ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತೆಲುಗಿನ ರಾಜಮೌಳಿ ಗೆ, ಅಲ್ಲೂ ಅರ್ಜುನ್ ಗೆ ನೀರು ಕುಡಿಸಿದ ಪುನೀತ್ ಕಾಣಸಿದ ಗಂಧದಗುಡಿ. ಹೇಗೆ ಗೊತ್ತೇ??

39

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಮೊದಲ ಬಾರಿಗೆ ಅವರ ಅಭಿಮಾನಿಗಳು ನಗುಮುಖದಲ್ಲಿ ಇದ್ದಾರೆ ಅದಕ್ಕೆ ಕಾರಣ ಪುನೀತ್ ರಾಜಕುಮಾರ್ ರವರೇ ಎಂದು ಹೇಳಬಹುದಾಗಿದೆ. ಪುನೀತ್ ರಾಜಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಎಂದೆ ಕರೆಸಿಕೊಂಡಿರುವ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಇಂದು ಪಿಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಇನ್ನು ಟೀ‌ಸರನ್ನು ಬಿಡುಗಡೆ ಮಾಡಿದವರು ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಆಗಿರುವ ಶ್ರೀ ಬಸವರಾಜ ಬೊಮ್ಮಾಯಿ ರವರು.

ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ನಟರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾಗಿ ರುವ ಗಂಧದಗುಡಿ ಡಾಕ್ಯುಮೆಂಟರಿಯನ್ನು ಶೇರ್ ಮಾಡುವುದರ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಮತ್ತೊಮ್ಮೆ ಸ್ಮರಿಸಿಕೊಂಡಿದ್ದಾರೆ. ಇನ್ನು ಈಗಾಗಲೇ ದೇಶಾದ್ಯಂತ ಗಂಧದಗುಡಿಯ ಡಾಕ್ಯುಮೆಂಟರಿ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಇಷ್ಟು ಮಾತ್ರವಲ್ಲದೆ ತೆಲುಗು ಚಿತ್ರರಂಗದ ಬಿಗ್ ಬಜೆಟ್ ಮೂವಿ ಗಳಾಗಿರುವ ಪುಷ್ಪ ಹಾಗೂ ಆರ್ ಆರ್ ಆರ್ ಚಿತ್ರಗಳನ್ನು ಕೂಡ ಗಂಧದಗುಡಿ ಟೀಸರ್ ಮೀರಿಸಿದೆ.

ಅದು ಹೇಗೆ ಎಂಬುದನ್ನು ಕೂಡ ನಾವು ನಿಮಗೆ ಹೇಳುತ್ತೇವೆ. ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಗ್ರೀನ್ ಪ್ರಾಜೆಕ್ಟ್ ಆಗಿರುವ ಗಂಧದಗುಡಿಯ ಡಾಕ್ಯುಮೆಂಟರಿ ಟೀಸರ್ ಬಿಡುಗಡೆಯಾಗಿ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಂದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ನಟನೆಯ ಪುಷ್ಪ ಚಿತ್ರದ ಟ್ರೈಲರ್ 6 ಗಂಟೆಗೆ ಬಿಡುಗಡೆಯಾಗುವುದರಿಂದ ಟ್ವಿಟರ್ನಲ್ಲಿ ಅದು ಕೂಡ ಸದ್ದು ಮಾಡುತ್ತಿದೆ. ಇನ್ನು ಇದೆ 9ನೇ ತಾರೀಕು ಆರ್ ಆರ್ ಆರ್ ಚಿತ್ರದ ಟ್ರೈಲರ್ ಬಿಡುಗಡೆಯಾಗುವುದರಿಂದ ಅದು ಕೂಡ ಟ್ರೆಂಡ್ ಆಗುತ್ತಿದೆ. ಆದರೆ ಇವೆರಡು ಚಿತ್ರಗಳನ್ನು ಮೀರಿಸಿ ಗಂಧದಗುಡಿಯ ಟ್ರೆಂಡ್ ಎನ್ನುವುದು ಟ್ವಿಟರ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ನಡೆಯುತ್ತಿದೆ. ಹೀಗಾಗಿ ಎರಡು ಚಿತ್ರಗಳನ್ನು ಮೀರಿಸಿ ಪುನೀತ್ ರಾಜಕುಮಾರ್ ರವರ ಗಂಧದಗುಡಿಯ ಟೀಸರ್ ಟ್ವಿಟರ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

Get real time updates directly on you device, subscribe now.