ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿಮಗೆ ಸುಮ್ಮನೆ ಯಾರಾದರೂ ಬೈಯುತ್ತಿದ್ದರೆ ಬುದ್ಧ ರವರು ಮಾಡಿರುವ ಈ ಕೆಲಸವನ್ನು ಮಾಡಿ. ಏನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಇದು ಕಲಿಯುಗ. ಇಲ್ಲಿ ಎಲ್ಲರೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಜೀವನ ಮಾಡುತ್ತಾರೆ ಯಾರ ಕಷ್ಟಸುಖಗಳನ್ನು ಯಾರು ಕೂಡ ಕೇಳುವುದಿಲ್ಲ. ಇನ್ನು ಕೆಲವರು ನಮಗೆ ಯಾರಾದರೂ ಬಯ್ಯುತ್ತಾರೆ ಅಥವಾ ಬೈದಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಾರೆ. ಅವರಿಗೆ ಇಂದು ನಾವು ಒಂದು ಕಥೆಯನ್ನು ಹೇಳುವ ಮೂಲಕ ಜೀವನದಲ್ಲಿ ಹೇಗೆ ಇರಬೇಕು ಎಂಬುದರ ಕುರಿತಂತೆ ಒಂದು ನೀತಿಪಾಠವನ್ನು ಹೇಳಲು ಹೊರಟಿದ್ದೇವೆ.

ನಿಮಗೆಲ್ಲರಿಗೂ ಬುದ್ಧ ಭಗವಾನರ ಬಗ್ಗೆ ಗೊತ್ತಿದೆ ತಾನೆ. ರಾಜನಾಗಿದ್ದರೂ ಕೂಡ ಸುಖದ ಸುಪ್ಪತ್ತಿಗೆ ಬೇಡವೆಂದು ಬೌದ್ಧಧರ್ಮವನ್ನು ಸ್ಥಾಪಿಸಿ ಬೌದ್ಧ ಭಿಕ್ಷುವಾಗಿ ಊರೂರು ತಿರುಗಿದ್ದರು. ಅವರ ಜೀವನದಲ್ಲಿ ನಡೆದಿರುವ ಒಂದು ದೃಷ್ಟಾಂತವನ್ನು ಇಂದು ನಾವು ನಿಮಗೆ ಕಥೆಯ ರೂಪದಲ್ಲಿ ಹೇಳಿ ಯಾರಾದರೂ ಬೈದರೆ ಯಾವ ರೀತಿ ಮನಸ್ಸಿನಲ್ಲಿ ತಿಳಿದುಕೊಳ್ಳಬೇಕು ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ. ಒಮ್ಮೆ ಬುದ್ಧ ಭಗವಾನರು ತಮ್ಮ ಶಿಷ್ಯರೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿದ್ದರು. ಆ ಸಂದರ್ಭದಲ್ಲಿ ಒಂದು ಮನೆಯ ಎದುರು ಹೋಗಿ ಭಿಕ್ಷೆಯನ್ನು ಕೇಳುತ್ತಾರೆ. ಆ ಮನೆಯ ಒಡತಿ ಮೊದಲೇ ಕೋಪದಲ್ಲಿದ್ದಳು ಬುದ್ಧ ಭಗವಾನರು ಬಿಕ್ಷೆ ಕೇಳಿದ್ದನ್ನು ಕೇಳಿ ಇನ್ನಷ್ಟು ಕ್ರೋಧ ಗೊಳ್ಳುತ್ತಾಳೆ. ನೋಡಲು ಇಷ್ಟೊಂದು ಚೆನ್ನಾಗಿದ್ದಿ ಭಿಕ್ಷೆ ಬೇಡಿಕೊಂಡು ತಿರುಗಾಡುತ್ತಿರುವೆ ನಾಚಿಕೆ ಆಗುವುದಿಲ್ಲವಾ ನಿನಗೆ ಎಂಬುದಾಗಿ ಟೀಕಿಸುತ್ತಾಳೆ. ಇದಕ್ಕೆ ಮುಗುಳ್ನಗುತ್ತಾ ಬುದ್ಧ ಭಗವಾನರು ಹೇಳಿದ ಮಾತುಗಳು ನಿಮಗೆ ಕಂಡಿತವಾಗಿಯೂ ಆಶ್ಚರ್ಯ ತರಿಸುತ್ತದೆ.

ಹೌದು ಗೆಳೆಯರೇ ಬುದ್ಧ ಭಗವಾನರು ಅಮ್ಮ ನಿಮ್ಮ ಮಾತು ಮುಗಿಯಿತಾ ನಾನೀಗ ಒಂದು ಮಾತು ಹೇಳುತ್ತೇನೆ ಅದಕ್ಕೆ ಉತ್ತರ ನೀಡುತ್ತೀರಾ ಎಂಬುದಾಗಿ ಕೇಳಿ. ಅದಕ್ಕೆ ಹೇಳು ಎಂಬುದಾಗಿ ಕೋಪದಲ್ಲಿ ಉತ್ತರಿಸುತ್ತಾಳೆ. ನನ್ನಲ್ಲಿರುವ ಬಿಕ್ಷಾಪಾತ್ರೆ ನಿಮಗೆ ನೀಡಲು ಬಂದಾಗ ನೀವು ಬೇಡ ಎಂದರೆ ಅದು ಏನಾಗುತ್ತದೆ ಎಂಬುದಾಗಿ ಕೇಳುತ್ತಾನೆ. ಏನಾಗುತ್ತದೆ ಎಂಬುದಾಗಿ ಆಕೆ ಹೇಳುತ್ತಾಳೆ. ಆಗ ಬುದ್ಧ ಭಗವಾನರ ಅದು ನನ್ನ ಬಳಿಯೇ ಇರುತ್ತದೆ ಹಾಗೆ ನೀವು ನನಗೆ ಬಗ್ಗೆ ಆಡಿರುವ ಕೆಟ್ಟ ಮಾತುಗಳು ನನಗೆ ಬೇಡ ಎಂದಾಗ ಅದು ನಿಮ್ಮ ಬಳಿಯೇ ಇರುತ್ತದೆ ಎಂಬುದಾಗಿ ಹೇಳಿ ಮುಂದಕ್ಕೆ ಹೋಗುತ್ತಾನೆ. ನೋಡಿದ್ರಲ್ಲ ಗೆಳೆಯರೇ ಸುಖಾಸುಮ್ಮನೆ ನಿಮ್ಮ ಜೀವನದಲ್ಲಿ ನಿಮಗೆ ಯಾರಾದರೂ ಬೈಯ್ಯುತ್ತಿದ್ದರೆ ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ನಿಮಗೆ ಬೇಡ ಎಂದ ಮೇಲೆ ಅದು ಅವರಿಗೆ ತಾನೇ ಎಂಬುದಾಗಿ ಯೋಚಿಸಿಕೊಂಡು ಮುನ್ನಡೆಯಬೇಕು.