ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದಕ್ಷಿಣ ಆಫ್ರಿಕಾದಲ್ಲಿ ಭಾರತವನ್ನು ಮುನ್ನೆಡೆಸುತ್ತಿರುವ ರಾಹುಲ್ ರವರು ಕೊಹ್ಲಿ ರವರ ನಾಯಕತ್ವದ ಕುರಿತು ಹೇಳಿದ್ದೇನು ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ, ಟಿ 20 ಹೀಗೆ ಎಲ್ಲಾ ಮಾದರಿಯ ಕ್ರಿಕೇಟ್ ನ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈಗ ಟೀಮ್ ಇಂಡಿಯಾದಲ್ಲಿ ಅವರೊಬ್ಬ ಹಿರಿಯ ಆಟಗಾರ ಅಷ್ಟೇ. ಏಕದಿನ ಹಾಗೂ ಟಿ 20 ತಂಡದ ನೂತನ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರು. ಆದರೇ ಅವರಿಗೆ ಗಾಯದ ಸಮಸ್ಯೆಯ ಕಾರಣ ಉಪ ನಾಯಕ ಕೆ.ಎಲ್.ರಾಹುಲ್ ಸದ್ಯ ದಕ್ಷಿಣ ಆಫ್ರಿಕಾದ ವಿರುದ್ದದ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್.ರಾಹುಲ್ ವಿರಾಟ್ ಕೊಹ್ಲಿ ಬಗ್ಗೆ ಹೊಗಳಿಕೆಯ ಮಾತನಾಡಿದರು.

ಭಾರತವಲ್ಲದೇ ಬೇರೆ ದೇಶದ ಪಿಚ್ ಗಳಲ್ಲಿಯೂ ಹೋಗಿ ಭಾರತ ತಂಡ ಗೆಲ್ಲುತ್ತದೆ ಹಾಗೂ ಗೆಲ್ಲಲೇಬೇಕು ಎಂಬ ಮನೋಭಾವನೆಯನ್ನು ತಂಡಕ್ಕೆ ಬೆಳೆಸಿದ್ದೇ ವಿರಾಟ್ ಕೊಹ್ಲಿ. ಅವರು ನಾಯಕತ್ವ ಎಷ್ಟರ ಮಟ್ಟಿಗೆ ಸಮರ್ಥವಾಗಿತ್ತೆಂದರೇ, ಪ್ರತಿಯೊಬ್ಬರಿಂದಲೂ ಉತ್ತಮವಾದುದನ್ನ ಪಡೆಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ವಿರಾಟ್ ಮೈದಾನದಲ್ಲಿ ಎಷ್ಟು ಭಾವೋದ್ರಿಕ್ತರಾಗುತ್ತಿದ್ದರೆಂದರೇ, ಆ ಕೆಲವೊಮ್ಮೆ ಎದುರಾಳಿ ಆಟಗಾರರು ನಡುಗುತ್ತಿದ್ದರು ಎಂದು ಹೇಳಿದರು.

ನಾಯಕ ವಿರಾಟ್ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ಕೊನೆ ಕ್ಷಣದವರೆಗೆ ಅವರು ಸೋಲನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಇತರ ಆಟಗಾರರಿಗೂ ಅವರು ಕ್ರೀಡಾ ಸ್ಪೂರ್ತಿಯನ್ನು ತುಂಬುತ್ತಿದ್ದರು. ವಿಶೇಷವಾಗಿ ತಂಡಕ್ಕಾಗಿ ಮಾಡುವ ತ್ಯಾಗಗಳ ಮಹತ್ವದ ಬಗ್ಗೆ ಸಾರುತ್ತಿದ್ದರು. ಧೋನಿ ಹಾಗೂ ವಿರಾಟ್ ಗರಡಿಯಲ್ಲಿ ಪಳಗಿರುವ ನಾನು, ಅವರಿಂದ ಕಲಿತಿರುವ ಎಲ್ಲಾ ವಿಷಯಗಳನ್ನು ನನ್ನ ನಾಯಕತ್ವದಲ್ಲಿ ಅಳವಡಿಸಿಕೊಂಡು, ತಂಡವನ್ನ ಮುನ್ನಡೆಸಿ ಯಶಸ್ಸಿನತ್ತ ಕೊಂಡೊಯ್ಯುತ್ತೇನೆ.ಎಂದು ಹೇಳಿದರು. ಭಾರತ ಈ ಏಕದಿನ ಸರಣಿಯನ್ನು ಗೆದ್ದರೇ, ನಾಯಕತ್ವ ವಹಿಸಿದ ಮೊದಲ ಸರಣಿಯಲ್ಲಿಯೇ , ವಿದೇಶದಲ್ಲಿ ಜಯಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.