ಬಿಡುಗಡೆಯಾಗಿ ಐದು ವರ್ಷವಾದರೂ ಕಡಿಮೆಯಾಗಿಲ್ಲ ರಾಜಕುಮಾರನ ಹವಾ. ಅದು ಕರ್ನಾಟಕದಲ್ಲಿ ಅಲ್ಲ ಶ್ರೀಲಂಕಾದಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕನ್ನಡ ಪ್ರೇಕ್ಷಕರು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಹೆಚ್ಚು ಇಷ್ಟ ಪಟ್ಟಂತಹ ಚಿತ್ರ ಯಾವುದು ಎಂದು ಕೇಳಿದರೆ ಖಂಡಿತವಾಗಿಯೂ ಎಲ್ಲರೂ ಒಕ್ಕೊರಲಿನಿಂದ ಹೇಳುವ ಒಂದೇ ಒಂದು ಉತ್ತರವೆಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ರಾಜಕುಮಾರ ಚಿತ್ರ. ಹಲವಾರು ಜನರು ಹೇಳುವಂತೆ ರಾಜಕುಮಾರ ಚಿತ್ರ ಎನ್ನುವುದು ಕೇವಲ ಸಿನಿಮಾ ವಾಗಿರಲಿಲ್ಲ ಬದಲಾಗಿ ಬದುಕಿನ ಕುರಿತಂತೆ ಬರೆದಂತಹ ಭಾಷ್ಯವಾಗಿತ್ತು ಎಂಬುದಾಗಿ ಹೇಳುತ್ತಾರೆ. ಬದುಕಿನ ಮೌಲ್ಯಗಳನ್ನು ಸಂಬಂಧದ ಮಹತ್ವವನ್ನು ತಿಳಿಸುವ ಚಿತ್ರವಾಗಿತ್ತು.

ಎಷ್ಟೋ ಜನರು ರಾಜಕುಮಾರ ಚಿತ್ರವನ್ನು ನೋಡಿ ವೃದ್ಧಾಶ್ರಮದಲ್ಲಿ ಇಟ್ಟಿದ್ದಂತಹ ತಮ್ಮ ತಂದೆ ತಾಯಿಯರನ್ನು ಮತ್ತೆ ಪುನಹ ಮನೆಗೆ ವಾಪಸ್ಸು ಕರೆತಂದಿದ್ದರು. ಒಂದು ಚಿತ್ರ ಸಮಾಜದಲ್ಲಿ ಇಷ್ಟೊಂದು ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತದೆ ಎಂದರೆ ಖಂಡಿತವಾಗಿಯೂ ಈ ಚಿತ್ರದ ಪವರ್ ಎಷ್ಟರಮಟ್ಟಿಗೆ ಇರಬಹುದು ಎಂಬುದನ್ನು ನಾವು ಅಂದಾಜಿಸಬಹುದಾಗಿದೆ. ಇನ್ನು ರಾಜ್ಯಾದ್ಯಂತ ಶತದಿನೋತ್ಸವವನ್ನು ಕೂಡ ಪೂರೈಸಿದ ಚಿತ್ರವಾಗಿತ್ತು ಇದು. ಬಾಕ್ಸಾಫೀಸ್ ವಿಚಾರಕ್ಕೆ ಬರುವುದಾದರೆ ಹಲವಾರು ದಾಖಲೆಗಳನ್ನು ಅಳಿಸಿ ಹಾಕಿತ್ತು ಸಂತೋಷ್ ಆನಂದರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ರಾಜಕುಮಾರ ಚಿತ್ರ. ಬಿಡುಗಡೆಯಾದ ಐದು ವರ್ಷದ ಮೇಲೂ ಕೂಡ ಈಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ ನಮ್ಮೆಲ್ಲರ ನೆಚ್ಚಿನ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಐಕಾನಿಕ್ ರಾಜಕುಮಾರ ಚಿತ್ರ.

ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷಗಳಾದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ಕಚೇರಿ ಕೂಡ ಆಜಾದಿ ಕಿ ಸುವರ್ಣ ಮಹೋತ್ಸವ್ ಎನ್ನುವ ಕಾರ್ಯಕ್ರಮವನ್ನು ಆಚರಿಸುತ್ತಿದ್ದು ಇದರಲ್ಲಿ ಭಾರತೀಯ ಸಂಸ್ಕೃತಿ ವೈಶಿಷ್ಟಗಳು ವಿಶೇಷವಾದ ತಾಣಗಳು ಹಾಗೂ ವಿಶೇಷವಾದ ಸಿನಿಮಾಗಳ ಕುರಿತಂತೆ ರಾಯಭಾರ ಕಚೇರಿಯಲ್ಲಿ ಪರಿಚಯಿಸಲಿದೆ. ಈ ಹಿನ್ನೆಲೆಯಲ್ಲಿ ರಾಜಕುಮಾರ ಚಿತ್ರ ವೃದ್ಧಾಶ್ರಮದ ಕುರಿತಂತೆ ರಾಜಕುಮಾರ ಸಾರಿರುವ ಸಂದೇಶದ ಆಧಾರದಿಂದಾಗಿ ಅದನ್ನು ಶ್ರೀಲಂಕಾದ ಕ್ಯಾಂಡಿ ಯಲ್ಲಿರುವ ರಾಯಭಾರ ಕಚೇರಿಯಲ್ಲಿ ಪರಿಚಯಿಸಲಿದೆ. ಇದರ ಕುರಿತಂತೆ ಸಂತೋಷ ವ್ಯಕ್ತಪಡಿಸಿರುವ ರಾಜಕುಮಾರ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಂಡಿದೆ. ಪುನೀತ್ ರಾಜಕುಮಾರ್ ಅವರು ಜೀವಂತ ಇದ್ದಿದ್ದರೆ ಖಂಡಿತವಾಗಿಯೂ ಈ ಕುರಿತಂತೆ ಸಾಕಷ್ಟು ಸಂತೋಷವನ್ನು ಪಡುತ್ತಿದ್ದರು ಅಲ್ಲವೇ.

Post Author: Ravi Yadav