ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸವಾಲಿನ ಮೇಲೆ ಸವಾಲುಗಳು, ಏಕದಿನ ಸರಣಿ ಪ್ರಾರಂಭವಾಗುವ ಮುನ್ನವೇ ರಾಹುಲ್ ದ್ರಾವಿಡ್ ಕಾಡುತ್ತಿವೆ 3 ಸವಾಲು. ಯಾವ್ಯಾವು ಗೊತ್ತೇ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾದ ಎದುರು ಟೆಸ್ಟ್ ಸರಣಿ ಸೋತಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ರವರು ಕೂಡ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ನಡುವಲ್ಲಿ ಜನವರಿ 19 ರಂದು ಪ್ರಾರಂಭವಾಗಲಿರುವ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲುವ ಒತ್ತಡದಲ್ಲಿ ಈಗ ಭಾರತ ತಂಡವಿದೆ. ಈ ಒತ್ತಡ ಎನ್ನುವುದು ಈಗ ಎಲ್ಲರಿಗಿಂತ ಹೆಚ್ಚಾಗಿ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಮೇಲಿದೆ. ಈಗಾಗಲೇ ಏಕದಿನ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡ ಪ್ರಾಕ್ಟೀಸ್ ಅನ್ನು ಪ್ರಾರಂಭಿಸಿದೆ.

ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರು ತಂಡವನ್ನು ಮುನ್ನಡೆಸಲು ಇರುವ ಕೆಎಲ್ ರಾಹುಲ್ ರವರ ಜೊತೆಗೆ ಸಾಕಷ್ಟು ವಿಚಾರಗಳನ್ನು ಕೂಡ ಚರ್ಚಿಸಿದ್ದಾರೆ. ಆದರೆ ಪ್ರಮುಖವಾಗಿ ರಾಹುಲ್ ದ್ರಾವಿಡ್ ರವರ ಮುಂದೆ ಈ ಸರಣಿಯಲ್ಲಿ ಮೂರು ಪ್ರಶ್ನೆಗಳು ಉದ್ಭವವಾಗಿವೆ. ಅವುಗಳು ಏನೆಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಈ ಸಮಸ್ಯೆಗಳು ಪರಿಹಾರವಾದರೆ ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾದಲ್ಲಿ ಏಕದಿನ ಸರಣಿಯನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೊದಲನೇದಾಗಿ ಕೆ ಎಲ್ ರಾಹುಲ್ ಅವರ ಜೊತೆಗೆ ಓಪನಿಂಗ್ ಯಾರು ಮಾಡುತ್ತಾರೆ ಎಂಬುದಾಗಿ. ಯಾಕೆಂದರೆ ಶಿಖರ್ ಧವನ್ ರಿತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶಾನ್ ಎಂಬ ಒಂದಕ್ಕಿಂತ ಒಂದು ಉತ್ತಮವಾದಂತಹ ಆಯ್ಕೆಗಳಿವೆ. ಎರಡನೇದಾಗಿ ನಾಲ್ಕನೇ ಸ್ಥಾನದಲ್ಲಿ ಯಾರು ಆಡಬಲ್ಲರು ಎಂಬುದಾಗಿ. ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಗಾಗಿ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯ ಕುಮಾರ್ ಯಾದವ್ ರವರ ನಡುವೆ ಪೈಪೋಟಿ ಏರ್ಪಟ್ಟಿದೆ. ಮೂರನೇದಾಗಿ ಬೌಲಿಂಗ್ ಲೈನ್ ಅಪ್ ಹೇಗಿರಬಹುದು ಎಂಬುದಾಗಿ. 3 ವೇಗದ ಬೌಲರ್ 2 ಸ್ಪಿನ್ನರ್ ಅಥವಾ 4 ವೇಗದ ಬೌಲರ್ ಒಬ್ಬ ಸ್ಪಿನ್ನರ್ ಹೀಗೆ ಹಲವಾರು ಗೊಂದಲಗಳು ಏರ್ಪಟ್ಟಿದೆ. ವೆಂಕಟೇಶ್ ಅಯ್ಯರ್ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಯಜುವೇಂದ್ರ ಚಹಾಲ್ ರವರು ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದರು. ಅಶ್ವಿನ್ ರವರನ್ನು ಕೂಡ ತಂಡದವರಿಗೆ ಕರೆತರುವ ಪರಿಸ್ಥಿತಿ ಇದೆ. ಹೀಗಾಗಿ ಯಾರನ್ನು ಆಡಿಸುವುದು ಯಾರನ್ನು ಬಿಡುವುದು ಎಂಬ ಗೊಂದಲಗಳು ಕೂಡ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ರಾಹುಲ್ ದ್ರಾವಿಡ್ ಅವರು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.