ಈ ಬಾರಿಯ ಐಪಿಎಲ್ ನಲ್ಲಿ ಬಾರಿ ವಿಶೇಷ. ನೀವು ನೋಡಬಹುದಾದ ಮೇಜರ್ 5 ಬದಲಾವಣೆಗಳು ಯಾವುವು ಗೊತ್ತೇ?? ಸಂಪೂರ್ಣ ಡೀಟೇಲ್ಸ್ ಬಿಡುಗಡೆ ಮಾಡಿದ ಬಿಸಿಸಿಐ.

ಈ ಬಾರಿಯ ಐಪಿಎಲ್ ನಲ್ಲಿ ಬಾರಿ ವಿಶೇಷ. ನೀವು ನೋಡಬಹುದಾದ ಮೇಜರ್ 5 ಬದಲಾವಣೆಗಳು ಯಾವುವು ಗೊತ್ತೇ?? ಸಂಪೂರ್ಣ ಡೀಟೇಲ್ಸ್ ಬಿಡುಗಡೆ ಮಾಡಿದ ಬಿಸಿಸಿಐ.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಈ ಭಾರಿ ಅತ್ಯಂತ ರೋಚಕತೆಯಿಂದ ಹಾಗೂ ಕುತೂಹಲದಿಂದ ಕೂಡಿರುತ್ತದೆ ಎಂಬುದು ನಿಮಗೆ ತಿಳಿದಿದೆ. ಈ ಭಾರಿ ನೀವು ನೋಡಬಹುದಾದ ಟಾಪ್ 5 ಬದಲಾವಣೆಗಳು ಈ ಕೆಳಗಿನಂತಿವೆ.

1.ಎಂಟಲ್ಲ, ಹತ್ತು ತಂಡಗಳ ನಡುವೆ ಟ್ರೋಫಿಗಾಗಿ ಕದನ : ಇಷ್ಟು ವರ್ಷಗಳ ಕಾಲ ಐಪಿಎಲ್ ಟ್ರೋಫಿ ಹಣಾಹಣಿ ಎಂಟು ತಂಡಗಳ ಮಧ್ಯೆ ನಡೆಯುತ್ತಿತ್ತು.ಆದರೇ ಈ ಭಾರಿಯಿಂದ ಎಂಟರ ಬದಲಿಗೆ ಹತ್ತು ತಂಡಗಳ ಮಧ್ಯೆ ಐಪಿಎಲ್ ಟ್ರೋಫಿಯ ಹಣಾಹಣಿ ನಡೆಯಲಿದೆ. ಅದಲ್ಲದೇ ಹೊಸ ತಂಡಗಳು ಹಾಗೂ ಹಳೇ ತಂಡಗಳು ತಮ್ಮ ನಾಯಕರನ್ನು ಸಹ ಬದಲಾಯಿಸುವ ಸಾಧ್ಯತೆ ಇದೆ.

2.90 ನಿಮಿಷದ ನಿಯಮ ಇರೋದಿಲ್ಲ – ಐಪಿಎಲ್ ನಲ್ಲಿ ಇಷ್ಟು ವರ್ಷಗಳ ಪ್ರತಿ ಇನ್ನಿಂಗ್ಸ್ ಗೆ 90 ನಿಮಿಷಗಳ ನಿಯಮವನ್ನ ಹೇರಲಾಗಿತ್ತು. ಪ್ರತಿ ತಂಡವೂ 90 ನಿಮಿಸದ ಅವಧಿಗಳಲ್ಲಿ ತನ್ನ ಪಾಲಿನ 20 ಓವರ್ ಮುಗಿಸಬೇಕಿತ್ತು. ಆದರೇ ಈಗ ಅಂಪೈರ್ ತೀರ್ಪಿನ ವಿರುದ್ದ ಮೇಲ್ಮನವಿ, ಗಾಯಾಳು ಸಮಸ್ಯೆ ಇದೆಲ್ಲವನ್ನು ಮನಗಂಡು ಈ ನಿಯಮಕ್ಕೆ ಬಿಸಿಸಿಐ ತಿಲಾಂಜಲಿ ಹಾಡಿದೆ.

3.ಆಟಗಾರರ ಸಂಖ್ಯೆ ಹೆಚ್ಚಳ – ಐಪಿಎಲ್ ನ ಪ್ರತಿ ಫ್ರಾಂಚೈಸಿಯು ತನ್ನ ಬಳಿ ಗರಿಷ್ಠ ಎಂದರೇ 22 ಆಟಗಾರರನ್ನು ಹೊಂದಿರಬೇಕು ಅದರಲ್ಲಿ 8 ಆಟಗಾರರು ವಿದೇಶಿ ಆಟಗಾರರಾಗಿರಬೇಕು ಎಂಬ ನಿಯಮವಿತ್ತು. ಆದರೇ ಈ ಭಾರಿಯಿಂದ ಆಟಗಾರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ವಿದೇಶಿ ಆಟಗಾರರು 10 ಹಾಗೂ ದೇಶಿ ಆಟಗಾರರು 20 ಇರಬಹುದು ಎಂಬ ನಿಯಮ ರೂಪಿಸಲಾಗಿದೆ.

4.ಆಟದ ಸ್ವರೂಪದಲ್ಲಿ ಭಾರೀ ಬದಲಾವಣೆ : ಈ ಭಾರಿ ಟೂರ್ನಿಯ ಸ್ವರೂಪವೇ ಬದಲಾಗುತ್ತಿದೆ. ಇಷ್ಟು ವರ್ಷಗಳ ಎಲ್ಲಾ ತಂಡಗಳು ಎಲ್ಲಾ ತಂಡದ ಮೇಲೆ ಪರಸ್ಪರ 14 ಪಂದ್ಯಗಳನ್ನು ಆಡುತ್ತಿತ್ತು. ಆದರೇ ಈ ಭಾರಿ ಎರಡು ಗುಂಪುಗಳನ್ನು ಮಾಡಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಆಡಿಸಲಾಗುತ್ತಿದೆ.

5.ವಿಶೇಷ ರೀತಿಯ ಲೈವ್ – ಕ್ರೀಡಾಂಗಣದ ಹೊರತು, ಟಿವಿಯಲ್ಲಿ ವೀಕ್ಷಿಸುವ ವೀಕ್ಷಕರಿಗೆ ಕ್ರೀಡಾಂಗಣ ಲೈವ್ ಧ್ವನಿ ಕೇಳಿಸುವುದಿಲ್ಲ. ಬದಲಿಗೆ ಕಾಮೆಂಟೇಟರ್ ಗಳ ಮೇಲೆ ಅವಲಂಬಿತರಾಗಿರಬೇಕಾಗುತ್ತದೆ. ಆದರೇ ಈ ಭಾರಿಯ ಐಪಿಎಲ್ ಕಾಮೆಂಟೆಟರ್ ಧ್ವನಿ ಬದಲು ಮೈದಾನದಲ್ಲಿ ಕೇಳಿಸುವ ಧ್ವನಿ, ವಿಕೇಟ್ ಕೀಪರ್ ಹಾಗೂ ಬೌಲರ್ ನಡುವಿನ ಸಂಭಾಷಣೆಯನ್ನ ಮನೆಯಲ್ಲಿಯೇ ಕೂತು ಕೇಳಿಸಿಕೊಳ್ಳುತ್ತಾ, ಪಂದ್ಯವನ್ನು ವೀಕ್ಷಿಸಬಹುದು. ಈ ತಂತ್ರಜ್ಞಾನ ಪಂದ್ಯ ಮುಗಿಯುವವರೆಗೂ ಇರುತ್ತದೆ. ಇದು ಈ ಭಾರಿಯ ಐಪಿಎಲ್ ನ ವಿಶೇಷತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.