ಬಿಡುಗಡೆಯಾಯಿತು ಮತ್ತೊಂದು ಬಹು ನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ. ಗೆಲ್ಲುವುದು ಯಾರಂತೆ ಗೊತ್ತೇ??

ಬಿಡುಗಡೆಯಾಯಿತು ಮತ್ತೊಂದು ಬಹು ನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ. ಗೆಲ್ಲುವುದು ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮುಂಬರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದು ಕರೆಯಲ್ಪಡುವ ಪಂಚರಾಜ್ಯಗಳ ಚುನಾವಣೆಗೆ ಅಧೀಕೃತ ಚಾಲನೆ ದೊರೆತಿದೆ. ಇದರ ಜೊತೆ ಸಮೀಕ್ಷೆಗಳು, ಮತಗಟ್ಟೆ ಅಭಿಪ್ರಾಯಗಳು ಶುರುವಾಗಿವೆ. ಭಾರತದ ರಾಜಕಾರಣದ ನಿಟ್ಟಿನಲ್ಲಿ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಚುನಾವಣೆಯೂ ಸಹ ಇದರಲ್ಲಿ ನಡೆಯುತ್ತಿದೆ.

ಒಟ್ಟು 402 ವಿಧಾನಸಭಾ ಕ್ಷೇತ್ರಗಳು ಹಾಗೂ 80 ಲೋಕಸಭಾ ಕ್ಷೇತ್ರಗಳು ಇರುವ ಈ ಉತ್ತರ ಪ್ರದೇಶ ಗೆಲ್ಲಲೂ ಎಲ್ಲಾ ಪಕ್ಷಗಳು ಹರಸಾಹಸ ನಡೆಸಿವೆ. ಇದರ ಜೊತೆ ಪಂಜಾಂಬ್, ಉತ್ತರಖಂಡ, ಗೋವಾ ಹಾಗೂ ಮಣಿಪುರದಲ್ಲಿ ಚುನಾವಣೆ ನಡೆಯುತ್ತಿದೆ. ಈಗ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದ್ದು, ಹಲವು ಅಚ್ಚರಿಗಳನ್ನು ಮತದಾರ ನೀಡಬಹುದು ಎಂಬ ಸಂದೇಶ ಬಂದಿದೆ. ಬನ್ನಿ ಐದು ರಾಜ್ಯಗಳ ಚುನಾವಣಾ ಪೂರ್ವ ಫಲಿತಾಂಶ ಹೇಗಿದೆ ಎಂಬುದನ್ನ ತಿಳಿಯೋಣ.

1.ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಆಡಾಳಿತಾರೂಢ ಬಿಜೆಪಿಗೆ ಈ ಭಾರಿ ಸಮಾಜವಾದಿ ಪಕ್ಷ ಪ್ರಬಲ ಪೈಪೋಟಿ ನೀಡಲಿದೆ. ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವ ಕಾರಣ ಫಲಿತಾಂಶ ಅದಲುಬದಲು ಆದರೂ ಆಗಬಹುದು. ಬಿಜೆಪಿ :252-272, ಎಸ್ ಪಿ :111-131, ಬಿ ಎಸ್ ಪಿ :8 -16, ಕಾಂಗ್ರೇಸ್ : 3-9, ಮ್ಯಾಜಿಕ್ ನಂಬರ್ – 202

2.ರೈತ ಹೋರಾಟದಲ್ಲಿ ಸುದ್ದಿ ಮಾಡುವ ಪಂಜಾಬ್ ಕೂಡ ಚುನಾವಣೆ ಎದುರಿಸುತ್ತಿದೆ. ಆಮ್ ಆದ್ಮಿ ಪಕ್ಷ ಇಲ್ಲಿ ಕಮಾಲ್ ಮಾಡುವ ಸಾಧ್ಯತೆ ಇದೆ. ಆಪ್ : 50-56, ಕಾಂಗ್ರೇಸ್ : 42 – 48, ಶಿರೋಮಣಿ ಅಕಾಲಿ ದಳ :1 – 17, ಮ್ಯಾಜಿಕ್ ನಂಬರ್ – 52

3.ಉತ್ತರಾಖಂಡ್ : ದೇವರ ಭೂಮಿ ಉತ್ತರಾಖಂಡ್ ನಲ್ಲಿ ಈ ಭಾರಿ ಬಿಜೆಪಿ ಹಾಗೂ ಕಾಂಗ್ರೇಸ್ ಮಧ್ಯೆ ತೀವ್ರ ಹಣಾಹಣಿ ಏರ್ಪಡಲಿದೆ. ಬಿಜೆಪಿ : 36-42, ಕಾಂಗ್ರೇಸ್ : 25-31, ಆಪ್ : 0-2, ಇತರೆ : 1-3, ಮ್ಯಾಜಿಕ್ ನಂಬರ್ : 36

4.ಈಶಾನ್ಯ ಭಾರತದ ಮಣಿಪುರದಲ್ಲಿ ಬಿಜೆಪಿ ಮತ್ತೊಮ್ಮೆ ಕಮಾಲ್ ಮಾಡುವ ಸಾಧ್ಯತೆಯಿದೆ.
ಬಿಜೆಪಿ : 31-37, ಕಾಂಗ್ರೇಸ್ : 13-19, ಎನ್ ಪಿ ಪಿ : 2 – 9, ಒಟ್ಟು : 60, ಮ್ಯಾಜಿಕ್ ನಂಬರ್ : 31

5.ಕಡಲ ಕಿನಾರೆ ಗೋವಾ ಸಹ ಈ ಭಾರಿ ಚುನಾವಣೆ ಎದುರಿಸುತ್ತಿದೆ. ಯಾವ ಪಕ್ಷಗಳು ಮೇಲುಗೈ ಸಾಧಿಸಿಲ್ಲ.ಕಾಂಗ್ರೇಸ್ : 9 – 13, ಬಿಜೆಪಿ : 16-20, ಆಪ್ : 4-8 , ಮ್ಯಾಜಿಕ್ ನಂಬರ್ : 21. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.