ನೋಡಲು ಅಪ್ಸರೆ, ಆದರೆ ಈ ಸುಂದರಿ ತನ್ನ ತಾಯಿಗೆ ಹೆರಿಗೆ ಮಾಡಿಸಿ ತನ್ನನ್ನು ಹುಟ್ಟಿಸಿದ ವೈದ್ಯರ ಮೇಲೆ ಕೇಸ್ ಹಾಕಿದ್ದು ಯಾಕೆ ಗೊತ್ತೇ?? ಗೆದ್ದು ಕೂಡ ಬಿಟ್ಟಿದ್ದಾರೆ.

ನೋಡಲು ಅಪ್ಸರೆ, ಆದರೆ ಈ ಸುಂದರಿ ತನ್ನ ತಾಯಿಗೆ ಹೆರಿಗೆ ಮಾಡಿಸಿ ತನ್ನನ್ನು ಹುಟ್ಟಿಸಿದ ವೈದ್ಯರ ಮೇಲೆ ಕೇಸ್ ಹಾಕಿದ್ದು ಯಾಕೆ ಗೊತ್ತೇ?? ಗೆದ್ದು ಕೂಡ ಬಿಟ್ಟಿದ್ದಾರೆ.

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ಒಬ್ಬ ಸುಂದರಿಯ ಕುರಿತಂತೆ. ಆಕೆಯ ಹೆಸರು ಈವಿ ಟೂಂಬ್ಸ್ ಎಂದು. ಈಕೆಯನ್ನು ನೋಡಿದರೆ ಬೆಳದಿಂಗಳೇ ಭೂಮಿಗಿಳಿದು ಬಂದಂತೆ ಅಷ್ಟೊಂದು ಸುಂದರಿ ಆಗಿದ್ದಾಳೆ ಈಕೆ. ಇನ್ನು ಈವಿ ಟೂಂಬ್ಸ್ ಪ್ರೊಫೆಷನಲ್ ಹಾರ್ಸ್ ರೈಡರ್ ಆಗಿದ್ದಾಳೆ. ಆದರೆ ಈಕೆ ಈಗ ಸುದ್ದಿಯಾಗುತ್ತಿರುವುದು ಆಕೆಯ ಸೌಂದರ್ಯಕ್ಕೆ ಅಲ್ಲ ಬದಲಾಗಿ ಆಕೆ ಈಗ ತನ್ನನ್ನು ಹುಟ್ಟಿಸಿದ ವೈದ್ಯರ ವಿರುದ್ಧವೇ ದೂರನ್ನು ನೀಡಿರುವುದಕ್ಕಾಗಿ.

ಹೌದು ಇದು ಕೇಳುವುದಕ್ಕೆ ವಿಚಿತ್ರ ಅಂತ ಅನಿಸಿದರೂ ಕೂಡ ನಿಜವಾಗಿ ನಡೆದಿದೆ. ಈವಿ ಟೂಂಬ್ಸ್ ನೋಡೋಕೆ ಸುರಸುಂದರಿ ಆಗಿದ್ದರೂ ಕೂಡ ಹಾರ್ಸ್ ರೈಡಿಂಗ್ ನಂತಹ ಸಾಹಸಮಯ ವೃತ್ತಿಯನ್ನು ಆಯ್ಕೆ ಮಾಡಿದ್ದರು ಕೂಡ ಆಕೆಯಲ್ಲಿ ಒಂದು ಕಾಯಿಲೆ ಮೊದಲಿನಿಂದಲೂ ಕೂಡ ಅವಳನ್ನು ಬೆಂಬಿಡದೆ ಕಾಡುತ್ತಿದೆ. ಇದಕ್ಕೆ ಕಾರಣ ಅದೇ ವೈದ್ಯ ಎಂಬುದಾಗಿ ಆಕೆಯ ವಾದವಾಗಿದೆ. ಇವಳಿಗೆ ಸ್ಪೈನಾ ಬೈಫಿಡಾ ಎಂಬ ಬೆನ್ನುಹುರಿಗೆ ಸಂಬಂಧಿಸಿದ ಕಾಯಿಲೆ ಇದೆ. ಕೆಲವೊಮ್ಮೆ ಇದರ ಕಾಟ ಹೆಚ್ಚಾದರೆ 24ಗಂಟೆಯೂ ಕೂಡ ಅವಳು ಪೈಪಿನಲ್ಲಿ ಉಸಿರಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದಕ್ಕೆ ಮುಖ್ಯ ಕಾರಣ ಆಕೆಯ ತಾಯಿ ಗರ್ಭಿಣಿಯಾಗಿದ್ದಾಗ ಅವಳಿಗೆ ಹೆರಿಗೆ ಮಾಡಿಸಿದ ವೈದ್ಯ ಅದನ್ನು ಸರಿಯಾಗಿ ಚಿಕಿತ್ಸೆ ಮಾಡದೆ ಹೆರಿಗೆ ಮಾಡಿಸಿದ. ಇದೇ ಕಾರಣದಿಂದಾಗಿ ಈವಿ ಟ್ಯೂಂಬ್ಸ್ ಗೆ ಈ ತರಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿಯೇ ಆಕೆ ಆತನ ಮೇಲೆ ಕೋರ್ಟಿನಲ್ಲಿ ಕೇಸ್ ಹಾಕಿ ಗೆದ್ದಿದ್ದಾಳೆ. ಇನ್ನು ಎಷ್ಟು ಮೊತ್ತದ ಹಣ ವೈದ್ಯರಿಂದ ಆಕೆಗೆ ಸಿಗುತ್ತದೆ ಎಂದು ತಿಳಿದುಬಂದಿಲ್ಲ ಆದರೂ ಕೂಡ ದೊಡ್ಡ ಮೊತ್ತದ ಹಣ ಸಿಗುವುದು ಖಂಡಿತ. ಇದರಿಂದಾಗಿ ಆಕೆ ಜೀವನ ಪರ್ಯಂತ ಸರಿಯಾಗುತ್ತಾಳೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.