ಪುನೀತ್ ರಾಜ್ ಕುಮಾರ್ ಎಂದು ತಿಳಿಯದೆ ನೇರವಾಗಿ ಗುದ್ದುಕೊಂಡೇ ಹೋದ ವ್ಯಕ್ತಿ, ಪುನೀತ್ ಮಾಡಿದ್ದೇನು ಗೊತ್ತೇ?? ದೊಡ್ಮನೆ ಸಂಸ್ಕಾರ ಎಂತದ್ದು ಗೊತ್ತೇ??

ಪುನೀತ್ ರಾಜ್ ಕುಮಾರ್ ಎಂದು ತಿಳಿಯದೆ ನೇರವಾಗಿ ಗುದ್ದುಕೊಂಡೇ ಹೋದ ವ್ಯಕ್ತಿ, ಪುನೀತ್ ಮಾಡಿದ್ದೇನು ಗೊತ್ತೇ?? ದೊಡ್ಮನೆ ಸಂಸ್ಕಾರ ಎಂತದ್ದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಈಗಾಗಲೇ ದೈಹಿಕವಾಗಿ ಕಳೆದುಕೊಂಡು ಸಾಕಷ್ಟು ದಿನಗಳಾದರೂ ಕೂಡ ಅವರು ಮಾಡಿರುವ ಒಳ್ಳೆ ಕೆಲಸಗಳಿಂದಾಗಿ ಇಂದಿಗೂ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ತೆರೆಯ ಮೇಲೆ ಮಾತ್ರ ಪವರ್ ಸ್ಟಾರ್ ಆಗಿದ್ದರು ನಿಜಜೀವನದಲ್ಲಿ ಎಲ್ಲರೂ ಮೆಚ್ಚುವಂತಹ ಅಜಾತಶತ್ರು ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

ಸಾಮಾನ್ಯರಲ್ಲಿ ಕೂಡ ಸಾಮಾನ್ಯರಾಗಿ ವರ್ತಿಸುತ್ತಿದ್ದರು ನಮ್ಮ ನೆಚ್ಚಿನ ಅಪ್ಪು. ಕನ್ನಡ ಚಿತ್ರರಂಗದ ನಟಸಾರ್ವಭೌಮನ ಮಗನಾಗಿದ್ದರೂ ಕೂಡ ಎಲ್ಲರೊಂದಿಗೆ ನೆಚ್ಚಿನ ಅಪ್ಪು ಆಗಿ ಕಾಣಿಸುತ್ತಿದ್ದರು. ಇದು ಪುನೀತ್ ರಾಜಕುಮಾರ್ ರವರಿಂದ ಅಲ್ಲದೆ ಬೇರೆ ಯಾರಿಂದಲೂ ಕೂಡ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಅದೆಷ್ಟೋ ಬಾರಿ ಅವರ ಬಳಿ ಕಷ್ಟ ಎಂದು ಬಂದವರಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿ ಅವರ ಕಷ್ಟವನ್ನು ಪರಿಹರಿಸುವ ಕೆಲಸವನ್ನು ಕೂಡ ಪುನೀತ್ ರಾಜಕುಮಾರ್ ಅವರು ಹಲವಾರು ಬಾರಿ ಮಾಡಿರುವುದು ಈಗ ಅವರ ಮರಣದ ನಂತರ ತಿಳಿದು ಬರುತ್ತಿದೆ.

ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಹುಶಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ವಿಡಿಯೋದಲ್ಲಿ ಯಾವುದು ಮಾರುಕಟ್ಟೆಯಲ್ಲಿ ಅಥವಾ ಚಿತ್ರೀಕರಣಕ್ಕಾಗಿ ಹೋಗುತ್ತಿದ್ದರು ಎಂದು ಭಾವಿಸಲಾಗುತ್ತದೆ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಎದುರಿಗೆ ಬಂದಿರುವುದು ಪುನೀತ್ ರಾಜಕುಮಾರ್ ರವರು ಎಂದು ತಿಳಿಯದೆ ಅವರಿಗೆ ತಾಗಿಕೊಂಡು ಹೋಗಿದ್ದಾರೆ. ಆದರೂ ಕೂಡ ಪುನೀತ್ ರಾಜಕುಮಾರ್ ಅವರ ಬೇಸರ ಪಟ್ಟುಕೊಳ್ಳದೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ತಾನೊಬ್ಬ ಸ್ಟಾರ್ ಆಗಿದ್ದರು ಕೂಡ ಏನು ನಡೆದಿಲ್ಲ ಎನ್ನುವಂತೆ ಪುನೀತ್ ಮುಂದೆ ಹೋಗುತ್ತಾರೆ, ಇನ್ನು ಕೆಲವರು ಇದ್ದಾರೆ, ಸ್ಟಾರ್ ಪಟ್ಟ ಸಿಕ್ಕ ಕೂಡ ಜನರನ್ನು ಮುಟ್ಟುವುದು ಕೂಡ ಇಲ್ಲ, ಇನ್ನು ಹೀಗೆ ಮಾಡಿದರೆ ಮುಗಿತು ಕಥೆ. ಇದು ಪುನೀತ್ ರಾಜಕುಮಾರ್ ಅವರ ಸರಳತೆಯನ್ನು ಎಲ್ಲರಿಗೂ ಪರಿಚಯಿಸುತ್ತದೆ. ಈ ವಿಡಿಯೋವನ್ನು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.