ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದಿನ ನಾಯಕ ಈತನೇ ಆಗಬೇಕು ಎಂದು ತನ್ನ ಆಯ್ಕೆಯನ್ನು ಮುಂದಿಟ್ಟ ಸುನಿಲ್ ಗಾವಸ್ಕರ್, ಆಯ್ಕೆಯಾದ ಆಟಗಾರ ಯಾರು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಗಮನಾರ್ಹ ಹಾಗೂ ತ್ವರಿತ ಗತಿಯ ಬದಲಾವಣೆಗಳು ಕಂಡುಬರುತ್ತಿವೆ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ಆಗಿರುವಂತಹ ವಿರಾಟ್ ಕೊಹ್ಲಿ ರವರು ಟಿ-20 ಹಾಗೂ ಏಕದಿನ ಫಾರ್ಮೆಟ್ ನ ನಂತರ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈಗ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನ ತೆರವಾಗಿದೆ. ಈಗಾಗಲೇ ಏಕದಿನ ಹಾಗೂ ಟಿ20 ತಂಡದ ನಾಯಕನನ್ನಾಗಿ ರೋಹಿತ್ ಶರ್ಮ ರವರನ್ನು ಆಯ್ಕೆ ಮಾಡಿರುವುದು ನಿಮಗೆಲ್ಲ ಗೊತ್ತಿದೆ.

ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ರೋಹಿತ್ ಶರ್ಮ ಹಾಗೂ ಕೆ ಎಲ್ ರಾಹುಲ್ ರವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ರೋಹಿತ್ ಶರ್ಮಾ ರವರು ಎರಡು ಫಾರ್ಮೆಟ್ ನ ನಾಯಕರಾಗಿರುವುದರಿಂದಾಗಿ ಅವರು ಮೂರು ಫಾರ್ಮೆಟ್ ಗಳಿಗೆ ಕೂಡ ನಾಯಕರಾಗಲಿ ಎಂದು ಕೆಲವರು ಆಶಿಸಿದ್ದಾರೆ. ಇನ್ನು ಕೆಲವರು ಕೆಎಲ್ ರಾಹುಲ್ ರವರು ಯುವ ಆಟಗಾರ ಆಗಿರುವುದರಿಂದಾಗಿ ಭವಿಷ್ಯದ ನಾಯಕನಾದರೆ ಚಂದ ಎಂಬುದಾಗಿ ವಾದ ಮಾಡುತ್ತಿದ್ದಾರೆ. ಆದರೆ ಇವುಗಳ ಮಧ್ಯೆ ಮಾಜಿ ಕ್ರಿಕೆಟಿಗ ಆಗಿರುವ ಸುನೀಲ್ ಗಾವಸ್ಕರ್ ಅವರು ಮೂರನೆಯ ವ್ಯಕ್ತಿಯ ಹೆಸರನ್ನು ಇಲ್ಲಿ ಸೂಚಿಸಿದ್ದಾರೆ. ಹಾಗಿದ್ದರೆ ಆ ಮೂರನೇ ವ್ಯಕ್ತಿ ಯಾರೆಂದು ತಿಳಿಸುತ್ತೇವೆ ಬನ್ನಿ.

ಹೌದು ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್ ತಂಡದ ಕಪ್ತಾನ ಆಗಲು ಸೂಚಿಸುತ್ತಿರುವ ಆಟಗಾರ ಇನ್ಯಾರೂ ಅಲ್ಲ ಬದಲಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ರಿಷಬ್ ಪಂತ್ ರವರ ಹೆಸರು. ಇದಕ್ಕೆ ಉದಾಹರಣೆ ನೀಡುತ್ತಾ ಈ ಹಿಂದೆ ಮುಂಬೈ ತಂಡದ ಕಪ್ತಾನ ಆದ ನಂತರ ರೋಹಿತ್ ಶರ್ಮಾ ರವರು ಕೂಡ ಒಳ್ಳೆಯ ಮಟ್ಟದ ಪ್ರದರ್ಶನವನ್ನು ತೋರಿಸಿದ್ದರು. ಅದೇ ರೀತಿ ಈಗ ರಿಷಬ್ ಪಂತ್ ರವರನ್ನು ಕೂಡ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿದರೆ ಅವರಿಂದ ಕೂಡ ಉತ್ತಮ ಪ್ರದರ್ಶನವನ್ನು ನಾವು ಕಾಣಬಹುದಾಗಿದೆ ಎಂಬುದಾಗಿ ಲೆಕ್ಕಾಚಾರ ಹಾಕಿದ್ದಾರೆ ನಮ್ಮ ಸುನಿಲ್ ಗಾವಸ್ಕರ್ ಅವರು. ನಿಮ್ಮ ಪ್ರಕಾರ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಯಾರು ಆಯ್ಕೆಯಾದರೆ ಉತ್ತಮ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.