ಕನ್ನಡದ ಮಿಸ್ಟರ್ ಪರ್ಫೆಕ್ಟ್ ರಮೇಶ್ ರವರ ಹೊಸ ಚಿತ್ರವನ್ನು ಕಂಡು ಪರ್ಫೆಕ್ಟ್ ಫಿಲ್ಮ್ “100” ಎಂದ ಪ್ರೇಕ್ಷಕ ಮಹಾಪ್ರಭು.

ನಮಸ್ಕಾರ ಸ್ನೇಹಿತರೇ ಸಿನಿಮಾ ಅಂದ್ಮೇಲೆ ಒಂದಲ್ಲ ಒಂದು ಕೊರತೆಯನ್ನು ಪ್ರೇಕ್ಷಕ ಮಹಾಪ್ರಭು ಕಂಡು ಹಿಡಿಯುತ್ತಾನೆ. ಆದರೆ ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಎಮ್ ರಮೇಶ್ ರೆಡ್ಡಿ ನಿರ್ಮಾಣದ ರಮೇಶ್ ಅರವಿಂದ್ ನಿರ್ದೇಶನದ ಹಾಗೂ ನಾಯಕ ನಟನಾಗಿ ನಟಿಸಿರುವ 100 ಚಿತ್ರದ ಕುರಿತಂತೆ ಕನ್ನಡ ಪ್ರೇಕ್ಷಕರು ಸಂಪೂರ್ಣ ಪ್ರಸನ್ನ ರಾಗಿದ್ದಾರೆ.

ಚಿತ್ರ ಸರ್ವ ವಿಧದಲ್ಲೂ ಕೂಡ ಸುಗುಣ ಸಂಪನ್ನವಾಗಿದೆ ಎಂಬುದಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಸ್ಯೆಯೊಂದರ ಎಳೆಯನ್ನು ಹೊಂದಿರುವ 100 ಚಿತ್ರ ಮನೋರಂಜನೆ ವಿಷಯದಲ್ಲೂ ಕೂಡ ಪರ್ಫೆಕ್ಟ್ ಎಂಬುದಾಗಿ ಪ್ರೇಕ್ಷಕರು ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಜೊತೆಗೆ ಕ್ಲೋಸ್ ಆಗಿ ನಂತರ ಅವರ ಖಾಸಗಿ ಜೀವನದಲ್ಲಿ ತೊಂದರೆ ಇಡುವ ಹೆಣ್ಣುಬಾಕರಿಗೆ ಯಾವ ರೀತಿಯ ಶಾಸ್ತಿ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ನೀವು ಕೂಡ ನೋಡಬಹುದಾಗಿದೆ. ಇನ್ನು 100 ಚಿತ್ರ ನೀವಂದುಕೊಂಡಷ್ಟು ಸುಲಭವಾಗಿಲ್ಲ. ಚಿತ್ರದ ಪ್ರತಿ ಹಂತಕ್ಕೂ ಕೂಡ ನೀವು ಊಹಿಸಲೂ ಸಾಧ್ಯವಾಗದಷ್ಟು ಟ್ವಿಸ್ಟ್ ಗಳನ್ನು ಹೊಂದಿದೆ.

ಚಿತ್ರದ ಪ್ರತಿಯೊಂದು ಅಂಶಗಳು ಕೂಡ ಪರಿಪೂರ್ಣವಾಗಿ ಪ್ರೇಕ್ಷಕರಿಗೆ ಅನುಗುಣವಾಗುವಂತೆ ಮೂಡಿಬಂದಿದೆ. ಸಂಗೀತ ಕ್ಯಾಮರಾ ಸಂಕಲನ ಸಂಭಾಷಣೆ ಹೀಗೆ ಎಲ್ಲಾ ವಿಚಾರದಲ್ಲೂ ಕೂಡ ಚಿತ್ರ ಫುಲ್ ಮಾರ್ಕ್ಸ್ ನ್ನು ಪಡೆದಿದೆ. ಇನ್ನು ನಟರಾಗಿರುವ ರಮೇಶ್ ಅರವಿಂದ್ ರಚಿತಾ ರಾಮ್ ಪೂರ್ಣ ಪ್ರಕಾಶ್ ಬೆಳವಾಡಿ ಶೋಬ್ರಾಜ್ ಹೇಗೆ ಎಲ್ಲರೂ ಕೂಡ ತಮ್ಮ ಪಾತ್ರಗಳನ್ನು ಅದಕ್ಕೆ 100% ನ್ಯಾಯ ಸಿಗುವಂತೆ ನಟಿಸಿದ್ದಾರೆ. ಹಲವಾರು ವರ್ಷಗಳಿಂದ ಒಂದೊಳ್ಳೆ ಕಥೆ ಹೊಂದಿರುವ ಚಿತ್ರಕ್ಕಾಗಿ ಕಾಯುತ್ತಿದ್ದ ಕನ್ನಡ ಪ್ರೇಕ್ಷಕರಿಗೆ ರಮೇಶ್ ಅರವಿಂದ್ ರವರು ವಿಶೇಷವಾಗಿ ಈ ಚಿತ್ರವನ್ನು ತಯಾರಿಸಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಮನರಂಜನೆ ಜೊತೆಗೆ ಮೆಸೇಜ್ ಕೂಡ ನೀಡಿರುವ ರಮೇಶ್ ಅರವಿಂದ್ ರವರ ನಿರ್ದೇಶನದ ಚಾಕಚಕ್ಯತೆಗೆ ಸಲಾಂ ಹೊಡೆಯಲೇ ಬೇಕು. ರಮೇಶ್ ಅರವಿಂದ್ ರವರ ನಿರ್ದೇಶನದಲ್ಲಿ ಇಂತಹ ಚಿತ್ರಗಳು ಇನ್ನೂ ಕೂಡ ಮುಂದೆ ಹೆಚ್ಚೆಚ್ಚು ಮೂಡಿ ಬರಲಿ ಎಂಬುದೇ ಕನ್ನಡಿಗರ ಆಶಯವಾಗಿದೆ. ನಮ್ಮ ಕಡೆಯಿಂದ ಚಿತ್ರಕ್ಕೆ ಫುಲ್ ಮಾರ್ಕ್ಸ್ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav