ವಿಷ್ಣು ಸರ್ ಮಾಡಿರುವ ಹಲವಾರು ಸಿನೆಮಾಗಳಲ್ಲಿ ಪುನೀತ್ ರವರಿಗೆ ಅದೊಂದು ಮಾತ್ರ ತುಂಬಾ ಫೇವರಿಟ್. ಈ ತರ ಮತ್ತೆ ಮತ್ತೆ ಮಾಡಿ ಎನ್ನುತ್ತಿದ್ದರು. ಯಾವ ಸಿನೆಮಾ ಗೊತ್ತೇ??

ವಿಷ್ಣು ಸರ್ ಮಾಡಿರುವ ಹಲವಾರು ಸಿನೆಮಾಗಳಲ್ಲಿ ಪುನೀತ್ ರವರಿಗೆ ಅದೊಂದು ಮಾತ್ರ ತುಂಬಾ ಫೇವರಿಟ್. ಈ ತರ ಮತ್ತೆ ಮತ್ತೆ ಮಾಡಿ ಎನ್ನುತ್ತಿದ್ದರು. ಯಾವ ಸಿನೆಮಾ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಒಳ್ಳೆಯ ಕಥೆ ಹಾಗೂ ಮೇಕಿಂಗ್ ಇರುವ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಗಳನ್ನು ಕೂಡ ಕಂಡಿದೆ. ಇನ್ನು ನಾವು ಇಂದು ಪುನೀತ್ ರಾಜಕುಮಾರ್ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. ಅವರು ಕೂಡ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಒಳ್ಳೆಯ ರೀತಿಯ ಕಥೆ ಹಾಗೂ ಸಿನಿಮಾವನ್ನು ಮಾಡಲು ಹೊರಟ ಪ್ರತಿಭಾನ್ವಿತ ನಿರ್ದೇಶಕ ಹಾಗೂ ನಟರಿಗೆ ಅವಕಾಶ ನೀಡುತ್ತಾರೆ ಹೊರತು ಕೇವಲ ಸಾಮಾನ್ಯ ಸಿನಿಮಾ ಮೇಕರ್ಸ್ ಗೆ ಅಪ್ಪು ಮಣೆ ಹಾಕಿಲ್ಲ.

ಹೌದು ಯಾಕೆಂದರೆ ಅಪ್ಪು ಪ್ರತಿಭಾನ್ವಿತರನ್ನು ಮೊದಲ ಸಾಲಿನಲ್ಲಿ ಕೂರಿಸಿ ಅವರಿಗೆ ಬೆಂಬಲ ನೀಡುವುದು. ಹೀಗಾಗಿ ಇಂದು ಅದೆಷ್ಟು ಯುವ ಪ್ರತಿಭಾನ್ವಿತರಿಗೆ ಪುನೀತ್ ರಾಜಕುಮಾರ್ ಅವರು ತಮ್ಮ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಅವಕಾಶವನ್ನು ನೀಡಿದ್ದಾರೆ. ಚಿತ್ರದಲ್ಲಿ ಏನಾದರೂ ಒಳ್ಳೆಯ ಅಂಶಗಳು ಇದ್ದರೆ ಮಾತ್ರ ಪುನೀತ್ ರಾಜಕುಮಾರ್ ರವರು ಪ್ರಶಂಸೆ ಹಾಗೂ ಪ್ರೋತ್ಸಾಹವನ್ನು ನೀಡುತ್ತಾರೆ. ಇನ್ನು ಪುನೀತ್ ರಾಜಕುಮಾರ್ ಅವರು ತಮ್ಮ ಆಪ್ತರ ಬಳಿ ವಿಷ್ಣುವರ್ಧನರ ನಟನೆಯ ಒಂದು ಚಿತ್ರದ ಕುರಿತಂತೆ ಸದಾ ಹೇಳುತ್ತಿದ್ದರಂತೆ. ಈ ಚಿತ್ರದ ಕಥೆಯನ್ನು ಹಾಗೂ ಚಿತ್ರದಲ್ಲಿ ವಿಷ್ಣುವರ್ಧನ್ ರವರು ನಿರ್ವಹಿಸಿರುವ ಪಾತ್ರದ ಕುರಿತಂತೆ ಸದಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ ಅಂತೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಷ್ಟಪಟ್ಟಿರುವ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಸಿನಿಮಾ ಯಾವುದು ಗೊತ್ತಾ ಬನ್ನಿ ನಾವು ನಿಮಗೆ ನಿಮಗೆ ಹೇಳುತ್ತೇವೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಷ್ಟೊಂದು ಇಷ್ಟಪಟ್ಟಿರುವ ವಿಷ್ಣುವರ್ಧನ್ ರವರ ಸಿನಿಮಾ ನಿಷ್ಕರ್ಷ. ನಿಷ್ಕರ್ಷ ಚಿತ್ರದ ಕಥೆ ಹಾಗೂ ವಿಷ್ಣುವರ್ಧನ್ ರವರ ಪಾತ್ರ ಅಂದಿನ ಕಾಲಕ್ಕೆ ಸಾಕಷ್ಟು ಹೊಸತಾಗಿತ್ತು. ಸುನಿಲ್ ದೇಸಾಯಿರವರ ನಿರ್ದೇಶನವೂ ಕೂಡ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಇಂತಹ ಚಿತ್ರಗಳು ಮತ್ತೆ ಮತ್ತೆ ಬೇಕು ಕನ್ನಡ ಚಿತ್ರರಂಗ ಬೆಳೆಯಲು ಎಂಬುದಾಗಿ ಪುನೀತ್ ರಾಜಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ನಿಷ್ಕರ್ಷ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಏನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.