ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡಿಗ ಕೆ.ಎಲ್.ರಾಹುಲ್ ರವರು ಗಳಿಸುತ್ತಿರುವ ಶತಕಗಳ ಮೇಲೆ ಶತಕಗಳ ಹಿಂದಿನ ಮಾಸ್ಟರ್ ಮೈಂಡ್ ಯಾರದ್ದು ಗೊತ್ತೇ?? ಕೆ.ಎಲ್.ರಾಹುಲ್ ಏನು ಹೇಳಿದ್ದಾರೆ ಗೊತ್ತೇ??

10

ನಮಸ್ಕಾರ ಸ್ನೇಹಿತರೇ ಕೆ.ಎಲ್.ರಾಹುಲ್ ಸದ್ಯ ಭಾರತ ತಂಡದ ಉಪನಾಯಕ. ಹುಟ್ಟೂರು ಮಾಗಡಿ ಸಮೀಪದ ಕಣ್ಣೂರು ಆದರೂ, ಬೆಳೆದಿದ್ದು ಮಣಿಪಾಲದಲ್ಲಿ. ಕ್ರಿಕೇಟ್ ಆಡಲು ಪುನಃ ಬಂದು ಸೇರಿಕೊಂಡಿದ್ದು ಬೆಂಗಳೂರಿಗೆ. ಕರ್ನಾಟಕ ರಣಜಿ ತಂಡದಿಂದ ಶುರುವಾದ ಕೆ.ಎಲ್ ರವರ ಶುರುವಾದ ಕ್ರಿಕೇಟ್ ಕರಿಯರ್ ಇಂದಿಗೂ ನಿಂತಿಲ್ಲ.

ಇನ್ನು ಕೆ.ಎಲ್.ರಾಹುಲ್ ಪೋಷಕರು ಕ್ರಿಕೇಟಿಗ ರಾಹುಲ್ ದ್ರಾವಿಡ್ ರವರ ಅಭಿಮಾನಿಯಂತೆ. ಹಾಗಾಗಿ ತಮ್ಮ ಮಗನಿಗೂ ರಾಹುಲ್ ಎಂದು ಹೆಸರಿಟ್ಟರು. ಇನ್ನು ಕೆ‌.ಎಲ್ ಕೂಡಾ ರಾಹುಲ್ ದ್ರಾವಿಡ್ ಬ್ಯಾಟಿಂಗ್ ನೈಪುಣ್ಯತೆಯನ್ನ ನೋಡುತ್ತಲೆ ಬೆಳೆದವರು. ಇನ್ನು ಕೆ.ಎಲ್.ರಾಹುಲ್ ಕಳಪೆ ಫಾರ್ಮ್ ನಿಂದ ಹೊರಗೆ ಬಿದ್ದಾಗ ರಾಹುಲ್ ದ್ರಾವಿಡ್ ರಿಂದ ಕೌಶಲದ ಸಲಹೆ ಪಡೆದು ಫಾರ್ಮ್ ಗೆ ಮರಳಿದ್ದರಂತೆ.

ಸದ್ಯ ಈಗ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರಿಂದಲೂ ಕೆ.ಎಲ್.ರಾಹುಲ್ ಅಗತ್ಯ ಟಿಪ್ಸ್ ಗಳನ್ನು ಪಡೆಯುತ್ತಿದ್ದಾರಂತೆ. ಈಗ ಟೆಸ್ಟ್ ಕ್ರಿಕೇಟನಲ್ಲಿಯೂ ಸಹ ರಾಹುಲ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲು ರಾಹುಲ್ ದ್ರಾವಿಡ್ ಟಿಪ್ಸ್ ಗಳೇ ಕಾರಣವಂತೆ. ಪಂದ್ಯದ ಮೊದಲ ಒಂದು ಘಂಟೆ ಎಚ್ಚರವಾಗಿರಬೇಕು. ವಿಕೇಟ್ ಮೇಲೆ ಬರುವ ಬಾಲ್ ಗಳನ್ನ ಮಾತ್ರ ಆಡಿ, ಹೊರಹೋಗುವ ಬಾಲ್ ಗಳನ್ನ ಸ್ವಲ್ಪ ಮಟ್ಟಿಗೆ ಆಡಲು ಹೋಗಬೇಡ ಎಂಬ ಸಲಹೆ ನೀಡಿದ್ದರಂತೆ. ಆ ಸಲಹೆಯನ್ನ ಪಾಲಿಸಿದ ಕಾರಣವೇ ರಾಹುಲ್ ಶತಕ ಭಾರಿಸುವಂತಾಯಿತು ಎಂದು ಹೇಳಿದರು. ಒಟ್ಟಿನಲ್ಲಿ ಕನ್ನಡಿಗರೇ ಕೋಚ್ ಆಗಿದ್ದಾಗ, ಕನ್ನಡಿಗರೇ ಉಪನಾಯಕರಾಗಿ ಶತಕ ಭಾರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.