ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕಲಿಯುಗ ಅಂತ್ಯವಾಗಲು ಇನ್ನು ಎಷ್ಟು ವರ್ಷ ಬಾಕಿ ಇದೆ ಗೊತ್ತೇ?? ಕಲಿಯುಗ ಹೇಗಿರಲಿದೆ ಎಂಬುದುರ ಬಗ್ಗೆ ಕಿರು ಮಾಹಿತಿ.

27

ನಮಸ್ಕಾರ ಸ್ನೇಹಿತರೇ ಈಗಾಗಲೇ ಕಲಿಯುಗ ಎನ್ನುವುದು ಸಾಕಷ್ಟು ಸ್ವಾರ್ಥದಿಂದ ಕೂಡಿದೇ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಕಲಿಯುಗದ ಜನರು ಆಡುವ ರೀತಿಯನ್ನು ನೋಡಿದರೆ ಖಂಡಿತವಾಗಿಯೂ ಅತಿ ವೇಗವಾಗಿ ಕಲ್ಕಿ ಎಲ್ಲಾ ಜನರನ್ನು ಅಳಿಸಿ ಹೊಸ ಯುಗವನ್ನು ಪ್ರಾರಂಭಿಸುತ್ತಾನೆ ಎನ್ನುವಷ್ಟರಮಟ್ಟಿಗೆ ಯೋಚನೆಗಳು ಬರುತ್ತವೆ.

ಯಾಕೆಂದರೆ ಒಬ್ಬರಿಗೊಬ್ಬರನ್ನು ನೋಡಿದರೆ ಅಸೂಯೆ ದ್ವೇಷಗಳಿಂದ ಕಾರುತ್ತಿರುತ್ತಾರೆ ತಂದೆ ತಾಯಿ ಮರಣದ ಅಂಚಿನಲ್ಲಿ ಇದ್ದರೂ ಕೂಡ ತಮ್ಮ ಜೀವನ ತಮ್ಮ ಗಾಯಿತು ಎಂಬುದಾಗಿ ದ್ವೇಷ ಮಾಡಿಕೊಂಡಿರುತ್ತಾರೆ. ಯಾರ ಕಷ್ಟಕ್ಕೆ ಕೂಡ ಮತ್ತೊಬ್ಬರು ಸಹಾಯ ಮಾಡಲು ಬರುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮಹಾಮಾರಿ ಕಾರಣದಿಂದಾಗಿ ಈಗಲೇ 35 ಲಕ್ಷಕ್ಕೂ ಅಧಿಕ ಜನರು ಮರಣ ಹೊಂದಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಶ್ರೀಮದ್ಭಾಗವತ ಪುರಾಣದಲ್ಲಿ ಕಲಿಯುಗದಂತ್ಯದ ಕುರಿತಂತೆ ಉಲ್ಲೇಖಿಸಲಾಗಿದೆ. ಈ ಕಲಿಯುಗ ಎನ್ನುವುದು ಕ್ರಿಸ್ತಪೂರ್ವ 3102 ರಲ್ಲಿ ಪ್ರಾರಂಭವಾಗಿತ್ತಿಂತೆ.

ಇಷ್ಟು ಮಾತ್ರವಲ್ಲದೆ ಇದೇ ಗ್ರಂಥದಲ್ಲಿ ಕಲ್ಕಿ ಅಧರ್ಮ ಎನ್ನುವುದು ಪ್ರಪಂಚದಲ್ಲಿ ಹೆಚ್ಚಾದಾಗ ಕೆಟ್ಟವರನ್ನು ದುಷ್ಟರನ್ನು ಹಿರಿಯವರನ್ನು ಅವಮರ್ಯಾದೆಯಿಂದ ಕಾಣುವವರನ್ನು ಹೀಗೆ ಎಲ್ಲರನ್ನೂ ಕೂಡ ಮುಗಿಸಿ ಧರ್ಮವನ್ನು ಭೂಮಿಯಲ್ಲಿ ಸ್ಥಾಪಿಸುತ್ತಾನಂತೆ. ಹೀಗೆ ಮಾಡಿದಾಗ ಆ ಕಲಿಯುಗ ಮುಗಿದು ಸತ್ಯಯುಗ ಪ್ರಾರಂಭವಾಗುತ್ತದಂತೆ. ಹಾಗಿದ್ದರೆ ಕಲಿಯುಗ ಮುಗಿಯಲು ಇನ್ನು ಎಷ್ಟು ವರ್ಷಗಳು ಬಾಕಿ ಇದೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಗ್ರಂಥಗಳ ಲೆಕ್ಕದ ಪ್ರಕಾರ ಈಗಾಗಲೇ ಕಲಿಯುಗ ಪ್ರಾರಂಭವಾಗಿರುವುದು 3102 ವರ್ಷಗಳ ಹಿಂದೆ ಆ ಲೆಕ್ಕದಲ್ಲಿ ಇನ್ನು ಕಲಿಯುಗ ಮುಗಿಯುವುದಕ್ಕೆ 432000 ವರ್ಷಗಳು ಬಾಕಿ ಇವೆ. ಕಲಿಯುಗದ ಅಂತ್ಯದಲ್ಲಿ ಭೂಮಿಯಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ ಜಗತ್ತಿನಲ್ಲಿ ಕ್ಷಾಮಗಳು ತಾಂಡವವಾಡುತ್ತದೆ. ಕಲಿಯುಗದ ಅಂತ್ಯ ಖಂಡಿತವಾಗಿಯೂ ನಮ್ಮ ಊಹೆ ಗಿಂತ ಕೆಟ್ಟದಾಗಿರುತ್ತದೆ.