ವಯಸ್ಸಿನಲ್ಲಿ ತಮಗಿಂತಲೂ ಕಡಿಮೆ ವಯಸ್ಸಿನವರನ್ನು ಮದುವೆಯಾದ ಕನ್ನಡದ ಸ್ಟಾರ್ ನಟಿಯರು ಯಾರ್ಯಾರು ಗೊತ್ತೇ?? ಊಹಿಸದ ಹೆಸರುಗಳು ಲಿಸ್ಟಿನಲ್ಲಿ.

ವಯಸ್ಸಿನಲ್ಲಿ ತಮಗಿಂತಲೂ ಕಡಿಮೆ ವಯಸ್ಸಿನವರನ್ನು ಮದುವೆಯಾದ ಕನ್ನಡದ ಸ್ಟಾರ್ ನಟಿಯರು ಯಾರ್ಯಾರು ಗೊತ್ತೇ?? ಊಹಿಸದ ಹೆಸರುಗಳು ಲಿಸ್ಟಿನಲ್ಲಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಯಾರ ಶಿಫಾರಸು ಕೂಡ ಇಲ್ಲದೆ ಕೇವಲ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಾಯಕ ನಟಿಯರು ಕೂಡ ಇದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ತಮ್ಮ ವಯಸ್ಸಿಗಿಂತ ಕೂಡ ಚಿಕ್ಕವರಾಗಿರುವವರನ್ನು ಮದುವೆ ಆಗಿರುವ ಕನ್ನಡದ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ.

ರಾಧಿಕಾ ಪಂಡಿತ್ ಮಂಗಳೂರು ಮೂಲದ ನಟಿ ಆಗಿರುವ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದಲ್ಲಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ನಂತರ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಇನ್ನು ಇವರು ಬಹುಕಾಲದ ಗೆಳೆಯ ರಾಗಿರುವ ರಾಕಿಂಗ್ ಸ್ಟಾರ್ ಯಶ್ ರವರನ್ನು ಮದುವೆಯಾಗಿದ್ದಾರೆ. ವಯಸ್ಸಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗಿಂತ ರಾಧಿಕಾ ಪಂಡಿತ್ ಅವರು ಎರಡು ವರ್ಷ ದೊಡ್ಡವರು. ಇದುವರೆಗೂ ಕೂಡ ಇಬ್ಬರು ಸುಖ ಸಂಸಾರವನ್ನು ನಡೆಸಿಕೊಂಡು ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ದೆ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಶಿಲ್ಪ ಶೆಟ್ಟಿ ಕರಾವಳಿ ಮೂಲದ ಬೆಡಗಿ ಆಗಿರುವ ಶಿಲ್ಪ ಶೆಟ್ಟಿ ಅವರು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಇವರು ಕನ್ನಡ ದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಇವರು ಬಿಸಿನೆಸ್ ಮ್ಯಾನ್ ಆಗಿರುವ ರಾಜ್ ಕುಂದ್ರಾ ರವರನ್ನು ಮದುವೆಯಾಗಿದ್ದಾರೆ. ಇನ್ನು ಕುಂದ್ರಾ ಅವರಿಗಿಂತ ಶಿಲ್ಪ ಶೆಟ್ಟಿ ಅವರು ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು.

ಛಾಯಾಸಿಂಗ್ ಒಂದುಕಾಲದಲ್ಲಿ ನಟಿ ಛಾಯಾಸಿಂಗ್ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಇನ್ನು ನಟಿ ಚಾಯ ಸಿಂಗ್ ರವರು ತಮಿಳು ಚಿತ್ರದ ಖ್ಯಾತನಟ ಆಗಿರುವ ಪ್ರಸನ್ನ ರವರನ್ನು ಮದುವೆಯಾಗಿದ್ದಾರೆ. ಪ್ರಸನ್ನರವರು ಛಾಯಾಸಿಂಗ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು. ಇನ್ನು ಕೊನೆಯ ಬಾರಿಗೆ ನಾವು ಛಾಯಾ ಸಿಂಗ್ ರವರನ್ನು ಕನ್ನಡ ಚಿತ್ರರಂಗದಲ್ಲಿ ನೋಡಿದ್ದು ಶಿವಣ್ಣ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಮಫ್ತಿ ಚಿತ್ರದಲ್ಲಿ.

ಐಶ್ವರ್ಯ ರೈ ಮತ್ತೊಬ್ಬ ಕರಾವಳಿ ಮೂಲದ ಬೆಳಗಿ ಆಗಿರುವ ಐಶ್ವರ್ಯ ರೈ ರವರು ಭುವನಸುಂದರಿ ಆಗಿ ಸಾಧನೆಯನ್ನು ಮಾಡಿದವರು. ಇನ್ನು ಇವರು ಬಾಲಿವುಡ್ ಚಿತ್ರರಂಗದ ಅನಭಿಷಕ್ತ ದೊರೆ ಎಂದೇ ಖ್ಯಾತರಾಗಿರುವ ಅಮಿತಾಬ್ ಬಚ್ಚನ್ ರವರ ಪುತ್ರನಾಗಿರುವ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದಾರೆ. ಇನ್ನು ಅಭಿಷೇಕ್ ಬಚ್ಚನ್ ರವರು ಐಶ್ವರ್ಯ ರೈ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು. ಇವರಿಬ್ಬರಿಗೆ ಒಬ್ಬಳು ಮಗಳಿದ್ದು ಇಬ್ಬರು ಕೂಡ ಇಂದಿಗೂ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಅನು ಪ್ರಭಾಕರ್ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿರುವ ಅನುಪ್ರಭಾಕರ್ ರವರು ಮೊದಲು ಜಯಂತಿ ಅವರ ಪುತ್ರನನ್ನು ವಿವಾಹವಾಗಿದ್ದರು. ನಂತರ ನಟ ರಘು ಮುಖರ್ಜಿ ಅವರನ್ನು ಎರಡನೇ ವಿವಾಹವಾಗಿದ್ದರು. ಇನ್ನು ರಘು ಮುಖರ್ಜಿ ರವರು ಅನುಪ್ರಭಾಕರ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ಚಿಕ್ಕವರು.

ನಮೃತಾ ಶಿರೋಡ್ಕರ್ ದಕ್ಷಿಣ ಭಾರತ ಚಿತ್ರರಂಗದ ಒಂದು ಕಾಲದ ಜನಪ್ರಿಯ ನಟಿಯಾಗಿದ್ದ ನಮೃತಾ ಶಿರೋಡ್ಕರ್ ರವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ರವರನ್ನು ವಿವಾಹವಾಗಿದ್ದಾರೆ. ಇನ್ನು ಮಹೇಶ್ ಬಾಬುರವರ ಗಿಂತ ನಮೃತ ಶಿರೊಡ್ಕರ್ ರವರು ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು. ವಯಸ್ಸಿನ ಅಡ್ಡಿ ಇವರಿಬ್ಬರ ವೈವಾಹಿಕ ಜೀವನದಲ್ಲಿ ಎಂದು ಕೂಡ ಬಂದಿಲ್ಲ. ನಾವು ಈ ಮೇಲೆ ಹೇಳಿರುವ ಎಲ್ಲಾ ಜೋಡಿಗಳು ಕೂಡ ಯಾವುದೇ ವೈಮನಸ್ಯ ಗಳಿಲ್ಲದೆ ಎಲ್ಲರಿಗೂ ಮಾದರಿಯಾಗುವಂತೆ ಜೀವನ ನಡೆಸುತ್ತಿದ್ದಾರೆ. ಈ ಜೋಡಿಗಳ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.