ನಿವೃತ್ತಿ ತೆಗೆದುಕೊಂಡರೆ ಏನಂತೆ ಆರ್ಸಿಬಿ ತಂಡದ ಒಳಿತಿಗಾಗಿ ಮಹತ್ವದ ಕೆಲಸಕ್ಕೆ ಕೈ ಹಾಕಿದ ಎಬಿಡಿ. ಕೊಹ್ಲಿ ಅಭಿಮಾನಿಗಳಿಗೆ ಸದ್ಯದಲ್ಲೇ ಗುಡ್ ನ್ಯೂಸ್?? ಎಬಿಡಿ ಮಾಡಿದ್ದೇನು ಗೊತ್ತೇ??

ನಿವೃತ್ತಿ ತೆಗೆದುಕೊಂಡರೆ ಏನಂತೆ ಆರ್ಸಿಬಿ ತಂಡದ ಒಳಿತಿಗಾಗಿ ಮಹತ್ವದ ಕೆಲಸಕ್ಕೆ ಕೈ ಹಾಕಿದ ಎಬಿಡಿ. ಕೊಹ್ಲಿ ಅಭಿಮಾನಿಗಳಿಗೆ ಸದ್ಯದಲ್ಲೇ ಗುಡ್ ನ್ಯೂಸ್?? ಎಬಿಡಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರೋ ಹಾಗೆ ಈ ಬಾರಿಯ ಐಪಿಎಲ್ 2022 ರ ಮೆಗಾ ಆಕ್ಷನ್ ಅತಿಶೀಘ್ರದಲ್ಲಿ ನಡೆಯುವ ಎಲ್ಲ ಸಾಧ್ಯತೆಗಳು ಕೂಡ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದಂತೆ ಇನ್ನೂ ಐದು ತಂಡಗಳು ನಾಯಕನ ಹುಡುಕಾಟದಲ್ಲಿ ಇದೆ. ಇನ್ನು ಈಗ ಇರುವ ತಂಡಗಳನ್ನು ಹೊರತುಪಡಿಸಿ ಎರಡು ಹೊಸ ತಂಡಗಳು ಕೂಡ ಐಪಿಎಲ್ ನಲ್ಲಿ ಸೇರಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ವಿರಾಟ್ ಕೊಹ್ಲಿ ಅವರು ರಾಜೀನಾಮೆ ನೀಡಿದ್ದರು.

ಇದಕ್ಕೆ ಪ್ರಮುಖ ಕಾರಣವಾಗಿದ್ದು ಕೆಲಸದ ಹೊರೆ. ಹೌದು ವಿರಾಟ್ ಕೊಹ್ಲಿ ರವರು ಭಾರತದ ಮೂರು ಫಾರ್ಮ್ಯಾಟ್ ನಲ್ಲಿ ನಾಯಕನ ಸ್ಥಾನದಲ್ಲಿ ಇದ್ದಿದ್ದರಿಂದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಮುಂದುವರೆಯುವುದು ವಿರಾಟ್ ಕೊಹ್ಲಿ ತಲೆನೋವಿನ ಕೆಲಸವಾಗಿತ್ತು. ಇದಕ್ಕಾಗಿ ಐಪಿಎಲ್ನಲ್ಲಿ ಆರ್ಸಿಬಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. ಇನ್ನು ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಟಿ-ಟ್ವೆಂಟಿ ಹಾಗೂ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನ ಕೂಡ ತೆರವಾಗಿತ್ತು. ತಂಡಕ್ಕೆ ಮುಂದಿನ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆಗಳು ಸಾಕಷ್ಟು ಜಾಲತಾಣಗಳಲ್ಲಿ ಓಡಾಡಿಕೊಂಡಿತ್ತು. ಅದಕ್ಕೆಲ್ಲ ಈಗ ಉತ್ತರ ಸಿಕ್ಕಿದೆ ಎಂದು ಭಾವಿಸಬಹುದಾಗಿದೆ. ಯಾಕೆಂದರೆ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಅವರನ್ನೇ ನಾಯಕನನ್ನಾಗಿ ತಂಡ ಘೋಷಿಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ, ಇದಕೆಲ್ಲ ಕಾರಣ ಪ್ರಮುಖ ಕಾರಣ ಎಬಿಡಿ ಎಂದು ಕೂಡ ಹೇಳಲಾಗುತ್ತಿದೆ ಯಾಕೆಂದರೆ ರಾಜೀನಾಮೆ ನೀಡಲು ಇದ್ದ ಪ್ರಮುಖ ಕಾರಣವೇ ಟೆನ್ಶನ್, ಆದರೆ ಸದ್ಯದ ಪರಿಸ್ಥಿತಿ ಪ್ರಕಾರ ಕೊಹ್ಲಿ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಅವರನ್ನೇ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನನ್ನಾಗಿ ಘೋಹಿಸಬೇಕು ಎಂದು ತಂಡದ ಜೊತೆ ಹಾಗೂ ಕೊಹ್ಲಿ ಜೊತೆ ಎಬಿಡಿ ಮಾತುಕತೆ ನಡೆಸಿದ್ದಾರೆ ಹಾಗೂ ತಂಡದ ಮ್ಯಾನೇಜ್ಮೆಂಟ್ ಕೂಡ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂಬುದು ತಿಳಿದು ಬಂದಿದೆ.