ಗೀತಕ್ಕನವರ ತಂಗಿ ಮಂಗಳಮ್ಮ ನವರನ್ನು ರಾಘಣ್ಣನವರು ಮದುವೆಯಾಗಿದ್ದು ಹೇಗೆ ಗೊತ್ತಾ?? ಇಲ್ಲಿದೆ ನೋಡಿ ಸಂಪೂರ್ಣ ಕಥೆ.

ಗೀತಕ್ಕನವರ ತಂಗಿ ಮಂಗಳಮ್ಮ ನವರನ್ನು ರಾಘಣ್ಣನವರು ಮದುವೆಯಾಗಿದ್ದು ಹೇಗೆ ಗೊತ್ತಾ?? ಇಲ್ಲಿದೆ ನೋಡಿ ಸಂಪೂರ್ಣ ಕಥೆ.

ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ದೊಡ್ಡಮನೆಯ ಕುರಿತಂತೆ. ನಿಮಗೆಲ್ಲಾ ಗೊತ್ತಿದೆ ಕನ್ನಡ ಚಿತ್ರರಂಗದ ದೊಡ್ಡ ಮನೆಯೆಂದರೆ ರಾಜಕುಮಾರ್ ರವರ ಕುಟುಂಬ. ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್ ಹಾಗೂ ಅವರ ಕುಟುಂಬಸ್ಥರು ನೀಡಿರುವ ಕೊಡುಗೆಯಿಂದಾಗಿ ಅವರನ್ನು ಕನ್ನಡ ಚಿತ್ರರಂಗದ ದೊಡ್ಡ ಮನೆಯವರು ಎಂದು ಕರೆಯಲಾಗುತ್ತದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಹಿಡಿದು ಇಂದಿನವರೆಗೂ ಕೂಡ ಹಲವಾರು ನಟ ಹಾಗೂ ನಟಿಯರು ದೊಡ್ಡಮನೆಯ ಸಂಸ್ಥೆಯಿಂದಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಇನ್ನು ದೊಡ್ಡ ಮನೆಯವರು ಪ್ರತಿಯೊಬ್ಬರು ಕೂಡ ಸಮಾಜದಲ್ಲಿ ಉತ್ತಮ ಕಾರ್ಯಗಳ ಮೂಲಕ ಇಂದಿಗೂ ಕೂಡ ದೊಡ್ಡಮನೆಯ ಘನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ರಾಘವೇಂದ್ರರಾಜಕುಮಾರ ರವರ ಕುರಿತು. ನಿಮಗೆಲ್ಲ ತಿಳಿದಿರುವಂತೆ ರಾಘವೇಂದ್ರ ರಾಜಕುಮಾರ್ ರವರ ಮದುವೆಯಾಗಿರುವುದು ಮಂಗಳಮ್ಮ ನವರನ್ನು. ಪ್ರೀತಿಸಿ ಮದುವೆಯಾದ ಮೇಲೆ ಕೂಡ ರಾಘವೇಂದ್ರ ರಾಜಕುಮಾರ್ ರವರಿಗೆ ಚಿತ್ರಗಳು ಕೈಹಿಡಿಯಲಿಲ್ಲ ಮತ್ತು ಆರೋಗ್ಯ ಸಮಸ್ಯೆ ಕೂಡ ಅವರನ್ನು ಬೆಂಬಿಡದೆ ಕಾಡುತಿತ್ತು.

ಈ ಸಮಯದಲ್ಲಿ ಅವರ ಹಿಂದೆ ಬೆನ್ನೆಲುಬಾಗಿ ನಿಂತವರು ಮಂಗಳಮ್ಮ. ಹಲವಾರು ಕಾರ್ಯಕ್ರಮಗಳಲ್ಲಿ ರಾಘವೇಂದ್ರರಾಜಕುಮಾರ್ ರವರು ಮಂಗಳಮ್ಮ ನನ್ನ ಹೆಂಡತಿಯಲ್ಲ ತಾಯಿಯಂತೆ ನನ್ನ ಸೇವೆ ಮಾಡಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಅಣ್ಣಾವ್ರಿಗೆ ತಮ್ಮ ಮಕ್ಕಳು ಸಿನಿಮಾಗೆ ಬರುವುದು ಇಷ್ಟವಿರಲಿಲ್ಲ ಆದರೂ ಕೂಡ ನಿಮಗೆ ಬರುವುದಾದರೆ ಮದುವೆಯಾದಮೇಲೆ ಬರಬೇಕು ಎಂಬುದಾಗಿ ಷರತ್ತನ್ನು ವಿಧಿಸಿದ್ದರು. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ರವರು ಬಂಗಾರಪ್ಪನವರ ಮಗಳಾಗಿರುವ ಗೀತ ಅವರನ್ನು ಮದುವೆಯಾಗುತ್ತಾರೆ.

ಈ ಸಂದರ್ಭದಲ್ಲಿ ಮದುವೆಯಲ್ಲಿ ಲವಲವಿಕೆ ಆಗಿ ಮಂಗಳಮ್ಮ ನವರು ಓಡಾಡಿಕೊಂಡಿರುತ್ತಾರೆ ಅವರು ರಾಘಣ್ಣನವರ ಕಣ್ಣಿಗೆ ಬೀಳುತ್ತಾರೆ. ಆಗ ರಾಘಣ್ಣನವರು ಮದುವೆಯಾದರೆ ಇವರನ್ನೇ ಮದುವೆಯಾಗಬೇಕು ಎಂಬುದಾಗಿ ಅಂದುಕೊಳ್ಳುತ್ತಾರೆ ಇನ್ನು ನಿಮಗೆ ಗೊತ್ತಿರದ ವಿಷಯವೇನೆಂದರೆ ಗೀತಕ್ಕನವರ ಚಿಕ್ಕಮ್ಮನ ಮಗಳು ಮಂಗಳಮ್ಮನವರಾಗಿರುತ್ತಾರೆ.

ಇನ್ನು ಇವರಿಬ್ಬರ ನಡುವೆ ಪ್ರೀತಿ ಬಲವಾಗಿ ಮೂಡುತ್ತದೆ. ನಂತರ ರಾಘವೇಂದ್ರ ರಾಜಕುಮಾರ್ ರವರ ತಮ್ಮ ತಂದೆ ಹಾಗು ತಾಯಿಯರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇನ್ನು ಮದುವೆಯಾದ ನಂತರ ನಿಮಗೆಲ್ಲರಿಗೂ ತಿಳಿದಿರುವಂತೆ ರಾಘವೇಂದ್ರ ರಾಜಕುಮಾರ್ ರವರಿಗೆ ಸಾಕಷ್ಟು ಬಾರಿ ಆರೋಗ್ಯ ಸಮಸ್ಯೆಗಳು ಎದುರಾಗಿದ್ದರೂ ಕೂಡ ಅದನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಅವರಿಗೆ ಬೆನ್ನೆಲುಬಾಗಿ ನಿಂತವರು ಅವರ ಧರ್ಮಪತ್ನಿ ಯಾಗಿರುವ ಮಂಗಳಮ್ಮ ನವರು.

ಗಂಡನ ಪ್ರತಿಯೊಂದು ಕಷ್ಟದ ಸಂದರ್ಭಗಳಲ್ಲಿ ಕೂಡ ಅವರಿಗೆ ನಿಜವಾದ ಶಕ್ತಿಯಾಗಿ ನಿಲ್ಲುತ್ತಾರೆ. ಇನ್ನು ದೊಡ್ಮನೆ ಕುಟುಂಬದ ಸೊಸೆಯಾಗಿ ಅಕ್ಕ ಗೀತಕ್ಕ ಹಾಗೂ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಕೂಡ ಹೊಂದಿದ್ದರು. ಇನ್ನು ಇವರಿಗೆ ಯುವರಾಜ ಕುಮಾರ್ ಹಾಗೂ ವಿನಯ ರಾಜಕುಮಾರ್ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ. ರಾಘಣ್ಣ ನವರು ಇಂದಿಗೂ ಕೂಡಾ ಆರೋಗ್ಯವಂತರಾಗಿದ್ದಾರೆ ಎಂದರೆ ಖಂಡಿತವಾಗಿ ಅದಕ್ಕೆ ಮಂಗಳಮ್ಮ ನವರೆ ಕಾರಣ ಎಂದು ಹೇಳಿದರೂ ಕೂಡ ತಪ್ಪಾಗಲಾರದು.