ಮಂಗಳ ಗೌರಿ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ, ಗಗನ್ ರವರು ಧಾರವಾಹಿ ಬಿಟ್ಟ ಮೇಲೆ ಮತ್ತೊಂದು ನಿರಾಸೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ವರ್ಷಗಳಿಂದ ಕನ್ನಡದ ಖ್ಯಾತ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರವಾಹಿಯು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುವಲ್ಲಿ ಪ್ರತಿವಾರವೂ ಯಶಸ್ವಿಯಾಗುತ್ತಿದೆ. ಅಲ್ಲಿ ಇಲ್ಲಿ ಸಾಕಷ್ಟು ಮಾತುಗಳು ಕೇಳಿ ಬಂದರೂ ಕೂಡ ಪ್ರತಿ ವಾರ ಬಿಡುಗಡೆಯಾಗುವ ಟಿಆರ್ಪಿ ಲಿಸ್ಟಿನಲ್ಲಿ ಮಂಗಳ ಗೌರಿ ಮದುವೆ ದಾರಾವಾಹಿ ಬಹುತೇಕ ಬಾರಿ ಟಾಪ್ ಐದರ ಧಾರವಾಹಿಗಳ ಸಾಲಿನಲ್ಲಿ ಕಂಡುಬರುತ್ತದೆ.

ಕಥೆಯ ಕುರಿತು ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ಕೇಳಿ ಬಂದರೂ ಕೂಡ ಗೃಹಿಣಿಯರ ನೆಚ್ಚಿನ ಧಾರಾವಾಹಿಯಾಗಿ ಮಂಗಳ ಗೌ ರಿಮದುವೆ ದಾರಾವಾಹಿ ಮೂಡಿಬಂದಿದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಮಂಗಳ ಗೌರಿ ಮದುವೆ ದಾರಾವಾಹಿಯೂ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದ್ದು ಇಂದಿಗೂ ಕೂಡ ಹಲವಾರು ಜನರ ಅಚ್ಚುಮೆಚ್ಚಿನ ಧಾರವಾಹಿಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಪ್ರತಿ ವಾರ ಬಿಡುಗಡೆಯಾಗುವ ಟಿಆರ್ಪಿ.

ಇನ್ನು ಈ ದಾರವಾಹಿ ಅಭಿಮಾನಿಗಳಿಗೆ ಇದೀಗ ಕಹಿ ಸುದ್ದಿ ಕೇಳಿ ಬರುವ ಸಾಧ್ಯತೆ ಹೆಚ್ಚಾಗಿದೆ, ಹೌದು ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಗಳ ಗೌರಿ ಮದುವೆ ಧಾರವಾಹಿ ಇಂದ ಈಗಾಗಲೆ ನಟ ಗಗನ್ ಚೆನ್ನಪ್ಪ ರವರು ದೂರ ಸರಿದಿದ್ದಾರೆ, ಸಿನಿಮಾಗಳಲ್ಲಿ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಕಾರಣ ಎರಡನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಧಾರವಾಹಿಯಿಂದ ದೂರ ಸರಿದಿರುವ ವೇಳೆಯಲ್ಲಿ, ಇದೀಗ ಹೊಸ ಧಾರವಾಹಿಗೆ ಸಮಯ ಮಾಡಿಕೊಡುವ ಸಲುವಾಗಿ ಮಂಗಳ ಗೌರಿ ಮದುವೆ ದಾರಾವಾಹಿ ಕಥೆಯನ್ನು ಅಂತ್ಯ ಗೊಳಿಸಲಾಗುತ್ತಿದೆ ಎಂಬ ಮಾಹಿತಿ ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಂಡು ಮಂಗಳ ಗೌರಿ ಮದುವೆ ಧಾರವಾಹಿಯನ್ನು ಮಧ್ಯಾಹ್ನದ ಸಮಯದಲ್ಲಿ ಕೂಡ ಪ್ರಸಾರ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಧಾರಾವಾಹಿ ತಂಡ ಆಲೋಚನೆ ನಡೆಸುತ್ತಿದೆ ಎಂಬ ಮಾಹಿತಿ ಕೂಡ ಕೇಳಿ ಬಂದಿದೆ. ಇವೆರಡರಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಕುರಿತು ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ

Post Author: Ravi Yadav