9 ನೇ ತರಗತಿಗೆ ನಟಿಯಾಗಿ ಮಿಂಚಿದ ಚೆಲುವೆ, ವಿಮಾನ ನಿಲ್ದಾಣದಲ್ಲಿಯೇ ಸ್ನಾನ ಮಾಡುತ್ತಿದ್ದರು, ಯಾಕೆ ಗೊತ್ತೇ?? ಟಾಪ್ ನಟಿಯ ಕುರಿತು ನೀವರಿಯದ ಮಾಹಿತಿ.

9 ನೇ ತರಗತಿಗೆ ನಟಿಯಾಗಿ ಮಿಂಚಿದ ಚೆಲುವೆ, ವಿಮಾನ ನಿಲ್ದಾಣದಲ್ಲಿಯೇ ಸ್ನಾನ ಮಾಡುತ್ತಿದ್ದರು, ಯಾಕೆ ಗೊತ್ತೇ?? ಟಾಪ್ ನಟಿಯ ಕುರಿತು ನೀವರಿಯದ ಮಾಹಿತಿ.

ನಮಸ್ಕಾರ ಸ್ನೇಹಿತರೇ ನಮಗೆ ಭಾರತೀಯ ಚಿತ್ರರಂಗದಲ್ಲಿ ಸಾಧನೆ ಮಾಡಿದಂತಹ ನಾಯಕ ಹಾಗೂ ನಾಯಕಿಯರ ಜೀವನದ ಕುರಿತಂತೆ ಹಾಗೂ ಅವರ ಜೀವನದಲ್ಲಿ ಕಂಡಂತಹ ಕಷ್ಟ-ಸುಖಗಳ ಕುರಿತಂತೆ ತಿಳಿಯಲು ಸಾಕಷ್ಟು ಕಾತುರರಾಗಿರುತ್ತೇವೆ. ಇಂದು ನಾವು ಮಾತನಾಡಲು ಹೊರಟಿರುವುದು ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿರುವ ಲೆಜೆಂಡರಿ ನಟಿ ಜಯಪ್ರದಾರವರ ಕುರಿತಂತೆ.

ಜಯಪ್ರದಾರವರ ಸಿನಿಮಾ ಬದುಕಿನ ಹಾದಿ ಅಷ್ಟೊಂದು ಸುಖಕರವಾಗಿರಲಿಲ್ಲ. ಹಾಗಿದ್ದರೆ ಇಂದಿನ ವಿಚಾರದಲ್ಲಿ ನಾವು ಅವರ ಏಳುಬೀಳಿನ ಸಿನಿಮಾ ಪಯಣದ ಕುರಿತಂತೆ ಸವಿವರವಾಗಿ ಹೇಳಲಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಜಯಪ್ರದಾ ರವರಿಗೆ ಮೊದಲ ಚಿತ್ರದಲ್ಲಿ ಕೇವಲ ಹತ್ತು ರೂಪಾಯಿ ಸಂಭಾವನೆ ಸಿಕ್ಕಿತ್ತಂತೆ. ಇನ್ನು ಜಯಪ್ರದಾರವರ ತೆಲುಗು ಚಿತ್ರರಂಗದ ಮೂಲಕ ಮೊದಲ ಬಾರಿಗೆ ಸಿನಿ ಜಗತ್ತಿಗೆ ಪಾದರ್ಪಣೆ ಮಾಡುತ್ತಾರೆ.

ಇನ್ನು ಜಯಪ್ರದಾ ಅವರ ನಿಜವಾದ ಹೆಸರು ಲಲಿತಾರಾಣಿ ಎಂದು. ಕೇವಲ ಒಂಬತ್ತನೇ ತರಗತಿಯಲ್ಲಿ ಇರಬೇಕಾದರೆ ಜಯಪ್ರದಾರವರು ಶಾಲೆಯ ವಾರ್ಷಿಕೋತ್ಸವ ಕ್ಕಾಗಿ ಡ್ಯಾನ್ಸ್ ಮಾಡುತ್ತಿದ್ದಾಗ ತೆಲುಗು ಚಿತ್ರರಂಗದ ನಿರ್ದೇಶಕರೊಬ್ಬರು ಅವರನ್ನು ನೋಡಿ ತಮ್ಮ ಚಿತ್ರದಲ್ಲಿ ಐದು ನಿಮಿಷದ ಪಾತ್ರಕ್ಕೆ ನೃತ್ಯ ಮಾಡುವಂತೆ ಕೇಳಿಕೊಳ್ಳುತ್ತಾರೆ. ಇಲ್ಲಿಂದ ಜಯಪ್ರದಾರವರ ಸಿನಿಮಾ ಪಯಣ ಶುರುವಾಗುತ್ತದೆ. ಅವರು ಮಾಡಿದ ಡ್ಯಾನ್ಸ್ ನಿಂದಾಗಿ ಅವರು ಚಿತ್ರರಂಗಕ್ಕೆ ಬರುವಂತೆ ಆಯಿತು ಎಂದರೆ ತಪ್ಪಾಗಲಾರದು.

ಇನ್ನು ಜಯಪ್ರದಾರವರ ಅಂದಿನ ಕಾಲದಲ್ಲಿ ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬಹುಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಅವರು ಸಾಕಷ್ಟು ಬ್ಯುಸಿ ಆಗಿರುತ್ತಿದ್ದರು. ಹೀಗಾಗಿ ಅವರು ವಿಮಾನ ನಿಲ್ದಾಣದಲ್ಲಿಯೇ ಸ್ನಾನವನ್ನು ಮಾಡುತ್ತಿದ್ದರು. ಕೇವಲ ಸ್ನಾನ ಮಾತ್ರವಲ್ಲದೆ ಮೇಕಪ್ ಕೂಡ ವಿಮಾನನಿಲ್ದಾಣದಲ್ಲಿ ಮಾಡಿಕೊಳ್ಳುತ್ತಿದ್ದರು. ಇನ್ನು ಸ್ವತಹ ಜಯಪ್ರದಾರವರ ಹೇಳುವಂತೆ ಒಂದು ದಿನದಲ್ಲಿ 5 ಶಿಫ್ಟ್ ಪ್ರಕಾರ ಕೆಲಸ ಮಾಡುತ್ತಿದ್ದರಂತೆ.

ಜಯಪ್ರದಾ ರವರು ಇಲ್ಲಿಯವರೆಗೆ 8 ಭಾಷೆಗಳಲ್ಲಿ ಬರೋಬ್ಬರಿ ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನರಂಜಿಸಿದ್ದಾರೆ. ಇನ್ನು ಜಯಪ್ರದಾರವರ ರಾಜಕೀಯ ಪ್ರಯಾಣದ ಕುರಿತಂತೆ ಹೇಳುವುದಾದರೆ ಇವರು 2004 ರಿಂದ 2014 ರವರೆಗೆ ಉತ್ತರ ಪ್ರದೇಶದ ರಾಂಪುರ ಸಿಟಿಯಿಂದ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಯುವರ್ ಸಂಸದೆ ಆಗಿದ್ದ ಸಂದರ್ಭದಲ್ಲಿ ಹಲವಾರು ವಿಚಾರಗಳು ಕೂಡ ಸಾಕಷ್ಟು ಸುದ್ದಿಯನ್ನು ಮಾಡಿದ್ದವು.

ಇಂದಿಗೂ ಕೂಡ ಭಾರತೀಯ ಇತಿಹಾಸದಲ್ಲಿ ಜಯಪ್ರದಾರವರ ಒಬ್ಬ ಜನಪ್ರಿಯ ನಟಿಯಾಗಿ ಹಾಗೂ ಜನಾನುರಾಗಿ ಜನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಜಯಪ್ರದಾ ರವರು ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿ ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ರವರೊಂದಿಗೆ ನಟಿಸಿದ್ದ ಅಂತಹ ಬಂಧನ ಚಿತ್ರದಲ್ಲಿ ಸಾಕಷ್ಟು ಮನೋಜ್ಞವಾಗಿ ನಟಿಸಿದ್ದಾರೆ. ನಟಿ ಜಯಪ್ರದಾರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.