ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟ, ತಂಡದಲ್ಲಾಗಲಿದೆ ಭಾರೀ ಬದಲಾವಣೆ. ಯಾರ್ಯಾರೆಲ್ಲ ಆಯ್ಕೆಯಾಗಲಿದ್ದಾರೆ ಗೊತ್ತೇ??

ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಪ್ರಕಟ, ತಂಡದಲ್ಲಾಗಲಿದೆ ಭಾರೀ ಬದಲಾವಣೆ. ಯಾರ್ಯಾರೆಲ್ಲ ಆಯ್ಕೆಯಾಗಲಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ನಾಲ್ಕನೇ ದಿನದಲ್ಲಿ ಮುಗಿಯುವ ಸಾಧ್ಯತೆ ದಟ್ಟವಾಗಿದೆ. ಗೆಲ್ಲಲು ಬೃಹತ್ 540 ರನ್ನುಗಳ ಟಾರ್ಗೇಟ್ ಪಡೆದ ನ್ಯೂಜಾಲೆಂಡ್ ಪ್ರಮುಖ ಐದು ವಿಕೇಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿದೆ. ಪಂದ್ಯ ಇನ್ನು ಎರಡು ದಿನ ಬಾಕಿ ಇದ್ದು, ಇರುವ ಐದು ವಿಕೇಟ್ ಸಹಾಯದಿಂದ ಎರಡು ದಿನ ಬ್ಯಾಟ್ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಭಾರತ ನಾಲ್ಕನೇ ದಿನದಲ್ಲೇ ಟೆಸ್ಟ್ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿದೆ. ಈ ಮಧ್ಯೆ ಮುಂಬರುವ ದಕ್ಷಿಣ ಆಫ್ರಿಕಾ ಸರಣಿ ಪ್ರವಾಸ ಸ್ವಲ್ಪ ದಿನಕ್ಕೆ ಮುಂದೆ ಹೋಗಿದ್ದು, ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡವನ್ನ ಮುಂಬೈ ಟೆಸ್ಟ್ ಮುಗಿದ ನಂತರ ಪ್ರಕಟ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಈ ಸರಣಿಗೆ ಭಾರತ ತಂಡದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಸದ್ಯ ಸಂಪೂರ್ಣ ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆಗೆ ಕೋಕ್ ಕೊಡುವ ಸಾಧ್ಯತೆ ದಟ್ಟವಾಗಿದೆ. ಅದಲ್ಲದೇ ಟೆಸ್ಟ್ ತಂಡದ ಉಪನಾಯಕನ ಪಟ್ಟ ಶಾಶ್ವತವಾಗಿ ರೋಹಿತ್ ಶರ್ಮಾ ಹೆಗಲ ಮೇಲೆ ಏರಲಿದೆ. ಇನ್ನು ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವ ಇಶಾಂತ್ ಶರ್ಮಾ ಸಹ ಹೊರಗುಳಿಯುವ ಸಾಧ್ಯತೆ ಇದೆ. ಇಶಾಂತ್ ಶರ್ಮಾ ಬದಲು ಸಿರಾಜ್ ಹಾಗೂ ಪ್ರಸಿದ್ಧ್ ತಂಡ ಸೇರಬಹುದು.

ಇನ್ನು ವಿಕೇಟ್ ಕೀಪರ್ ವೃದ್ಧಿಮಾನ್ ಸಹಾ ಬದಲು ರಿಷಭ್ ಪಂತ್ ತಂಡ ಸೇರಿಕೊಂಡರೇ, ಮೀಸಲು ವಿಕೇಟ್ ಕೀಪರ್ ಆಗಿ ಯುವ ಬ್ಯಾಟ್ಸಮನ್ ಕೆ.ಎಸ್.ಭರತ್ ಆಯ್ಕೆಯಾಗಬಹುದು. ನೀರಿಕ್ಷೆಯಂತೆ ಜಸ್ಪ್ರಿತ್ ಬುಮ್ರಾ ಹಾಗೂ ಮಹಮದ್ ಶಮಿ ತಂಡಕ್ಕೆ ವಾಪಸ್ ಆಗಲಿದ್ದಾರೆ. ಇನ್ನುಳಿದಂತೆ ಆರಂಭಿಕರಾಗಿ ರಾಹುಲ್, ರೋಹಿತ್ , ಮಯಾಂಕ್ ಜೊತೆ ಗಿಲ್ ಸಹ ಸ್ಥಾನ ಪಡೆಯಬಹುದು. ಶ್ರೇಯಸ್ ಅಯ್ಯರ್ ರಹಾನೆ ಜಾಗಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ದ ಆಯ್ಕೆಯಾಗಲಿರುವ ಸಂಭವನೀಯ ತಂಡ ಇಂತಿದೆ. -ಕೆ.ಎಲ್.ರಾಹುಲ್, ಮಯಾಂಕ್ ಅಗರವಾಲ್, ರೋಹಿತ್ ಶರ್ಮಾ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಸ್.ಭರತ್,ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಅಕ್ಷರ್ ಪಟೇಲ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ, ಉಮೇಶ್ ಯಾದವ್, ಮಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.