ಆಶಸ್ ಗೆದ್ದಿದ್ದೇವೆ ಆದರೆ ನನ್ನ ಕ್ರಿಕೆಟ್ ಜೀವನದ ಕೊನೆ ಆಸೆಯೇ ಬೇರೆ ಎಂದ ಡೇವಿಡ್, ಏನಂತೆ ಗೊತ್ತೇ?? ಸಾಧ್ಯವಿಲ್ಲ ಎಂದ ನೆಟ್ಟಿಗರು.

ಆಶಸ್ ಗೆದ್ದಿದ್ದೇವೆ ಆದರೆ ನನ್ನ ಕ್ರಿಕೆಟ್ ಜೀವನದ ಕೊನೆ ಆಸೆಯೇ ಬೇರೆ ಎಂದ ಡೇವಿಡ್, ಏನಂತೆ ಗೊತ್ತೇ?? ಸಾಧ್ಯವಿಲ್ಲ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ದೈತ್ಯ ಕ್ರಿಕೇಟಿಗ. ಮ್ಯಾಥ್ಯೂ ಹೇಡನ್ ಹಾಗೂ ಆಡಂ ಗಿಲ್ ಕ್ರಿಸ್ಟ್ ನಿವೃತ್ತರಾದ ನಂತರ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟಿಂಗ್ ನ್ನು ಲೀಡ್ ಮಾಡಿದವರು. ಐಪಿಎಲ್ ನಲ್ಲಿಯೂ ಸಹ ಡೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಆರಂಭವಾದ ಇವರ ಅಭಿಯಾನ ಈಗ ಸನ್ ರೈಸರ್ಸ್ ಹೈದರಾಬಾದ್ ತಂಡದ ತನಕ ಬಂದು ನಿಂತಿದೆ.

2016ರಲ್ಲಿ ಒಮ್ಮೆ ಸನ್ ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಆಗುವಲ್ಲಿ ಸಹ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಆಶಸ್ ಸರಣಿ ಗೆಲುವಿನ ಉತ್ಸಾಹದಲ್ಲಿರುವ ಡೇವಿಡ್ ವಾರ್ನರ್ ತಮ್ಮ ಮನದ ಆಸೆಯೊಂದನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೇಟ್ ವೃತ್ತಿ ಜೀವನದ ಉತ್ತುಂಗದಲ್ಲಿರುವ ವಾರ್ನರ್, ತಮ್ಮ ನಿವೃತ್ತಿಯೊಳಗೆ ಈ ನನ್ನ ಆಸೆ ಈಡೇರಲಿ ಎಂದು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಡೇವಿಡ್ ವಾರ್ನರ್ ರವರ ಆಸೆ ಏನು ಎಂದರೇ ಅದು ಭಾರತ ಹಾಗೂ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕು ಎಂದು. ಈ ಹಿಂದೆ ಇಂಗ್ಲೆಂಡ್ ನಲ್ಲಿ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು. ಆದರೇ ಭಾರತದಲ್ಲಿ ಇದುವರೆಗೂ ಒಂದು ಭಾರಿ ಆಸ್ಟ್ರೇಲಿಯಾ ಭಾರತ ತಂಡದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಗಿಲ್ಲ‌. ಭಾರತಕ್ಕೆ ಬಂದು ನಿರಾಸೆ ಹೊಂದುತ್ತಿದ್ದೇವೆ. ಆದರೇ ಭಾರತ ಆಸ್ಟ್ರೇಲಿಯಾಕ್ಕೆ ಬಂದು ಎರಡು ಭಾರಿ ಸರಣಿ ಜಯಿಸಿದೆ. ಹಾಗಾಗಿ ನಾನು ನಿವೃತ್ತಿಯಾಗುವುದರೊಳಗೆ ಒಂದು ಭಾರಿಯಾದರೂ ಭಾರತದಲ್ಲಿ, ಭಾರತದ ವಿರುದ್ದ ಟೆಸ್ಟ್ ಸರಣಿ ಗೆಲ್ಲಬೇಕು ಎಂಬ ಕೊನೆ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.