ದೇವರು ಅಪ್ಪುವಿನ ಆತ್ಮವನ್ನು ಸುಮ್ಮನೆ ಬಿಡುವುದಿಲ್ಲ, ಇದು ನನ್ನ ನಂಬಿಕೆ ಎಂದ ರಾಘವೇಂದ್ರ ರಾಜ್ ಕುಮಾರ್, ಹೀಗೆ ಹೇಳಿದ್ಯಾಕೆ ಗೊತ್ತೇ??

ದೇವರು ಅಪ್ಪುವಿನ ಆತ್ಮವನ್ನು ಸುಮ್ಮನೆ ಬಿಡುವುದಿಲ್ಲ, ಇದು ನನ್ನ ನಂಬಿಕೆ ಎಂದ ರಾಘವೇಂದ್ರ ರಾಜ್ ಕುಮಾರ್, ಹೀಗೆ ಹೇಳಿದ್ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ತಿಂಗಳು ಪೂರ್ತಿಯಾದರೂ ಕೂಡಾ ಅವರ ನೆನಪುಗಳು ನಮ್ಮ ಮನಸ್ಸುಗಳಲ್ಲಿ ಹಾಗೆ ಚಿರಸ್ಥಾಯಿಯಾಗಿದೆ. ಇಂದಿಗೂ ಕೂಡ ಕಂಠೀರವ ಸ್ಟುಡಿಯೋಗೆ ಪುನೀತ್ ರಾಜಕುಮಾರ್ ಅವರ ಸಮಾಧಿಯ ಬಳಿ ದಿನಕ್ಕೆ ಸಾವಿರಾರು ಅಭಿಮಾನಿಗಳು ಅವರ ದರ್ಶನವನ್ನು ಪಡೆಯಲು ಸಾಲುಗಟ್ಟಿ ನಿಲ್ಲುತ್ತಾರೆ. ಒಬ್ಬ ಮನುಷ್ಯ ಬದುಕಿದ್ದಾಗ ಏನು ಸಾಧಿಸಿದ್ದಾನೆ ಎಂಬುದನ್ನು ಆತನ ಮರಣದ ನಂತರ ತಿಳಿಯುತ್ತಾರೆ ಎಂಬುದಾಗಿ ಹಿರಿಯರು ಹೇಳುತ್ತಾರೆ.

ಪುನೀತ್ ರಾಜಕುಮಾರ್ ರವರ ಇಂತಹ ಅರ್ಥಪೂರ್ಣ ಜೀವನವನ್ನು ನೋಡಿದಾಗ ನಮಗೆ ಆ ಮಾತುಗಳು ಪೂರ್ಣವಾಗಿ ಸತ್ಯ ಎಂದೆನಿಸುತ್ತದೆ. ಇತ್ತೀಚಿಗೆ ಅಭಿಮಾನಿಗಳು ಶಬರಿಮಲೆಗೆ ಹೋಗುವಾಗ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ತಮ್ಮೊಂದಿಗೆ ಹಿಡಿದುಕೊಂಡು ಹೋಗಿದ್ದು ಮತ್ತು ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಕನ್ನಡಿಗರು ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು ಹೀಗೆ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜಕುಮಾರ್ ಅವರು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಚಿರಂಜೀವಿ ಆಗಿದ್ದಾರೆ ಎಂಬುದನ್ನು ನಿರೂಪಿಸುತ್ತದೆ.

ಇನ್ನು ಪುನೀತ್ ರಾಜಕುಮಾರ್ ಅವರು ಪೂರ್ಣಿಮಾ ಎಂಟರ್ಪ್ರೈಸಸ್ ನ ಮೂಲಕ ನೇತ್ರಾವತಿ ಎಂಬ ಧಾರವಾಹಿಯನ್ನು ಕೂಡ ನಿರ್ಮಿಸಿರುವುದರಿಂದ ಟೆಲಿವಿಷನ್ ಕ್ಷೇತ್ರದಲ್ಲಿ ಕೂಡ ಅವರಿಗೆ ಸಾಕಷ್ಟು ಪರಿಚಯವಿದೆ. ಹೀಗಾಗಿ ಕನ್ನಡ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಅಪ್ಪು ಅಮರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಕುಟುಂಬಸ್ಥರು ಹಾಗೂ ನಟರು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಪಾಪುವಿಗೆ ದೇವರು ಆಸ್ತಿ ಅಂತಸ್ತು ಐಶ್ವರ್ಯ ಎಲ್ಲವನ್ನೂ ನೀಡಿದರೆ 46ನೇ ವಯಸ್ಸಿನ ನಂತರ ಐದು ನಿಮಿಷ ವನ್ನು ಕೂಡ ಹೆಚ್ಚಿಗೆ ಆಯಸ್ಸು ನೀಡಲಿಲ್ಲ. ಮರಣದ 11ನೇ ದಿನದ ದೇವರು ಆತ್ಮವನ್ನು ಇಲ್ಲಿರಲು ಬಿಡುವುದಿಲ್ಲ ಈಗಾಗಲೇ ಅಪ್ಪು ಬೇರೊಂದು ಕಡೆ ಜನ್ಮ ಪಡೆದಿದ್ದಾನೆ ಎಂಬುದು ನನ್ನ ಭಾವನೆ ಎಂಬುದಾಗಿ ಭಾವುಕರಾಗಿ ಹೇಳಿಕೊಳ್ಳುತ್ತಾರೆ.