ವಿಲಿಯಮ್ಸನ್ ವಿಕೇಟ್ ಪಡೆಯಲು ಭಾರತ ತಂಡ ಹಾಕಿಕೊಂಡಿರುವ ಮೂರು ಯೋಜನೆಗಳು ಯಾವವು ಗೊತ್ತೇ?? ಎಷ್ಟೆಲ್ಲಾ ಪ್ಲಾನ್ ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿ ಇದೀಗ ಆರಂಭವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಠಿಯಿಂದ ಈ ಸರಣಿ ಮಹತ್ವದಾಗಿದ್ದು ಎರಡು ಟೆಸ್ಟ್ ಗಳನ್ನ ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಲು ನಿರ್ಧರಿಸಿದೆ. ಭಾರತಕ್ಕೆ ಹೆಚ್ಚು ತೊಂದರೆ ಇರುವುದು ಅದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ರವರಿಂದ. ಉಪ ಖಂಡದ ಪಿಚ್ ಗಳಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುವ ವಿಲಿಯಮ್ಸನ್ ವಿಕೇಟ್ ಅತಿ ಮಹತ್ವದಾಗಿದ್ದು, ಅವರ ವಿಕೇಟ್ ಬೇಗನೆ ಪಡೆದರೇ, ಭಾರತ ತಂಡದ ಕೈ ಮೇಲಾಗುವ ಸಾಧ್ಯತೆ ಇದೆ. ಅದಕ್ಕಾಗಿ ಭಾರತ ತಂಡ ಯೋಜನೆಗಳನ್ನು ಹಾಕಿಕೊಂಡಿದೆ. ಬನ್ನಿ ಆ ಯೋಜನೆಗಳನ್ನ ತಿಳಿಯೋಣ.

ಮೊದಲನೆಯದಾಗಿ ಶಾರ್ಟ್ ಪಿಚ್ – ಕೇನ್ ವಿಲಿಯಮ್ಸನ್ ಶಾರ್ಟ್ ಪಿಚ್ ಬಾಲ್ ಗಳನ್ನ ಎದುರಿಸುವಲ್ಲಿ ಬಹಳಷ್ಟು ತಿಣುಕಾಡುತ್ತಾರೆ. ಟೆಸ್ಟ್ ಕ್ರಿಕೇಟ್ ನಲ್ಲಿ ಕೇನ್ ಬಹಳಷ್ಟು ಭಾರಿ ಪೆವಿಲಿಯನ್ ಗೆ ಮರಳಿದ್ದೇ ಶಾರ್ಟ್ ಪಿಚ್ ಬಾಲ್ ಗಳನ್ನು ಹಾಕಿದಾಗ‌. ಹಾಗಾಗಿ ಭಾರತೀಯ ವೇಗದ ಬೌಲರ್ ಗಳು, ಕೇನ್ ವಿಲಿಯಮ್ಸನ್ ಕ್ರೀಸ್ ಗೆ ಬಂದಾಗ ಹೆಚ್ಚು ಶಾರ್ಟ್ ಪಿಚ್ ಬಾಲ್ ಗಳನ್ನು ಹಾಕಲು ನಿರ್ಧರಿಸಿದ್ದಾರಂತೆ.

ಎರಡನೆಯದಾಗಿ ಆರ್.ಅಶ್ವಿನ್ ಬೌಲಿಂಗ್ ಮಾಡುವುದು – ಕೇನ್ ವಿಲಿಯಮ್ಸನ್ ರನ್ನ ಟೆಸ್ಟ್ ಕ್ರಿಕೇಟ್ ನಲ್ಲಿ ಅತಿ ಹೆಚ್ಚು ಭಾರಿ ಔಟ್ ಮಾಡಿರುವುದು ಎಂದರೇ ಅದು ಆರ್.ಅಶ್ವಿನ್. ಹೀಗಾಗಿ ಅವರು ಬೌಲಿಂಗ್ ಗೆ ಬಂದರೇ, ಕೇನ್ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಿಸಿ ವಿಕೇಟ್ ಚೆಲ್ಲಬಹುದು. ಹಾಗಾಗಿ ಕೇನ್ ಬ್ಯಾಟಿಂಗ್ ಗೆ ಬಂದಾಗ, ಒಂದು ಬದಿಯಲ್ಲಿ ಅಶ್ವಿನ್ ಸತತವಾಗಿ ದಾಳಿ ನಡೆಸುವ ಸಾಧ್ಯತೆ ಇದೆ.

ಮೂರನೆಯದಾಗಿ ವೇಗದ ಬೌಲರ್ ಗಳ ಬಳಕೆ – ಕೇನ್ ಕ್ರೀಸ್ ಗೆ ಬಂದ ತಕ್ಷಣವೇ ಆಕ್ರಮಣಕಾರಿಯಾಗುವುದಿಲ್ಲ. ನೆಲೆ ನಿಲ್ಲಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ.ಹಾಗಾಗಿ ಅಂತಹ ಸಮಯದಲ್ಲಿ ವೇಗ, ಬೌನ್ಸ್ ಮತ್ತು ಸ್ವಿಂಗ್ ಗೆ ನೆರವಾಗುತ್ತಿದ್ದರೇ, ವೇಗದ ಬೌಲರ್ ಗಳ ಬಳಕೆಯನ್ನು ಮಾಡಬೇಕು. ಆಗ ಕೇನ್ ವಿಕೇಟ್ ಚೆಲ್ಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೇನ್ ಕ್ರೀಸ್ ಗೆ ಬಂದಾಗ ಒಂದು ಕಡೆ ವೇಗ, ಮತ್ತೊಂದು ಕಡೆ ಅಶ್ವಿನ್ ದಾಳಿಗಿಳಿಯುವದನ್ನ ನಾವು ಎದುರು ನೋಡಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav