ಮತ್ತೊಮ್ಮೆ ಬೀದಿಗೆ ಬಂತು ಕಾಂಗ್ರೆಸ್ ಜಗಳ, ಸಿದ್ದು ರವರಿಗೆ ಬಾರಿ ಮುಜುಗರ, ಡಿಕೆಶಿ ಕೈವಾಡ ಎಂದ ಸಿದ್ದು ಫ್ಯಾನ್ಸ್, ಏನು ಮಾಡಿದ್ದಾರೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಮುಂದಿನ ಭಾರಿ ಏನಾದರೂ ಮಾಡಿ ಬಿಜೆಪಿ ಸೋಲಿಸಿ ಅಧಿಕಾರಕ್ಕೇರಲು ಕಾಂಗ್ರೇಸ್ ಪಕ್ಷ ಸಿದ್ದತೆ ನಡೆಸುತ್ತಿರುವ ವೇಳೆಯಲ್ಲಿಯೇ ಈಗ ಕಾಂಗ್ರೇಸ್ ನ ಬಣ ಜಗಳ ಈಗ ಬೀದಿಗೆ ಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ಜಗಳ ನಾಯಕರಿಗೆ ಇರುಸು ಮುರುಸು ತಂದಿದ್ದು, ನಾಯಕರಿಗೆ ತೀವ್ರ ಮುಜುಗರ ತಂದಿದೆ. ಇದರಿಂದ ಪರೋಕ್ಷವಾಗಿ ಬಿಜೆಪಿಗೆ ಲಾಭ ಹೆಚ್ಚಾಗುತ್ತಿದೆ.

ನಿನ್ನೆ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಭಾಷಣಕ್ಕೆ ಸಿದ್ದರಾಮಯ್ಯ ಬಂದಾಗ, ಅಲ್ಲಿದ್ದ ಕಾರ್ಯಕರ್ತರು ಜೋರಾಗಿ ಡಿಕೆ,ಡಿಕೆ ಎಂದು ಘೋಷಣೆ ಕೂಗತೊಡಗಿದರು. ಸಿದ್ದರಾಮಯ್ಯ ಮನವಿ ಮಾಡಿದರೂ, ಯಾರು ಸುಮ್ಮನಾಗಲಿಲ್ಲ. ಕೊನೆಗೆ ಸಿದ್ದರಾಮಯ್ಯ ಭಾಷಣವನ್ನ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದರು. ಈ ನಡುವೆ ಡಿ.ಕೆ.ಶಿವಕುಮಾರ್ ಗಲಾಟೆ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದರೂ ಸುಮ್ಮನಾಗಲಿಲ್ಲ. ಡಿಕೆ ಎಂದು ಘೋಷಣೆ ಕೂಗುತ್ತಿದ್ದವರು, ಜಮೀರ್ ಜಮೀರ್ ಎಂದು ಫೋಟೋ ತೋರಿಸತೊಡಗಿದರು. ಇದು ಸಹ ಈಗ ಅನುಮಾನಕ್ಕೆ ಕಾರಣವಾಗಿದೆ.

ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕಕ್ಕೆ ಜಮೀರ್ ಹಾಗೂ ಹ್ಯಾರಿಸ್ ಬಣಗಳು ಪ್ರಯತ್ನ ನಡೆಸುತ್ತಿದ್ದು ಈ ಗಲಾಟೆ ಹಿಂದೆ ಈ ಬಣಗಳು ಇರಬಹುದಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜಮೀರ್ ಅಹಮದ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರ ಹೆಸರನ್ನ ಹೈಕಮಾಂಡ್ ಮಟ್ಟದಲ್ಲಿ ಹಾಳು ಮಾಡಲು ಇಂತಹ ಷಡ್ಯಂತ್ರವನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಹ್ಯಾರಿಸ್ ಹಾಗೂ ಜಮೀರ್ ಅಹಮದ್ ಬಣಗಳ ನಡುವಿನ ಬೀದಿ ಜಗಳ ಕಾಂಗ್ರೇಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿದೆ. ಜಮೀರ್ ಅಹಮದ್ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡರೇ, ಹ್ಯಾರಿಸ್ ಸದ್ಯ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ, ಅದೇ ಕಾರಣಕ್ಕಾಗಿ ಇದಕ್ಕೆ ಡಿಕೆಶಿ ರವರೆ ಕಾರಣ ಎಂದು ಸಿದ್ದು ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav