ನಾಯಕನಾಗಿ ವಿದಾಯ ಪಂದ್ಯವಾಡಿ ಎಂದಿದ್ದಕ್ಕೆ ಖಡಕ್ ಆಗಿಯೇ ಉತ್ತರ ನೀಡಿದ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ??

ನಾಯಕನಾಗಿ ವಿದಾಯ ಪಂದ್ಯವಾಡಿ ಎಂದಿದ್ದಕ್ಕೆ ಖಡಕ್ ಆಗಿಯೇ ಉತ್ತರ ನೀಡಿದ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವಂತೆ ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ಕಪ್ತಾನ ಆಗಿರುವ ವಿರಾಟ್ ಕೊಹ್ಲಿ ರವರು ಮೊನ್ನೆಯಷ್ಟೇ ಧಿಡೀರನೆ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಿಮಗೆಲ್ಲ ತಿಳಿದಿದೆ. ಈ ಹಿಂದೆ ಟಿ 20 ತಂಡದ ನಾಯಕನ ಸ್ಥಾನಕ್ಕೆ ವಿಶ್ವಕಪ್ ನಂತರ ವಿದಾಯ ಹೇಳುತ್ತೇನೆ ಎಂದು ವಿರಾಟ್ ಕೊಹ್ಲಿ ರವರು ಹೇಳಿ ಹೇಳಿದ ಮಾತಿನಂತೆ ನಡೆದುಕೊಂಡಿದ್ದರು. ಇದಾದ ನಂತರ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಏಕದಿನ ನಾಯಕನ ಆನಂದ ಅವರಿಗೂ ತಿಳಿದಂತೆ ಕೆಳಗಿಳಿಸಿತ್ತು.

ಈ ಸಂದರ್ಭದಲ್ಲಿ ನಿಯಮಿತ ಓವರ್ಗಳ ತಂಡದ ನಾಯಕನ ಸ್ಥಾನವನ್ನು ರೋಹಿತ್ ಶರ್ಮಾ ರವರಿಗೆ ವಹಿಸಲಾಗಿತ್ತು. ಈಗ ವಿರಾಟ್ ಕೊಹ್ಲಿ ರವರು ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ಬಿಸಿಸಿಐ ಯು ಕೂಡ ಮುಂಚಿತವಾಗಿ ತಿಳಿಸದೆ ರಾಜೀನಾಮೆ ನೀಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೂಡ ವಿರಾಟ್ ಕೊಹ್ಲಿ ರವರ ನಿರ್ಧಾರವನ್ನು ಬಿಸಿಸಿಐ ಸ್ವಾಗತಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು ತಮ್ಮ ನಾಯಕನ ಸ್ಥಾನದಿಂದ ವಿದಾಯದ ನಿರ್ಧಾರವನ್ನು ಮೊದಲ ಬಾರಿಗೆ ಕೋಚ್ ರಾಹುಲ್ ದ್ರಾವಿಡ್ ರವರ ಬಳಿ ನಂತರ ತಂಡದ ಸದಸ್ಯರ ಬಳಿ ಹೇಳಿಕೊಂಡಿದ್ದರು.

ಈ ಸಂದರ್ಭದಲ್ಲಿ ಬಿಸಿಸಿಐ ಕೂಡ ಒಂದು ಆಫರನ್ನು ವಿರಾಟ್ ಕೊಹ್ಲಿ ರವರಿಗೆ ನೀಡಿತ್ತು. ಅದೇನೆಂದರೆ ಮುಂದಿನ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದ್ದು ಇದರಲ್ಲಿ ಕೊನೆಯ ಬಾರಿಗೆ ನಾಯಕನಾಗಿ ಪಂದ್ಯಾಟವನ್ನು ಆಡಿ ವಿದಾಯವನ್ನು ನೀಡಿ ಎಂಬುದಾಗಿ ಕರೆ ಮಾಡಿ ಕೇಳಿಕೊಂಡಿತ್ತು. ಇದು ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯ ಕೂಡ ಆಗಿತ್ತು. ಇದಕ್ಕೆ ವಿರಾಟ್ ಕೊಹ್ಲಿ ರವರು ಒಂದು ಪಂದ್ಯ ದೊಡ್ಡ ಬದಲಾವಣೆಯನ್ನು ಮಾಡುವುದಿಲ್ಲ ನಾನು ಇರುವುದು ಹೀಗೆ ಎಂಬುದಾಗಿ ಕಡಕ್ಕಾಗಿ ಬಿಸಿಸಿಐಗೆ ಸಂದೇಶವನ್ನು ರವಾನಿಸಿದ್ದಾರೆ. ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.