ಪಾಪ ಏನು ತಿಳಿಯದವನ ಖಾತೆಗೆ ಬಂತು ಒಂದು ಕೋಟಿ ರೂಪಾಯಿ, ಸಿಕ್ಕ ಸಿಕ್ಕಿದೆಲ್ಲವನು ಕೊಂಡು ಕೊಂಡ, ಆದರೆ ಆಮೇಲೆ ನಡೆದ್ದದೇನು ಗೊತ್ತೇ??

ಪಾಪ ಏನು ತಿಳಿಯದವನ ಖಾತೆಗೆ ಬಂತು ಒಂದು ಕೋಟಿ ರೂಪಾಯಿ, ಸಿಕ್ಕ ಸಿಕ್ಕಿದೆಲ್ಲವನು ಕೊಂಡು ಕೊಂಡ, ಆದರೆ ಆಮೇಲೆ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಕಾಲದಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಜೀವನವನ್ನು ಒಂದು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಸಂಭಾವನೆ ಸಿಗುವುದು ಅತ್ಯಂತ ವಿರಳಾತಿವಿರಳ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಹೇಳಹೊರಟಿರುವ ಕಥೆಯನ್ನು ಕೇಳಿದರೆ ಖಂಡಿತವಾಗಿಯೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಮಾತಿಗೆ ಸರಿಯಾದ ಅನ್ವಯ ಎಂಬುದಾಗಿ ಹೇಳುತ್ತೀರಿ. ಸ್ನೇಹಿತರೆ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಲಕ್ನೋ ನಲ್ಲಿ. ಈ ಘಟನೆ ನಿಮ್ಮ ಜೀವನದಲ್ಲಿ ಕೂಡ ನಡೆದಿರಬಹುದು ಬೇರೆಯವರು ತಪ್ಪಾಗಿ ನಿಮ್ಮ ಖಾತೆಗೆ ಹಣವನ್ನು ಹಾಕಿರುವುದು ಹಲವಾರು ಬಾರಿ ನಿಮ್ಮ ಜೀವನದಲ್ಲಿ ನಡೆದಿರಬಹುದು.

ಆದರೆ ಇಂದು ಹೇಳಹೊರಟಿರುವ ವಿಚಾರ ನಿಮ್ಮ ಜೀವನದಲ್ಲಿ ನಡೆದಿರುವುದಕ್ಕಿಂತ ವಿಭಿನ್ನವಾಗಿದೆ. ಬ್ಯಾಂಕಿನವರು ಮಾಡಿರುವ ತಾಂತ್ರಿಕ ದೋಷದಿಂದಾಗಿ ಕರೆಂಟ್ ಶರ್ಮಾ ಶರ್ಮ ಎನ್ನುವರು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿರುವ ಯುವಕರ ಖಾತೆಗೆ ಒಂದು ಕೋಟಿ ರೂಪಾಯಿ ಜಮಾ ಆಗುತ್ತದೆ. ಅದು ಕೂಡ ಆತ ಮಾಲ್ ಗೆ ಶಾಪಿಂಗಿಗೆ ಹೋಗಿದ್ದಾಗ. ಆತನ ಪ್ರಕಾರ ಆತನ ಖಾತೆಯಲ್ಲಿ 1983 ರೂಪಾಯಿ. ಆದರೆ ಶಾಪಿಂಗ್ ಮಾಡಿದ ನಂತರ ತನ್ನ ಡೆಬಿಟ್ ಕಾರ್ಡನ್ನು ಅಂಗಡಿಯವರಿಗೆ ನೀಡಿದಾಗ ಅದರಲ್ಲಿ ಇದ್ದಂತಹ ಹಣವನ್ನು ನೋಡಿ ಸ್ವತಹ ಆತನೇ ಬೆಚ್ಚಿ ಬೀಳುತ್ತಾನೆ. ಅದರಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣವಿತ್ತು. ಇದನ್ನು ತಿಳಿದ ಆತ ಕೇವಲ ಐದು ದಿನಗಳಲ್ಲಿ 76.2 ಲಕ್ಷಗಳ ಖರೀದಿ ಮಾಡುತ್ತಾರೆ.

15.51 ಲಕ್ಷ ಮೌಲ್ಯದ ಎಸ್ ಯು ವಿ ಕಾರ್ 22.4 7 ಲಕ್ಷ ಮೌಲ್ಯದ ಚಿನ್ನಾಭರಣ ಗಳು ಬರೋಬ್ಬರಿ 5 ಲಕ್ಷದ ಮೊಬೈಲ್. 1.5 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಅನ್ನು ಕೂಡ ಖರೀದಿಸುತ್ತಾನೆ. ಕೇಳಿದವರ ಬಳಿ ಆತ ಲಾಟರಿ ಬಂದಿದೆ ಎಂಬುದಾಗಿ ಹೇಳಿಕೊಳ್ಳುತ್ತಾನೆ. ಇವನ ಇಷ್ಟು ಮೊತ್ತದ ವ್ಯವಹಾರವನ್ನು ನೋಡಿದ ಬ್ಯಾಂಕ್ ನವರು ಬೆಚ್ಚಿಬೀಳುತ್ತಾರೆ. ಯಾಕೆಂದರೆ ಕರಣ್ ಶರ್ಮರವರ ಡೆಬಿಟ್ ಕಾರ್ಡ್ ಎನ್ನುವುದು ಬ್ಯಾಂಕಿನ ಸರ್ವರ್ ನೊಂದಿಗೆ ಲಿಂಕ್ ಆಗಿದ್ದ ಕಾರಣ ಬ್ಯಾಂಕಿನಿಂದ ಆತನ ಖಾತೆಗೆ ಹಣದ ಹರಿವು ಹೋಗುತ್ತಿತ್ತು. ಇದಕ್ಕಾಗಿ ಬ್ಯಾಂಕ್ ಮ್ಯಾನೇಜರ್ ಆತನನ್ನು ಬ್ಯಾಂಕಿಗೆ ಬರಲು ಕೇಳುತ್ತಾನೆ ಆದರೆ ಆತ ಹೋಗುವುದಿಲ್ಲ. ಮಾತನಾಡಲು ಪ್ರಯತ್ನಿಸಿದಾಗಲೂ ಕೂಡ ಆತ ಆ ವಿಚಾರವನ್ನು ನಿರ್ಲಕ್ಷಿಸುತ್ತಾನೆ. ನಂತರ ಡಿಸೆಂಬರ್ ಸಂದರ್ಭದಲ್ಲಿ ಬ್ಯಾಂಕಿನವರು ಪೊಲೀಸ್ ಠಾಣೆಗೆ ಕರಣ್ ಶರ್ಮರವರ ಮೇಲೆ 76 ಲಕ್ಷ ರೂಪಾಯಿ ವಂಚನೆ ದೂರನ್ನು ದಾಖಲಿಸಿದ್ದಾರೆ. ಈಗ ಕರಣ್ ಶರ್ಮಾ ಹಾಗೂ ಆತನ ಪತ್ನಿ ಜೈಲಿನ ಹಿಂದೆ ಇದ್ದಾರೆ. ನಮ್ಮದಲ್ಲದ ವಸ್ತುವನ್ನು ಅನುಭವಿಸಲು ಪ್ರಯತ್ನಿಸಿದರೆ ಅದರಿಂದ ಕೇವಲ ದುಃಖ ಮಾತ್ರ ಸಿಗಲು ಸಾಧ್ಯ.