ಬಿಗ್ ನ್ಯೂಸ್: ಮಹಾ ಎಡವಟ್ಟು ಮಾಡಿಕೊಂಡ ರಾಹುಲ್, ರಶೀದ್. ಮುಂದಿನ ಐಪಿಎಲ್ ನಿಂದ ಬ್ಯಾನ್ ಆಗುತ್ತಾರಾ ಘಟಾನುಘಟಿ ಪ್ಲೇಯರ್ಸ್. ನಡೆದದ್ದು ಏನು ಗೊತ್ತೇ??

ಬಿಗ್ ನ್ಯೂಸ್: ಮಹಾ ಎಡವಟ್ಟು ಮಾಡಿಕೊಂಡ ರಾಹುಲ್, ರಶೀದ್. ಮುಂದಿನ ಐಪಿಎಲ್ ನಿಂದ ಬ್ಯಾನ್ ಆಗುತ್ತಾರಾ ಘಟಾನುಘಟಿ ಪ್ಲೇಯರ್ಸ್. ನಡೆದದ್ದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇನ್ನೇನು ಐಪಿಎಲ್ ಆಕ್ಷನ್ ಸದ್ಯದಲ್ಲೇ ಪ್ರಾರಂಭವಾಗಿದೆ. ಕ್ರಿಕೆಟ್ ಲೋಕದ ಅತ್ಯಂತ ದೊಡ್ಡ ಹಬ್ಬವನ್ನು ವೀಕ್ಷಿಸಲು ಹಾಗೂ ಯಾವ ತಂಡದಲ್ಲಿ ಯಾವ ಆಟಗಾರರು ಸೇರಲಿದ್ದಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ. ಐಪಿಎಲ್ ಈ ಬಾರಿ ಆಕ್ಷನ್ ನಿಯಮದಂತೆ ಪ್ರತಿ ತಂಡಕ್ಕೂ ಕೂಡ 3 ಭಾರತೀಯ ಆಟಗಾರರನ್ನು ಹಾಗೂ ಒಬ್ಬ ವಿದೇಶಿ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಹೀಗಾಗಿ ಈ ಬಾರಿ ಫ್ರಾಂಚೈಸಿಗಳು ಕೂಡ ತಮಗಿಷ್ಟ ಇರುವಂತಹ ಆಟಗಾರರನ್ನು ರಿಟೈನ್ ಮಾಡಲು ಸರ್ಕಸ್ ನಡೆಸುತ್ತಿವೆ.

ಇನ್ನು ಈ ಹಿನ್ನಲೆಯಲ್ಲಿ ಸ್ಟಾರ್ ಆಟಗಾರರಾಗಿರುವ ಕೆ ಎಲ್ ರಾಹುಲ್ ಹಾಗೂ ರಶೀದ್ ಖಾನ್ ರವರು ಬ್ಯಾನ್ ಭೀತಿಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪಂಜಾಬ್ ತಂಡವು ಕೆಎಲ್ ರಾಹುಲ್ ರವರನ್ನು 16 ಕೋಟಿಗೆ ರೀಟೈನ್ ಮಾಡಲು ಸಿದ್ಧವಾಗಿತ್ತು. ಆದರೆ ರಾಹುಲ್ ರವರು ಮಾತ್ರ ಪಂಜಾಬ್ ತಂಡದಿಂದ ಮುಂದುವರೆಯಲು ಇಷ್ಟಪಟ್ಟಿರಲಿಲ್ಲ. ಹೀಗಾಗಿ ತಾವು ಮೆಗಾ ಆಕ್ಷನ್ ಗೆ ಭಾಗವಹಿಸುವುದಾಗಿ ಹೇಳಿದರು. ಇನ್ನು ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ರಶೀದ್ ಖಾನ್ ರವರು ಮೊದಲ ದರ್ಜೆಯ 16 ಕೋಟಿ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ತಾನು ಕೂಡಾ ಆಕ್ಷನ್ ನಲ್ಲಿ ಭಾಗವಹಿಸುತ್ತೇನೆ ಎಂಬುದಾಗಿ ತಿಳಿಸಿದರು. ಆದರೆ ಈಗ ಎರಡೂ ತಂಡಗಳು ಕೂಡ ಐಪಿಎಲ್ ಕಮಿಟಿಗೆ ಇಬ್ಬರು ಆಟಗಾರರ ವಿರುದ್ಧ ದೂರನ್ನು ನೀಡಿದೆ.

ಇದಕ್ಕೆ ಮುಖ್ಯ ಕಾರಣ ಆಗಿರೋದು ಕೆ ಎಲ್ ರಾಹುಲ್ ಹಾಗೂ ರಶೀದ್ ಖಾನ್ ಇಬ್ಬರೂ ಕೂಡ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ತಂಡದಲ್ಲಿ ಸೇರ್ಪಡೆಯಾಗಲು ಪ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದರ ಕುರಿತಂತೆ. ಐಪಿಎಲ್ ನಿಯಮಗಳ ಪ್ರಕಾರ ಆಟಗಾರರು ಹಳೆ ತಂಡದೊಂದಿಗೆ ಮಾತನಾಡಿ ಮೆಗಾ ಆಕ್ಷನ್ ನಲ್ಲಿ ಭಾಗವಹಿಸಬಹುದು. ಆದರೆ ಹೊಸ ತಂಡಗಳ ಜೊತೆಗೆ ಹರಾಜಿನ ಕುರಿತಂತೆ ಮಾತುಕತೆ ನಡೆಸುವಂತಿಲ್ಲ. ಒಂದು ವೇಳೆ ಈ ತರಹದ ಒಪ್ಪಂದಗಳನ್ನು ಮಾಡಿದ್ದೆ ಆದಲ್ಲಿ ಅವರಿಗೆ ಒಂದು ವರ್ಷದ ಐಪಿಎಲ್ ನಿಷೇಧ ಸಿಗುವ ಸಾಧ್ಯತೆ ಇದೆ. ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ಕೂಡ ನಮ್ಮ ಆಟಗಾರರು ಲಕ್ನೋ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡು ನಮ್ಮ ತಂಡದಿಂದ ಹೊರಗೆ ಹೋಗಿ ಅಕ್ಷನ್ ನಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದಾಗಿ ದೂರನ್ನು ನೀಡಿ. ಇನ್ನು ಈ ಹಿಂದೆ ಜಡೇಜಾ ರವರು ಕೂಡ ರಾಜಸ್ಥಾನ್ ರಾಯಲ್ಸ್ ನಲ್ಲಿ ಇದ್ದಾಗ ಬೇರೆ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡು ಹೆಚ್ಚು ಹಣ ನೀಡಿದರೆ ನಿಮ್ಮ ತಂಡದಲ್ಲಿ ಆಡುತ್ತೇನೆ ಎಂದು ಹೇಳಿದಾಗ ಇದು ಬೆಳಕಿಗೆ ಬಂದು 2010 ರಲ್ಲಿ ಅವರು ಐಪಿಎಲ್ ನಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.