ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಪುನೀತ್ ರಾವರಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡು ಸುದೀಪ್. ಮಾಡಿದ್ದೇನು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಅಕಾಲಿಕವಾಗಿ ಕಳೆದುಕೊಂಡ ನಂತರ ಇಡೀ ಕನ್ನಡ ಚಿತ್ರರಂಗವೇ ಅವರಿಗಾಗಿ ಮಮ್ಮಲ ಮರುಗಿತ್ತು. ಪುನೀತ್ ರಾಜಕುಮಾರ್ ಅವರ ಮರಣದ ನಂತರ ಅವರು ಮಾಡಿರುವ ಎಲ್ಲಾ ಸಾಮಾಜಿಕ ಕಾರ್ಯಗಳ ಕುರಿತಂತೆ ಇಡೀ ಕರ್ನಾಟಕ ಮಾತ್ರವಲ್ಲದೆ ಜಾಗತಿಕವಾಗಿ ಇದರ ಕುರಿತಾಗಿ ಎಲ್ಲರೂ ಕೂಡ ಪುನೀತ್ ರಾಜಕುಮಾರ್ ರವರಿಗೆ ಕಂಬನಿ ಮಿಡಿದಿದ್ದಾರೆ.

ಇನ್ನು ಪುನೀತ್ ರಾಜಕುಮಾರ್ ರವರ ಮರಣದ ನಂತರ ಪುನೀತ್ ರಾಜಕುಮಾರ್ ರವರು ಮಾಡಿಕೊಂಡು ಹೋಗುತ್ತಿದ್ದ ಎಲ್ಲಾ ಸಾಮಾಜಿಕ ಕಾರ್ಯಗಳನ್ನು ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಪುನೀತ್ ರಾಜಕುಮಾರ್ ರವರು ನೋಡಿಕೊಳ್ಳುತ್ತಿದ್ದ 1800 ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತಮಿಳು ನಟ ವಿಶಾಲ್ ರವರು ಮುಂದೆ ಬಂದು ಅದರ ಕುರಿತಂತೆ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪುನೀತ್ ರಾಜಕುಮಾರ್ ಅವರ ನೋಡಿಕೊಳ್ಳುತ್ತಿದ್ದ ಎಲ್ಲಾ ಗೋಶಾಲೆಗಳನ್ನು ನಾನೇ ನೋಡಿಕೊಳ್ಳುತ್ತೇನೆ ಎಂಬುದಾಗಿ ಗೆಳೆಯನಿಗೆ ಗೌರವಪೂರ್ವಕ ವಿದಾಯವನ್ನು ಹೇಳಿದ್ದಾರೆ.

ಇನ್ನು ಇದೇ ಮಾದರಿಯಲ್ಲಿ ಅಪ್ಪು ಅವರ ಬಾಲ್ಯದ ಗೆಳೆಯ ನಾಗಿರುವ ಕಿಚ್ಚ ಸುದೀಪ್ ರವರು ಕೂಡ ಒಂದು ದೊಡ್ಡ ನಿರ್ಧಾರವನ್ನು ಮಾಡಿದ್ದಾರೆ. ಅಪ್ಪು ಹಾಗೂ ಕಿಚ್ಚ ಇಬ್ಬರೂ ಕೂಡ ಚಿಕ್ಕವಯಸ್ಸಿನಿಂದಲೂ ಕೂಡ ಪರಸ್ಪರ ಪರಿಚಿತರು. ಅದೇ ಸ್ನೇಹವನ್ನು ಚಿತ್ರರಂಗಕ್ಕೆ ಬಂದ ಮೇಲೆ ಕೂಡ ಮುಂದುವರಿಸಿಕೊಂಡು ಹೋಗಿದ್ದರು. ಇನ್ನು ಆಗಲಿರುವ ತಮ್ಮ ಗೆಳೆಯ ನಾಗಿರುವ ಪುನೀತ್ ರವರ ನೆನಪಿನಲ್ಲಿ ಕಿಚ್ಚ ಸುದೀಪ್ ರವರು ಮೈಸೂರಿನ 500 ಬಡಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಖರ್ಚು ವೆಚ್ಚವನ್ನು ನಾನೇ ನೋಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ಅಧಿಕೃತವಾಗಿ ಎಲ್ಲೂ ಕೂಡ ಸುದ್ದಿ ಆಗದಿದ್ದರೂ ಕೂಡ ಮೂಲಗಳ ಪ್ರಕಾರ ಸುದೀಪ್ ರವರು ಈ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಿಚ್ಚ ಸುದೀಪ್ ರವರ ಈ ಕೆಲಸಕ್ಕೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.