ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಾಯಕನಾಗಿ ಗೆದ್ದಿದ್ದಷ್ಟೇ ಅಲ್ಲಾ, ಮೂರು ಆಟಗಾರರ ಜೀವನವನ್ನೇ ಬದಲಾಯಿಸಿದ್ದಾರೆ, ಆ ಮೂರು ಆಟಗಾರರು ಯಾರ್ಯಾರು ಗೊತ್ತೇ?

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಕ್ರಿಕೇಟ್ ಕಂಡ ಅತ್ಯಂತ ಯಶಸ್ವಿ ನಾಯಕ. ಅವರು ಟೆಸ್ಟ್ ಕ್ರಿಕೇಟ್ ನಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನ ತಂದವರು. ಮೊದಲು ಭಾರತ ತಂಡದ ಸಂಯೋಜನೆಯಲ್ಲಿ ಏಳು ಬ್ಯಾಟ್ಸಮನ್ ಗಳು, ನಾಲ್ವರು ತಜ್ಞ ಬೌಲರ್ ಗಳು ಎಂಬಂತಿತ್ತು. ಈಗ ಆರು ಬ್ಯಾಟ್ಸಮನ್ ಗಳು, ಐವರು ಬೌಲರ್ ಗಳು, ಇಬ್ಬರೂ ಆಲ್ ರೌಂಡರ್ ಗಳು ಎಂಬ ಸಂಯೋಜನೆಗೆ ಬರಲು ಪ್ರಮುಖ ಕಾರಣವೆಂದರೇ ಅದು ವಿರಾಟ್ ಕೊಹ್ಲಿಯವರ ರಣತಂತ್ರ. ಅದೇ ರೀತಿ ಫಾರ್ಮ್ ನಲ್ಲಿ ಇಲ್ಲದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿ, ಅವರಲ್ಲಿ ವಿಶ್ವಾಸ ತುಂಬಿ, ಅದ್ಭುತ ಪ್ರದರ್ಶನ ನೀಡುವಂತೆ ಮಾಡಿದರು. ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೇಟ್ ನಲ್ಲಿ ಕೃತಜ್ಞರಾಗಿರುವ ಮೂವರು ಆಟಗಾರರು ಈ ಕೆಳಕಂಡಂತಿದ್ದಾರೆ.

1.ಕೆ.ಎಲ್.ರಾಹುಲ್ : ಕೆ.ಎಲ್ ರಾಹುಲ್ ರಣಜಿಯಲ್ಲಿ ನೀಡಿದ ಅತ್ಯದ್ಭುತ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೇ ಮೇಲ್ಬೋರ್ನ್ ಟೆಸ್ಟ್ ನಲ್ಲಿ ಪದಾರ್ಪಣೆ ಮಾಡಿದ್ದರೂ, ಆರನೇ ಕ್ರಮಾಂಕದಲ್ಲಿ ಆಡಿ, ಬೇಗ ಔಟಾಗಿದ್ದರು. ನಂತರ ಸಿಡ್ನಿ ಟೆಸ್ಟ್ ನಲ್ಲಿ ಸಹ ಅವರಿಗೆ ಅವಕಾಶ ನೀಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆದರೇ ವಿರಾಟ್ ಇಟ್ಟ ವಿಶ್ವಾಸವನ್ನ ಉಳಿಸಿಕೊಂಡ ರಾಹುಲ್ , ಶತಕ ಸಿಡಿಸಿ ತಮ್ಮ ಆಯ್ಕೆ ಸಮರ್ಥಿಸಿಕೊಂಡರು. ಮುಂದೆ ಟೀಮ್ ಇಂಡಿಯಾದ ಆಧಾರ ಸ್ತಂಭವಾಗಿ ಬೆಳೆದರು.

2.ಜಸ್ಪ್ರಿತ್ ಬುಮ್ರಾ : ಬೂಮ್ ಬೂಮ್ ಬುಮ್ರಾರನ್ನ ಕೇವಲ ಟಿ 20 ಹಾಗೂ ಏಕದಿನ ತಂಡಕಷ್ಟೇ ಸೀಮಿತಗೊಳಿಸಲಾಗಿತ್ತು. ಆದರೇ ಬುಮ್ರಾ ಮೇಲೆ ಅತೀವ ಆತ್ಮವಿಶ್ವಾಸದಿಂದ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೇ ಪ್ರಥಮ ಇನ್ನಿಂಗ್ಸ್ ನಲ್ಲಿ ಒಂದು ವಿಕೇಟ್ ಪಡೆಯದಿದ್ದಾಗ ಟೀಕಾಕಾರರು ಬುಮ್ರಾ ಆಯ್ಕೆಯನ್ನ ವಿರೋಧಿಸಿದರು. ಆದರೇ ದ್ವೀತಿಯ ಇನ್ನಿಂಗ್ ನಲ್ಲಿ ಐದು ವಿಕೇಟ್ ಪಡೆಯುವ ಮೂಲಕ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಂಡು, ಈಗ ಟೆಸ್ಟ್ ತಂಡದಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

3.ರಿಷಭ್ ಪಂತ್ : 2018ರ ಇಂಗ್ಲೆಂಡ್ ಪ್ರವಾಸದಲ್ಲಿ ದಿನೇಶ್ ಕಾರ್ತಿಕ್ ಮೊದಲೆರೆಡು ಟೆಸ್ಟ್ ನಲ್ಲಿ ನೀರಸ ಪ್ರದರ್ಶನ ನೀಡಿದರು. ಆಗ ಮೀಸಲು ವಿಕೇಟ್ ಕೀಪರ್ ಆಗಿದ್ದ ರಿಷಭ್ ಪಂತ್ ಗೆ ಮೊದಲ ಅವಕಾಶ ದೊರೆಯಿತು. ರಿಷಭ್ ನ್ಯಾಟಿಂಗ್ ಹಾಮ್ ಟೆಸ್ಟ್ ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆಯ್ಕೆ ಸಮರ್ಥಿಸಿಕೊಂಡರು. ಮುಂದೆ ಭಾರತ ಟೆಸ್ಟ್ ತಂಡದ ಖಾಯಂ ವಿಕೇಟ್ ಕೀಪರ್ ಆಗಿ ಶಾಶ್ವತ ಸ್ಥಾನ ಪಡೆದರು.

ವಿರಾಟ್ ಕೊಹ್ಲಿಯವರ ಗಟ್ಟಿ ನಿರ್ಧಾರಗಳಿಂದ ಈ ಮೂವರು ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ತಂಡಕ್ಕೆ ಉತ್ತಮ ಆಸ್ತಿಯಾದರು. ಇವರು ವಿರಾಟ್ ಕೊಹ್ಲಿಯವರಿಗೆ ಕೃತಜ್ಞ ಆಟಗಾರರಾಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.