ಭಾರತದಲ್ಲಿ ಕಂಡು ಬಂತು ಹೊಸ ಚಿನ್ನ ನಿಕ್ಷೇಪ, ಆರ್ಥಿಕತೆಯನ್ನೇ ಬದಲಾಯಿಸಲಿರುವ ನಿಕ್ಷೇಪದಲ್ಲಿರುವ ಚಿನ್ನದ ಮೌಲ್ಯವೆಷ್ಟು ಗೊತ್ತೇ??

ಭಾರತದಲ್ಲಿ ಕಂಡು ಬಂತು ಹೊಸ ಚಿನ್ನ ನಿಕ್ಷೇಪ, ಆರ್ಥಿಕತೆಯನ್ನೇ ಬದಲಾಯಿಸಲಿರುವ ನಿಕ್ಷೇಪದಲ್ಲಿರುವ ಚಿನ್ನದ ಮೌಲ್ಯವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತದೇಶ ವಿಶ್ವದಲ್ಲಿ ಅತ್ಯಂತ ಹೆಚ್ಚು ಚಿನ್ನವನ್ನು ಖರೀದಿಸುವ ಅಥವಾ ಆಮದು ಮಾಡಿಕೊಳ್ಳುವಂತಹ ದೇಶ ಎಂಬುದು ಈಗಾಗಲೇ ಹಲವಾರು ಬಾರಿ ವಿಷಯಗಳಲ್ಲಿ ಚರ್ಚಿತವಾಗಿದೆ. ನಮ್ಮ ದೇಶದ ಮಹಿಳೆಯರು ಸ್ವರ್ಣ ಪ್ರಿಯರು ಎಂಬುದು ಈಗಾಗಲೇ ಹಲವಾರು ಬಾರಿ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. ಚಿನ್ನಕ್ಕೆ ಜೀವದ ಸ್ಟೇ ಬೆಲೆ ಎಂಬುದಾಗಿ ಕೆಲವೊಮ್ಮೆ ತಮಾಷೆಯಿಂದ ಆಡಿಕೊಳ್ಳುವುದನ್ನು ಕೂಡ ನಾವು ಕೇಳಿದ್ದೇವೆ.

ಕೆಲವರು ಚಿನ್ನವನ್ನು ತಮ್ಮ ಆಡಂಬರವನ್ನು ತೋರಿಸುವುದಕ್ಕಾಗಿ ಇನ್ನು ಕೆಲವರು ಅದನ್ನು ಮಾರಿ ಜೀವನವನ್ನು ನಡೆಸುವುದಕ್ಕಾಗಿ ಮತ್ತು ಮೂರನೆಯವರು ಚಿನ್ನದಲ್ಲಿ ಇನ್ವೆಸ್ಟ್ ಮಾಡುತ್ತಾರೆ. ನಿಮಗೆ ತಿಳಿದಿರಲಿ ಗೆಳೆಯರೇ ಮೊದಲಿಗೆ ನಮ್ಮ ಭಾರತ ದೇಶದಲ್ಲಿ ಚಿನ್ನದ ನಿಕ್ಷೇಪ ಕಂಡುಬಂದಂತಹ ಸ್ಥಳವೆಂದರೆ ಕರ್ನಾಟಕದ ಕೋಲಾರ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದಾದ ನಂತರ ಜಾರ್ಖಂಡ್ ಉತ್ತರಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಕೂಡ ಚಿನ್ನದ ನಿಕ್ಷೇಪಗಳು ಕಂಡು ಬಂದಿದ್ದವು. ಇನ್ನು ಈಗಾಗಲೇ ನಮಗೆಲ್ಲರಿಗೂ ತಿಳಿದಿರುವಂತೆ ಈ ಎಲ್ಲ ರಾಜ್ಯಗಳು ಕೂಡ ಸಾಕಷ್ಟು ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತೇವೆ.

ಇನ್ನು ಚಿನ್ನದ ಅದಿರಿನ ನಿಕ್ಷೇಪ ಇರುವ ರಾಜ್ಯಗಳ ಪಟ್ಟಿಯಲ್ಲಿ ಮತ್ತೊಂದು ರಾಜ್ಯ ಕೂಡ ಹೊಸದಾಗಿ ಕಂಡುಬಂದಿದೆ. ಹೌದು ಗೆಳೆಯರೇ ನಮ್ಮ ಭಾರತ ದೇಶದಲ್ಲಿ ಈಗ ಹೊಸದಾಗಿ ಚಿನ್ನದ ನಿಕ್ಷೇಪ ಕಂಡುಬಂದಿರುವ ರಾಜ್ಯವೆಂದರೆ ಅದು ಬಿಹಾರ. ಅತ್ಯಂತ ಬಡತನದ ಹಿನ್ನೆಲೆ ಹೊಂದಿರುವ ಬಿಹಾರ ರಾಜ್ಯದಲ್ಲಿ ಈಗ 20 ಕೋಟಿ ಟನ್ ಮೌಲ್ಯದ ಚಿನ್ನದ ಅದಿರಿನ ನಿಕ್ಷೇಪ ಕಂಡುಬಂದಿರುವುದು ಮುಂದಿನ ದಿನಗಳಲ್ಲಿ ರಾಜ್ಯ ಅತ್ಯಂತ ಶ್ರೀಮಂತ ರಾಜ್ಯಗಳ ಪೈಕಿ ಕಾಣಿಸಿಕೊಂಡರು ಕೂಡ ಅಚ್ಚರಿ ಪಡಬೇಕಾಗಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.