ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾ ತಲುಪಿತು ಪುನೀತ್ ಕೆಲಸ, ಅಪ್ಪು ಕುರಿತು ತಿಳಿಯುತ್ತಿದ್ದಂತೆ ಡೇವಿಡ್ ವಾರ್ನರ್ ಮಾಡಿದ್ದೇನು ಗೊತ್ತೇ??

ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾ ತಲುಪಿತು ಪುನೀತ್ ಕೆಲಸ, ಅಪ್ಪು ಕುರಿತು ತಿಳಿಯುತ್ತಿದ್ದಂತೆ ಡೇವಿಡ್ ವಾರ್ನರ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ಆಗಲಿ ಈಗಾಗಲೇ ತಿಂಗಳ ಮೇಲೆ ಕಳೆದಿದ್ದರು ಕೂಡ ಅವರ ನೆನಪು ಎನ್ನುವುದು ಬೆಂಬಿಡದೆ ನಮ್ಮನ್ನೆಲ್ಲ ಕಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಯಾರು ಎಂದು ತಿಳಿಯದವರೂ ಕೂಡ ಅವರ ಸಾಧನೆಗಳನ್ನು ಕೇಳಿ ಅವರನ್ನು ಕಳೆದುಕೊಂಡಿರುವ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದಕ್ಕೆ ಸಾಕ್ಷಿಯೆಂಬಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ದರ್ಶನ ಪಡೆಯಲು ದೂರದೂರದ ರಾಜ್ಯಗಳಿಂದಲೂ ಕೂಡ ದಿನಕ್ಕೆ ಹತ್ತರಿಂದ ಹದಿನೈದು ಸಾವಿರ ಜನರು ಸಾಲಾಗಿ ನಿಂತು ಬಂದು ದರ್ಶನವನ್ನು ಮಾಡಿಕೊಂಡು ಹೋಗುತ್ತಾರೆ.

ಬದುಕಿನ ಅವಧಿಯಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಒಳ್ಳೆಯ ಕೆಲಸದ ಸಂಪಾದನೆ ಇದು ಎಂದರೆ ಖಂಡಿತವಾಗಿಯೂ ತಪ್ಪಲ್ಲ. ಪುನೀತ್ ರಾಜಕುಮಾರ್ ರವರು ಕೇವಲ ನಾಯಕನಟನಾಗಿ ಮಾತ್ರವಲ್ಲದೆ ತಮ್ಮ ಮಾನವೀಯ ಗುಣಗಳನ್ನು ಕೂಡ ಪ್ರದರ್ಶಿಸಿ ಎಲ್ಲರ ಮನವನ್ನು ಗೆದ್ದವರು. ಕಷ್ಟ ಎಂದವರಿಗೆ ಕೂಡಲೆ ತನ್ನ ಕೈಲಾದಷ್ಟು ಸಹಾಯವನ್ನು ಮಾಡಿ ಅವರ ಜೀವನ ಹಸನಾಗುವಂತೆ ಮಾಡಿರುವ ಪುಣ್ಯಾತ್ಮ ನಮ್ಮ ಅಪ್ಪು.

ಇನ್ನು ಈಗಾಗಲೇ ಪುನೀತ್ ರಾಜಕುಮಾರ್ ರವರು ಕೋಟ್ಯಾಂತರ ರೂಪಾಯಿ ಹಣವನ್ನು ಅನಾಥಾಶ್ರಮ ವೃದ್ಧಾಶ್ರಮ ಹೀಗೆ ಹಲವಾರು ಕಾರ್ಯಗಳಿಗಾಗಿ ವಿನಿಯೋಗಿಸಿ ರುವುದು ಅವರ ಮರಣದ ನಂತರ ಎಲ್ಲರಿಗೂ ತಿಳಿದೇ ಇದೆ. ಇನ್ನು ತಮ್ಮ ಸ್ನೇಹ ಸ್ವಭಾವದ ಮೂಲಕ ಎಲ್ಲರನ್ನೂ ಕೂಡ ತನ್ನತ್ತ ಸೆಳೆಯುವಂತೆ ಮಾಡುತ್ತಿದ್ದ ಮೇರು ವ್ಯಕ್ತಿತ್ವ ಅಪ್ಪು ಅವರದ್ದು. ಇನ್ನು ಇವರ ಮೇರು ವ್ಯಕ್ತಿತ್ವಕ್ಕೆ ಮಾರು ಹೋಗಿರುವ ಹೊಸ ಸೆಲೆಬ್ರಿಟಿ ಇನ್ಯಾರೂ ಅಲ್ಲ ಡೇವಿಡ್ ವಾರ್ನರ್. ಹೌದು ಗೆಳೆಯರೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಓಪನಿಂಗ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರು ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡಿಗೆ ಪುನೀತ್ ರಾಜಕುಮಾರ್ ರವರ ಮುಖಕ್ಕೆ ತಮ್ಮ ಮುಖವನ್ನು ಅಂಟಿಸಿ ರೆಸ್ಪೆಕ್ಟ್ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವುದರ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.