ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಶ್ರೇಯಸ್ ಅಯ್ಯರ್ ರವರನ್ನು ಕಡೆಗಣಿಸಿ ಮೂರು ಜನರನ್ನು ಆಯ್ಕೆ ಮಾಡಿದ ಅಹಮದಾಬಾದ್ ತಂಡ. ಅಚ್ಚರಿಯಾಗಿ ಆಯ್ಕೆಗೊಂಡವರು ಯಾರ್ಯಾರು ಗೊತ್ತೇ??

ಬಿಗ್ ನ್ಯೂಸ್: ಶ್ರೇಯಸ್ ಅಯ್ಯರ್ ರವರನ್ನು ಕಡೆಗಣಿಸಿ ಮೂರು ಜನರನ್ನು ಆಯ್ಕೆ ಮಾಡಿದ ಅಹಮದಾಬಾದ್ ತಂಡ. ಅಚ್ಚರಿಯಾಗಿ ಆಯ್ಕೆಗೊಂಡವರು ಯಾರ್ಯಾರು ಗೊತ್ತೇ??

15

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಹೊಸ ಫ್ರಾಂಚೈಸಿಗಳಾದ ಅಹಮದಾಬಾದ್ ಮತ್ತು ಲಕ್ನೋ ತಂಡಗಳಿಗೆ ಇದೇ ಜನೇವರಿ 21ರೊಳಗೆ ಆಯ್ಕೆ ಮಾಡಿಕೊಂಡ ಮೂವರು ಆಟಗಾರರನ್ನ ಘೋಷಿಸಬೇಕು ಎಂದು ಬಿಸಿಸಿಐ ಕಂಡಿಷನ್ ಹಾಕಿತ್ತು. ಅದರಂತೆ ಈಗ ಮೊಟ್ಟ ಮೊದಲ ಭಾರಿಗೆ ಅಹಮದಾಬಾದ್ ತಂಡ ತಾನು ಆಯ್ಕೆ ಮಾಡಿಕೊಂಡ ಮೂವರು ಆಟಗಾರರ ಪಟ್ಟಿಯನ್ನ ಬಿಡುಗಡೆಗೊಳಿಸಿದೆ. ಒಬ್ಬ ಬ್ಯಾಟ್ಸಮನ್, ಒಬ್ಬ ಆಲ್ ರೌಂಡರ್ ಹಾಗೂ ಒಬ್ಬ ಬೌಲರ್ ನ ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ಇಬ್ಬರು ದೇಶಿಯ ಆಟಗಾರರಿದ್ದರೇ, ಒಬ್ಬ ವಿದೇಶಿ ಆಟಗಾರರಿದ್ದಾರೆ. ಬನ್ನಿ ಆ ಮೂವರು ಆಟಗಾರರು ಹಾಗೂ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂಬುದನ್ನ ತಿಳಿಯೋಣ.

1.ಹಾರ್ದಿಕ್ ಪಾಂಡ್ಯ : ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನ ಅಹಮದಾಬಾದ್ ತಂಡ ಮೊದಲ ಆಯ್ಕೆ ಮಾಡಿಕೊಂಡಿದೆ. ಸದ್ಯ ಫಾರ್ಮ್ ನಲ್ಲಿ ಇಲ್ಲದಿದ್ದರೂ ಹಾರ್ದಿಕ್ ಗೆ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ, ಖರೀದಿಸಿದೆ. ಇದು ಹಾರ್ದಿಕ್ ಪಾಲಿಗೆ ಅದೃಷ್ಠ ಎಂದೇ ಹೇಳಬಹುದು.

2.ರಶೀದ್ ಖಾನ್ : ಅಫಘಾನಿಸ್ತಾನದ ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಅಹಮದಾಬಾದ್ ತಂಡದ ಪಾಲಾಗಿದ್ದಾರೆ. ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ ಇವರನ್ನ ಖರೀದಿಸಿದೆ. ಹರಾಜಿನಲ್ಲಿ ಹೋಗಿದ್ದರೇ ರಶೀದ್ ಇನ್ನಷ್ಟು ಜಾಸ್ತಿ ಬೆಲೆಗೆ ಬಿಡ್ ಆಗುವ ಸಂಭವ ಇತ್ತು.

3.ಶುಭಮಾನ್ ಗಿಲ್ : ಭಾರತದ ಆರಂಭಿಕ ಆಟಗಾರ ಶುಭಮಾನ್ ಗಿಲ್ ಸಹ ಅಹಮದಾಬಾದ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರನ್ನ 7 ಕೋಟಿ ಕೊಟ್ಟು.ಖರೀದಿಸಲಾಗಿದೆ. ಆರಂಭಿಕ ಬ್ಯಾಟ್ಸಮನ್ ಆಗಿರುವ ಇವರು ಹರಾಜಿನಲ್ಲಿ ಭಾಗವಹಿಸಿದ್ದರೇ, ಇನ್ನಷ್ಟು ಬೆಲೆಗೆ ಬಿಕರಿಯಾಗುವ ಸಾಧ್ಯತೆ ಇತ್ತು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.