ಕರುನಾಡ ವಾಣಿ
ಇದು ನಿಮ್ಮ ಧ್ವನಿ

2022 ರ ವರ್ಷದ ಮೊದಲ ಶುಕ್ರನ ಸಂಚಾರ, ಧನು ರಾಶಿಗೆ ಶುಕ್ರನ ಸ್ಥಾನ ಪಲ್ಲಟ, ಈ ನಾಲ್ಕು ರಾಶಿಗಳಿಗೆ ಯಶಸ್ಸು, ಯಾವ್ಯಾವು ಗೊತ್ತೇ??

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ಹಿಂದೂ ಧರ್ಮವನ್ನು ಆಚರಿಸುವ ವ್ಯಕ್ತಿ ತನ್ನ ಶುಭ ಸಂದರ್ಭದಲ್ಲಿ ಹಾಗೂ ಕೆಟ್ಟ ಸಂದರ್ಭಗಳಲ್ಲಿ ಪ್ರಮುಖವಾಗಿ ಜ್ಯೋತಿಷ್ಯಶಾಸ್ತ್ರ ಗಳನ್ನು ಖಂಡಿತವಾಗಿ ನಂಬುತ್ತಾನೆ. ಆತನ ಪ್ರತಿಯೊಂದು ಕಾರ್ಯಕ್ರಮಗಳಿಗೂ ಕೂಡ ಜ್ಯೋತಿಷ್ಯಶಾಸ್ತ್ರದ ಫಲಿತಾಂಶ ಎನ್ನುವುದು ಪ್ರಮುಖವಾಗಿರುತ್ತದೆ. ಈಗ ನಾವು 2021 ಪೂರೈಸಿ 2022 ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಡೆಯುವ ಹೊಸ ಬದಲಾವಣೆಗಳು ಕುರಿತಂತೆ ಕೂಡ ಹೇಳಲಿದ್ದೇವೆ.

ಒಂದು ವೇಳೆ ಯಾರಿಗಾದರೂ ಒಳ್ಳೆಯ ದಿನಗಳು ಬರುತ್ತವೆ ಎಂದರೆ ಅದಕ್ಕೆ ಕಾರಣ ಖಂಡಿತವಾಗಿ ಶುಕ್ರಗ್ರಹ ಎನ್ನುವುದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಈಗಾಗಲೇ ಉಲ್ಲೇಖವಾಗಿದೆ. ಶುಕ್ರ ಸಂಪತ್ತು ಹಾಗೂ ಐಷಾರಾಮದ ಅಧಿಪತಿಯಾಗಿದ್ದಾನೆ. ಶುಕ್ರ ಗ್ರಹ ವೃಷಭ ಹಾಗೂ ಕನ್ಯಾ ರಾಶಿ ಯನ್ನು ಆಳುತ್ತಾನೆ. ಜಾತಕದಲ್ಲಿ ಶುಕ್ರ ಯಾವ ಸ್ಥಾನದಲ್ಲಿರುತ್ತಾನೆ ಎಂಬುದರ ಮೇಲೆ ನಿಮ್ಮ ಒಳ್ಳೆಯ ದಿನಗಳನ್ನು ಅಂದಾಜಿಸಲಾಗುತ್ತದೆ. ಇದೇ ಜನವರಿ 4ರಿಂದ ಶುಕ್ರಗ್ರಹವು ಧನುರಾಶಿಗೆ ಪರಿವರ್ತನೆ ಹೊಂದಲಿದೆ ಇದು ಗುರುವಿನ ರಾಶಿಯಾಗಿದ್ದು ಶುಕ್ರನು ಇಲ್ಲಿ ಜನವರಿ 27ರವರೆಗೆ ಇರಲಿದ್ದಾನೆ. ಇದರ ಕಾರಣದಿಂದಾಗಿ ನಾಲ್ಕು ರಾಶಿಗಳ ಜೀವನದಲ್ಲಿ ಹಾಗೂ ವೃತ್ತಿಜೀವನದಲ್ಲಿ ಸಾಕಷ್ಟು ಲಾಭದಾಯಕ ದಿನಗಳು ಕಾಣಿಸಿಕೊಳ್ಳಲಿವೆ. ಆ ನಾಲ್ಕು ರಾಶಿಗಳು ಯಾವುವು ಎಂಬುದನ್ನು ಈ ಕೆಳಗೆ ಹೇಳಲಿದ್ದೇವೆ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಮೇಷ ರಾಶಿ ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗ ಹಾಗೂ ಉದ್ಯಮದಲ್ಲಿ ಎರಡರಲ್ಲೂ ಕೂಡ ಲಾಭವನ್ನು ಕಾಣಲಿದ್ದೀರಿ ಹಾಗೂ ಉನ್ನತಿ ಸಿಗಲಿದೆ. ಒಂದು ವೇಳೆ ಈ ಕಾಲದಲ್ಲಿ ನೀವು ಹುಡುಕಿ ಮಾಡಿದರೆ ಮುಂದಿನ ಜೀವನದಲ್ಲಿ ನಮಗೆ ಅದರಿಂದ ಲಾಭಗಳು ದೊರಕುತ್ತವೆ. ಜಾಗ ಖರೀದಿಸುವಲ್ಲಿ ಕೂಡ ನಿಮಗೆ ಒಳ್ಳೆಯ ಫಲಿತಾಂಶ ಕಂಡುಬರಲಿದೆ. ಶುಕ್ರನ ಕೃಪೆಯಿಂದಾಗಿ ಅನಿರೀಕ್ಷಿತ ಧನಲಾಭ ಗಳು ಕೂಡ ನಿಮಗೆ ಆಗಲಿದೆ. ನೀವು ಕೆಲಸ ಮಾಡುವ ಕಚೇರಿಯಲ್ಲಿ ನಿಮಗೆ ಹೆಸರು ಮತ್ತು ಗೌರವ ಎರಡು ಕೂಡ ದೊರಕಲಿದೆ. ಶೇರು ವ್ಯವಹಾರ ಹಾಗೂ ಇನ್ವೆಸ್ಟ್ಮೆಂಟ್ ನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಲಾಭವನ್ನು ಮಾಡುವ ಸಾಧ್ಯತೆ ಇದೆ.

ವೃಷಭ ಒಂದು ವೇಳೆ ನೀವು ಕೆಲಸ ಬಿಟ್ಟಿದ್ದರೆ ಅಥವಾ ಹೊಸ ಕೆಲಸಕ್ಕಾಗಿ ಅಲೆಯುತ್ತಿದ್ದಾರೆ ಖಂಡಿತವಾಗಿ ನಿಮಗೆ ಶುಭಸುದ್ದಿ ಕೇಳಿಬರಲಿದೆ. ನಿಮಗಿರುವ ಸಂಪರ್ಕಗಳು ಮೊದಲ ಬಾರಿಗೆ ನಿಮಗೆ ಉಪಯೋಗಕ್ಕೆ ಬಂದು ಸಾಕಷ್ಟು ಲಾಭವನ್ನು ಕಾಣಲಿದ್ದೀರಿ. ವೃತ್ತಿಜೀವನದಲ್ಲಿ ನಿಮಗಿರುವ ಶತ್ರುಗಳು ಕಡಿಮೆಯಾಗುತ್ತಾರೆ. ನಿಮ್ಮ ರಾಶಿಯ ಮೇಲಿರುವ ಶುಕ್ರನ ಸಂಕ್ರಮಣ ಕಾಲವನ್ನು ಚೆನ್ನಾಗಿ ಉಪಯೋಗಿಸಿಕೊಂಡರೆ ಹಿಂದೆಂದೂ ಕಾಣದಂತಹ ಉತ್ತಮ ದಿನಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಕಾಣುವ ಸಾಧ್ಯತೆ ದಟ್ಟವಾಗಿದೆ.

ಕಟಕ ಜನವರಿ ತಿಂಗಳಿನಿಂದ ಕಟಕ ರಾಶಿಯವರ ಜೀವನದಲ್ಲಿ ಅದೃಷ್ಟ ಎನ್ನುವುದು ಖುಲಾಯಿಸಲಿದೆ. ನಿಮ್ಮ ಜೀವನದಲ್ಲಿ ಸಂವಹನ ಶೈಲಿ ಉತ್ತಮವಾಗುವುದರಿಂದ ಸಾಕಷ್ಟು ಯಶಸ್ಸನ್ನು ಸಾಧಿಸಲಿದ್ದೀರಿ ಹಾಗೂ ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಕೆಲಸಗಳಲ್ಲಿ ನಿಮ್ಮ ಪರ್ಫಾರ್ಮೆನ್ಸ್ ಹೆಚ್ಚಾಗಿ ಬಹಳಷ್ಟು ಮೂಲಗಳಿಂದ ಹಣದ ಹೊಳೆ ಹರಿದು ಬರಲಿದೆ. ಹಿರಿಯರಿಂದ ಆಸ್ತಿಯಲ್ಲಿ ಭಾಗ ಕೂಡ ಸಿಗಲಿದೆ ನಿಮ್ಮ ಸಂಗಾತಿಯ ಸಾಥ್ ಕೂಡ ಸಿಗಲಿದೆ. ನೀವು ಮಾಡುವ ಕೆಲಸಗಳಲ್ಲಿ ನಿಮ್ಮ ಸಹದ್ಯೋಗಿಗಳ ಬೆಂಬಲ ಕೂಡ ಸಿಗಲಿದೆ. ಇಷ್ಟೇ ಏಕೆ ಸರಕಾರಿ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಕೆಲಸ ಸಿಕ್ಕರು ಕೂಡ ಅಚ್ಚರಿಪಡಬೇಕಾಗಿಲ್ಲ. ಮನೆ ಗಾಗಿ ಸಾಕಷ್ಟು ಖರ್ಚನ್ನು ಕೂಡ ಮಾಡಲು ನೀವು ಈ ವರ್ಷ ಸಿದ್ಧವಾಗಿರುತ್ತೀರಿ.

ತುಲಾ ನಿಮ್ಮ ವೃತ್ತಿಯಲ್ಲಿ ನೀವೇ ನಂಬಲು ಸಾಧ್ಯವಾಗದಂತಹ ಪ್ರಗತಿಯನ್ನು ನೀವು ಸಾಧಿಸಲಿದ್ದೀರಿ. ನಿಮ್ಮ ಉದ್ಯೋಗದಲ್ಲಿ ನಿಮ್ಮ ಸೀನಿಯರ್ ಗಳ ಮೆಚ್ಚುಗೆಗೆ ಕೂಡ ಪಾತ್ರರಾಗಲಿದ್ದೀರಿ. ಉದ್ಯಮದಲ್ಲಿ ಕೂಡ ಸಾಕಷ್ಟು ಸಾಹಸಗಳನ್ನು ಮಾಡಿ ಅದರಲ್ಲಿ ಕೂಡ ಯಶಸ್ವಿಯಾಗಿ ಹಣದ ಹೊಳೆ ನಿಮ್ಮ ಜೀವನದಲ್ಲಿ ಹರಿದುಬರಲಿದೆ. ಅಧಿಕ ಖರ್ಚನ್ನು ಈ ಬಾರಿ ನಿಯಂತ್ರಿಸಲಿದ್ದು ಹೂಡಿಕೆ ಮಾಡಲು ಪ್ರಾರಂಭಿಸಲು ನಿಮಗೆ ಈ ಸಮಯ ಪ್ರಶಸ್ತ. ಆಸ್ತಿ ಖರೀದಿ ಮಾರಾಟ ಉದ್ಯೋಗದಲ್ಲಿ ಭಡ್ತಿ ನೀವು ಅಂದುಕೊಂಡಿರುವ ಗುರಿ ಸಾಧಿಸುವಲ್ಲಿ ಜನವರಿಯಲ್ಲಿ ಶುಕ್ರ ನಿಮಗೆ ಬೆಂಗಾವಲಾಗಿ ನಿಲ್ಲುತ್ತಾನೆ. ನಿಮ್ಮ ವಿದೇಶ ಪ್ರಯಾಣದ ಕನಸು ಕೂಡ ಈ ವರ್ಷ ನೆರವೇರುವುದು ಖಂಡಿತ. ಸಮಾಜದಲ್ಲಿ ಕೂಡ ಗೌರವ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಗಾತಿಯಿಂದ ಕೂಡ ಆದಾಯದ ಮೂಲ ಹೆಚ್ಚುತ್ತದೆ. ಶುಕ್ರನ ಕೃಪೆಯಿಂದಾಗಿ ಈ ನಾಲ್ಕು ರಾಶಿಗಳು 2022 ರಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ.

Get real time updates directly on you device, subscribe now.