ಕೊನೆಗೂ ಐಪಿಎಲ್ ಪಂದ್ಯಗಳ ಕುರಿತು ಸಿಕ್ತು ಅಧಿಕೃತ ಮಾಹಿತಿ, ಹೇಗಿರಲಿದೆ ಗೊತ್ತೇ ತಂಡಗಳ ನಡುವಿನ ಪಂದ್ಯಗಳ ಸೆಣಸಾಟ, ಒಂದು ತಂಡಕ್ಕೆ ಎಷ್ಟು ಪಂದ್ಯಗಳು ಗೊತ್ತೇ??

ಕೊನೆಗೂ ಐಪಿಎಲ್ ಪಂದ್ಯಗಳ ಕುರಿತು ಸಿಕ್ತು ಅಧಿಕೃತ ಮಾಹಿತಿ, ಹೇಗಿರಲಿದೆ ಗೊತ್ತೇ ತಂಡಗಳ ನಡುವಿನ ಪಂದ್ಯಗಳ ಸೆಣಸಾಟ, ಒಂದು ತಂಡಕ್ಕೆ ಎಷ್ಟು ಪಂದ್ಯಗಳು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತ ಕ್ರಿಕೇಟ್ ನ ಹೊಸಭಾಷ್ಯ ಎಂದು ಹೇಳಬಹುದು. 2008ರಲ್ಲಿ ಶುರುವಾದ ಐಪಿಎಲ್ ಇಂದಿಗೂ ತನ್ನದೇ ಆದ ಚಾರ್ಮ್ ಉಳಿಸಿಕೊಂಡಿದೆ. ಪ್ರತಿ ಸೀಸನ್ ಗೂ ಹೊಸ ಹೊಸ ಬದಲಾವಣೆಯನ್ನು ತರುತ್ತಾ ಟೂರ್ನಿಯನ್ನ ಮತ್ತಷ್ಟು ರೋಚಕಗೊಳಿಸುತ್ತದೆ. ಇನ್ನು ಈ ಭಾರಿಯ ಐಪಿಎಲ್ ಟೂರ್ನಿ ಮತ್ತಷ್ಟು ವಿಶೇಷವಾಗಿದ್ದು, ಎರಡು ಹೊಸ ಫ್ರಾಂಚೈಸಿಗಳು ಸೇರಿಕೊಂಡಿವೆ. ಇನ್ನೇನು ಆಟಗಾರರ ಹರಾಜು ಪ್ರಕ್ರಿಯೆ ಶುರುವಾಗಲಿದ್ದು ಈಗ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೆ ತರಲಿದ್ದು ಈ ಭಾರಿಯ ಐಪಿಎಲ್ ಮತ್ತಷ್ಟು ವಿಶೇಷವಾಗಲಿದೆಯಂತೆ. ಬನ್ನಿ ಆ ಹೊಸ ನಿಯಮಗಳನ್ನ ತಿಳಿಯೋಣ.

ಇಷ್ಟು ವರ್ಷ ಐಪಿಎಲ್ ಲೀಗ್ ಪಂದ್ಯಗಳಲ್ಲಿ ಪ್ರತಿ ತಂಡಕ್ಕೆ 14 ಪಂದ್ಯಗಳು ಇರುತ್ತಿದ್ದವು. ಪ್ರತಿ ತಂಡವೂ ಎಲ್ಲಾ ತಂಡದ ವಿರುದ್ದ ಎರೆಡೆರೆಡು ಪಂದ್ಯ ಆಡಿ, ನಂತರ ಪ್ಲೇ ಆಫ್ ನಲ್ಲಿ ನಾಲ್ಕು ಪಂದ್ಯಗಳು ಇರುತ್ತಿದ್ದವು. ಆದರೇ ಈಗ ಲೀಗ್ ನಲ್ಲಿ ಹತ್ತು ತಂಡಗಳು ಇರುವ ಕಾರಣ ಲೀಗ್ ಬದಲು, ರೌಂಡ್ ರಾಬಿನ್ ಲೀಗ್ ನಿಯಮದಂತೆ ಪಂದ್ಯ ಯೋಜಿಸಲು ತೀರ್ಮಾನಿಸಿದೆ. ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ, ಐದು ತಂಡಗಳು ಒಂದು ಗುಂಪಿನಲ್ಲಿ ಇರುತ್ತವೆ. ಉದಾಹರಣೆಗೆ ಗ್ರೂಪ್ ಎ ನ ತಂಡ ತನ್ನ ಗುಂಪಿನ ಎಲ್ಲಾ ತಂಡದ ವಿರುದ್ದ ಎರೆಡೆರೆಡು ಪಂದ್ಯ ಆಡಲಿದೆ. ನಂತರ ಬಿ ಗುಂಪಿನ ತಂಡಗಳ ವಿರುದ್ದ ಒಂದೊಂದು ಪಂದ್ಯ ಆಡಲಿದೆ.

ಅಲ್ಲಿಗೆ ಪ್ರತಿ ತಂಡ ಹದಿಮೂರು ಪಂದ್ಯಗಳಾಗುತ್ತವೆ. ಇನ್ನೊಂದು ಪಂದ್ಯವನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಿ ಸಿಗುವ ತಂಡದ ವಿರುದ್ದ ಆಡಲಿದೆ. ಅಲ್ಲಿಗೆ ಲೀಗ್ ಹಂತದಲ್ಲಿ ಪ್ರತಿಯೊಂದು ತಂಡಗಳಿಗೂ ಹದಿನಾಲ್ಕು ಪಂದ್ಯಗಳು ಸಿಗಲಿವೆ. ನಂತರ ಪಾಯಿಂಟ್ಸ್ ಟೇಬಲ್ ನಲ್ಲಿ ಉತ್ತಮ ಅಂಕಗಳಿಸುವ ನಾಲ್ಕು ತಂಡಗಳು ಪ್ಲೇ ಆಫ್ ಗೆ ಪ್ರವೇಶಿಸಲಿವೆ. ಇನ್ನು ಆಟಗಾರರ ಹರಾಜಿನ ಬಗ್ಗೆ ಫ್ರಾಂಚೈಸಿಗಳು ಬೇಸರ ವ್ಯಕ್ತಪಡಿಸಿದ ಕಾರಣ, ಇನ್ನು ಮುಂದೆ ಆಟಗಾರರ ಮೆಗಾ ಹರಾಜು ಇರುವುದಿಲ್ಲವಂತೆ. ಬದಲಿಗೆ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನ ಉಳಿಸಿಕೊಂಡು, ಬೇಡವಾದ ಆಟಗಾರರನ್ನ ಬಿಡುಗಡೆ ಮಾಡುತ್ತಾರೆ. ಆ ಆಟಗಾರರ ಹರಾಜು ಮಾತ್ರ ಮುಂದುವರೆಯುತ್ತದೆಯಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.