ಸಾರ್ವಕಾಲಿಕ ಶ್ರೇಷ್ಠ ಟಿ 20 ತಂಡ ಘೋಷಿಸಿದ ಕ್ರಿಸ್ ಮೋರಿಸ್, ಆಯ್ಕೆಯಾದವರು ಯಾರ್ಯಾರು ಗೊತ್ತೇ?? ಭಾರತದ ಎಷ್ಟು ಜನ ಆಯ್ಕೆಯಾಗಿದ್ದಾರೆ ಗೊತ್ತೇ??

ಸಾರ್ವಕಾಲಿಕ ಶ್ರೇಷ್ಠ ಟಿ 20 ತಂಡ ಘೋಷಿಸಿದ ಕ್ರಿಸ್ ಮೋರಿಸ್, ಆಯ್ಕೆಯಾದವರು ಯಾರ್ಯಾರು ಗೊತ್ತೇ?? ಭಾರತದ ಎಷ್ಟು ಜನ ಆಯ್ಕೆಯಾಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾದ ಖ್ಯಾತ ಆಲ್ ರೌಂಡರ್ ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ. ಕಳೆದ ಸೀಸನ್ ನಲ್ಲಿ ಇವರು ಬರೋಬ್ಬರಿ 17 ಕೋಟಿ ರೂಪಾಯಿಗೆ ರಾಜಸ್ತಾನ ರಾಯಲ್ಸ್ ತಂಡದ ಪಾಲಾಗಿದ್ದರು. ಗಾಯದ ಸಮಸ್ಯೆಯಿಂದ ಇವರು ಹೆಚ್ಚು ಪಂದ್ಯಗಳನ್ನ ಆಡಿರಲಿಲ್ಲ. ಲಯ ಕಳೆದುಕೊಂಡಿದ್ದ ಕಾರಣ, ಉತ್ತಮ ಪ್ರದರ್ಶನ ಸಹ ನೀಡಲಾಗಲಿಲ್ಲ.ಸೌತ್ ಆಫ್ರಿಕಾ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿರುವ ಮೋರಿಸ್, ಐಪಿಎಲ್ ಸೇರಿ ವಿವಿಧ ಲೀಗ್ ಗಳಲ್ಲಿ ಸಹ ಆಡಿದ ಅನುಭವ ಹೊಂದಿದ್ದಾರೆ.

ಸದ್ಯ ಇವರು ಟಿ 20 ಕ್ರಿಕೇಟ್ ನ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದು, ಅದು ಅತ್ಯುತ್ತಮ ತಂಡವಾಗಿದೆ ಎಂಬ ಶ್ಲಾಘನೆಗಳ ಮಹಾಪೂರ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಮೋರಿಸ್ ಪ್ರಕಟಿಸಿದ ತಂಡದಲ್ಲಿ ಐವರು ಬ್ಯಾಟ್ಸಮನ್ ಗಳು, ಇಬ್ಬರೂ ಆಲ್ ರೌಂಡರ್ ಗಳು ಹಾಗೂ ನಾಲ್ವರು ಬೌಲರ್ ಗಳು ಸ್ಥಾನಪಡೆದಿದ್ದಾರೆ. ಮೋರಿಸ್ ತಂಡದಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್.ಗೇಲ್ ಹಾಗೂ.ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರೇ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್, ಐದನೇ ಕ್ರಮಾಂಕದಲ್ಲಿ ಧೋನಿ ಇದ್ದಾರೆ.

ಕೀರನ್ ಪೋಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಆಲ್ ರೌಂಡರ್ ಗಳಾಗಿದ್ದಾರೆ. ಇನ್ನು ಸುನೀಲ್ ನರೈನ್ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದು, ಜಸಪ್ರಿತ್ ಬುಮ್ರಾ, ಬ್ರೇಟ್ ಲೀ, ಲಸಿತ್ ಮಾಲಿಂಗಾ ತಂಡದಲ್ಲಿರುವ ವೇಗದ ಬೌಲರ್ ಗಳಾಗಿದ್ದಾರೆ. ಇನ್ನು ಈ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಇರಲಿದ್ದಾರೆ. ಇದು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ರೀತಿಯಲ್ಲಿಯೂ ಅತ್ಯಂತ ಸಮರ್ಥ ತಂಡವಾಗಿದೆ. ಒಟ್ಟಾರೆಯಾಗಿ ಕ್ರಿಸ್ ಮೋರಿಸ್ ಆಯ್ಕೆ ಮಾಡಿರುವ ತಂಡ ಇಂತಿದೆ. : ರೋಹಿತ್ ಶರ್ಮಾ, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಎಂ.ಎಸ್.ಧೋನಿ, ಕೀರನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯ, ಸುನೀಲ್ ನರೈನ್, ಜಸ್ಪ್ರಿತ್ ಬುಮ್ರಾ, ಬ್ರೇಟ್ ಲೀ, ಲಸಿತ್ ಮಾಲಿಂಗಾ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.