ಮತ್ತೆ ಬಂದರು ಗೋಲ್ಡನ್ ಸ್ಟಾರ್ ಗಣೇಶ್. ಹೊಸ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ. ಪ್ರಸಾರ. ವಿಶೇಷತೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕಾಮಿಡಿ ಟೈಮ್ ಪ್ರೋಗ್ರಾಮ್ ನಡೆಸಿ ಕೊಡುತ್ತಾ ನಮಸ್ಕಾರ ನಮಸ್ಕಾರ ನಮಸ್ಕಾರ ಎಂಬ ಡೈಲಾಗ್ ಹೊಡೆಯುತ್ತ ಎಲ್ಲರ ಮುಖದಲ್ಲಿ ನಗು ಮೂಡುವಂತೆ ಮಾಡುತ್ತಿದ್ದರು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ರವರು. ಕಾಮಿಡಿ ಟೈಮ್ ಗಣೇಶ್ ನಿಂದ ಗೋಲ್ಡನ್ ಸ್ಟಾರ್ ಗಣೇಶ್ ರವರೆಗಿನ ಪಯಣ ಖಂಡಿತವಾಗಿಯೂ ನೋಡಲು ಸುಂದರವಾಗಿದ್ದರೂ ಕೂಡ ಸಾಕಷ್ಟು ಕಷ್ಟ ಪಟ್ಟು ಪರಿಶ್ರಮದಿಂದ ಇಲ್ಲಿವರೆಗೆ ಬಂದಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ಕಿರುತೆರೆಗೂ ಕೂಡ ಸಾಕಷ್ಟು ವರ್ಷಗಳ ನಂಟಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಯಕನಟನಾದ ಮೇಲೆ ಕೂಡ ಸೂಪರ್ ಮಿನಿಟ್ ಎಂಬ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮವು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಇನ್ನು ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಿರೂಪಣೆಯಲ್ಲಿ ಮತ್ತೊಂದು ರಿಯಾಲಿಟಿ ಶೋ ಜೀ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲೇ ಬರಲಿದೆ. ಈಗಾಗಲೇ ಪ್ರೋಮೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ನಿಜ ಸ್ನೇಹಿತರೆ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಗ್ಯಾಂಗ್ ಎಂಬ ರಿಯಾಲಿಟಿ ಶೋ ಒಂದು ಪ್ರಾರಂಭವಾಗಲಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಹಿರಿತೆರೆಯ ಹಾಗೂ ಕಿರುತೆರೆಯ ಕಲಾವಿದರನ್ನು ಈ ಕಾರ್ಯಕ್ರಮಕ್ಕೆ ಕರೆಸಿಕೊಂಡು ಅವರ ಬಾಲ್ಯದ ದಿನಗಳನ್ನು ಹಾಗೂ ಸ್ನೇಹಿತರ ಹಾಗೂ ಅವರ ಇಷ್ಟದ ಸಮಯಗಳನ್ನು ಕೆದಕುವ ಹಾಗೂ ಅವರ ಜೊತೆಗೆ ತಮ್ಮದೇ ಆದ ರೀತಿಯಲ್ಲಿ ಸಂವಹನ ನಡೆಸುವ ಕಾರ್ಯವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾಡಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕಾಗಿ ಎಲ್ಲರೂ ಕಾಯುತ್ತಿದ್ದು ಅತಿಶೀಘ್ರದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Post Author: Ravi Yadav