್ಲೇಯ ಮೊದಲ ಆರು ಓವರ್ ಗಳಲ್ಲಿ 30 ಯಾರ್ಡ್ ಹೊರಗೆ ಕೇವಲ ಎರಡು ಪ್ಲೇಯರ್ ಗಳನ್ನ ನಿಲ್ಲಿಸಬೇಕು. ಅದಾದ ನಂತರ ಅಂದರೇ ಪವರ್ ಪ್ಲೇ ಮುಗಿದ ನಂತರ ಐವರು ಆಟಗಾರರು 30 ಯಾರ್ಡ್ ಹೊರಗೆ ಫೀಲ್ಡಿಂಗ್ ಗೆ ನಿಲ್ಲಬಹುದು. ಆದರೇ ಈಗ ಹೊಸ ನಿಯಮವನ್ನ ಐಸಿಸಿ ಜಾರಿಗೆ ತಂದಿದೆ. ಫೀಲ್ಡಿಂಗ್ ಮಾಡುವ ತಂಡ ಸರಿಯಾದ ಸಮಯಕ್ಕೆ ಮೈದಾನದಲ್ಲಿ ಸಿದ್ದರಿರಬೇಕು. ಅಂದರೇ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರೇ ಆ ತಂಡ ಪ್ಯಾಡ್ ಕಟ್ಟಿಕೊಳ್ಳಲು ಒಂದೆರೆಡು ನಿಮಿಷ ವಿನಾಯಿತಿ ಇರುತ್ತದೆ.

ಆದರೇ ಫೀಲ್ಡಿಂಗ್ ಮಾಡುವ ತಂಡ ಸರಿಯಾದ ಸಮಯಕ್ಕೆ ಮೈದಾನದಲ್ಲಿ ಹಾಜರಿರಬೇಕು. ಒಂದು ವೇಳೆ ಅದಕ್ಕೆ ತಪ್ಪಿದರೇ, 30 ಯಾರ್ಡ್ ಹೊರಗೆ ನಿಲ್ಲುವ ಆಟಗಾರನೊಬ್ಬನನ್ನ ಕಡಿತಗೊಳಿಸಬಹುದಂತೆ. ಅಂದರೇ ಪವರ್ ಪ್ಲೇ ಸಮಯದಲ್ಲಿ ಇಬ್ಬರು ಆಟಗಾರರು ಹೊರಗಿರುತ್ತಾರೆ. ಆದರೇ ನಿಯಮ ಉಲ್ಲಂಘಿಸಿದ ಕಾರಣ ಒಬ್ಬನೇ ಒಬ್ಬ ಆಟಗಾರ 30 ಯಾರ್ಡ್ ನಿಂದ ಹೊರಗಿರಬೇಕಾಗುತ್ತದೆ. ಆಗ ಬ್ಯಾಟಿಂಗ್ ತಂಡಕ್ಕೆ ಹೆಚ್ಚು ಅವಕಾಶ ದೊರೆತಂತಾಗುತ್ತದೆ. ಸಮಯದ ನಿರ್ವಹಣೆಯನ್ನ ಹಾಗೂ ಶಿಸ್ತನ್ನ ಪಾಲಿಸಲು ಈ ನಿಯಮವನ್ನ ಜಾರಿಗೆ ತಂದಿರುವುದು ಸ್ವಾಗತಾರ್ಹ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.